ನಿರ್ಮಾಪಕ ಅಣಜಿ ನಾಗರಾಜ್, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಒಟ್ಟಾಗಿ 2012ರಲ್ಲಿ ‘ಭೀಮ ತೀರದಲ್ಲಿ’ (ಭೀಮ ತೀರದಳ್ಳಿ) ಸಿನಿಮಾ ಮಾಡಿದರು. ಅವರ ಜೊತೆ ದರ್ಶನ್ ಆಪ್ತವಾಗಿದ್ದರೂ ಕೂಡ ಆ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು ದುನಿಯಾ ವಿಜಯ್. ಹಾಗದ್ರೆ, ದರ್ಶನ್ (ದರ್ಶನ್) ಜೊತೆ ಈ ಸಿನಿಮಾವನ್ನು ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಓಂ ಪ್ರಕಾಶ್ ರಾವ್ ಮತ್ತು ಅಣಜಿ ನಾಗರಾಜ್ ಅವರು ಉತ್ತರ ನೀಡಿದ್ದಾರೆ. ‘ಈ ಕಥೆ ತಂದಿದ್ದೇ ದುನಿಯಾ ವಿಜಯ್. ಪಾತ್ರಕ್ಕಾಗಿ ವಿಜಯ್ ಅವರು ಅದಾಗಲೇ ಡ್ರೆಸ್ ಹೊಲಿಸಿಕೊಂಡಿದ್ದರು. ಅವರು ಬಹಳ ಇಷ್ಟಪಟ್ಟು ಮಾಡಿದ ಸಿನಿಮಾ ಇದು. ದುನಿಯಾ ವಿಜಯ್ ಅವರಿಗೆ ಈ ಪಾತ್ರ ಸಿಕ್ಕಿತು’ ಎಂದು ನಿರ್ಮಾಪಕ ಅಣಜಿ ನಾಗರಾಜ್ ಹೇಳಿದ್ದಾರೆ. ಈ ಬಾರಿ ತೆಲುಗಿನಲ್ಲಿ ಕೂಡ ಈ ಸಿನಿಮಾವನ್ನು ಬಿಡುಗಡೆ ಮಾಡಲು ಅವರು ನಿರ್ಧರಿಸಿದ್ದಾರೆ. ತೆಲುಗಿನಲ್ಲಿ ‘ಕಡಪ’ ಎಂದು ಶೀರ್ಷಿಕೆ ಇಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.