Headlines

ಪೂರ್ಣ ಪ್ರಮಾಣದಲ್ಲಿ ‘ಧುರಂಧರ್ 2’ ಟಿಕೆಟ್ ಬುಕಿಂಗ್ ವಿಳಂಬ: ಹಲವು ಕಾರಣ

ಪೂರ್ಣ ಪ್ರಮಾಣದಲ್ಲಿ ‘ಧುರಂಧರ್ 2’ ಟಿಕೆಟ್ ಬುಕಿಂಗ್ ವಿಳಂಬ: ಹಲವು ಕಾರಣ


ಪೂರ್ಣ ಪ್ರಮಾಣದಲ್ಲಿ 'ಧುರಂಧರ 2' ಟಿಕೆಟ್ ಬುಕಿಂಗ್ ವಿಳಂಬ: ಹಲವು ಕಾರಣ

ಭಾರತೀಯ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಧುರಂಧರ: ದಿ ರಿವೆಂಜ್’ (ಧುರಂಧರ: ದಿ ರಿವೆಂಜ್) ಬಿಡುಗಡೆಗೆ ಕೆಲವೇ ದಿನ ಬಾಕಿ ಇದೆ. ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಈ ಸಿನಿಮಾದ ಟ್ರೇಲರ್ ಅನ್ನು ಧೂಳೀಪಟ ಮಾಡಿದೆ. ಸದ್ಯಕ್ಕೆ ಪೇಯ್ಡ್ ಪ್ರೀಮಿಯರ್ ಶೋ ಬುಕಿಂಗ್ ಮಾತ್ರ ಶುರುವಾಗಿದೆ. ಅದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ‘ಧುರಂಧರ 2’ (ಧುರಂಧರ 2) ಸಿನಿಮಾದ ಟಿಕೆಟ್ ಬುಕಿಂಗ್ ಆರಂಭಿಸಲು ವಿಳಂಬವಾಗಿದೆ. ಅದಕ್ಕೆ ಒಂದಷ್ಟು ಕಾರಣಗಳಿವೆ.

ಮಾರ್ಚ್ 18 ರಂದು ಸಂಜೆ 5 ಗಂಟೆಯಿಂದ ಚಿತ್ರದ ಪೇಯ್ಡ್ ಪ್ರಿವ್ಯೂಗಳು ಪ್ರಾರಂಭವಾಗಲಿವೆ. ಈ ಪ್ರದರ್ಶನಗಳ ಟಿಕೆಟ್ ದರ ಗಗನಕ್ಕೇರಿದ್ದರೂ ದೆಹಲಿ, ಮುಂಬೈ ಬೆಂಗಳೂರು ಮುಂತಾದ ನಗರಗಳಲ್ಲಿ ಟಿಕೆಟ್‌ಗಳು ಬಿಸಿ ಬಿಸಿ ಕಜ್ಜಾಯದಂತೆ ಮಾರಾಟವಾಗುತ್ತಿವೆ. ಆದರೆ, ವಾರಾಂತ್ಯದ ಸಾಮಾನ್ಯ ಪ್ರದರ್ಶನಗಳ ಬುಕಿಂಗ್ ಇನ್ನೂ ಓಪನ್ ಆಗಿಲ್ಲ.

ಸಿನಿಮಾ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್’ ಚಿತ್ರಮಂದಿರಗಳಿಂದ ಒಂದು ಕಠಿಣ ಬೇಡಿಕೆ ಇಟ್ಟಿದೆ. ಮೊದಲ 4 ವಾರಗಳ ಕಾಲ ಕೇವಲ ‘ಧುರಂಧರ್ 2’ ಚಿತ್ರವನ್ನೇ ಪ್ರದರ್ಶಿಸಬೇಕು ಮತ್ತು ಬೇರೆ ಯಾವುದೇ ಸಿನಿಮಾಗಳಿಗೆ ಹಂಚುಬಾರದು ಎಂಬುದು ಅವರ ಶರತ್ತು. ಆದರೆ, ಈ ಚಿತ್ರ ಬಿಡುಗಡೆಯಾದ 4ನೇ ವಾರದಲ್ಲಿ ಅಕ್ಷಯ್ ಕುಮಾರ್ ಅವರ ‘ಭೂತ್ ಬಾಂಗ್ಲಾ’ ಸಿನಿಮಾ ತೆರೆಗೆ ಬರಲಿದೆ. ಹೀಗಾಗಿ, ಚಿತ್ರಮಂದಿರಗಳ ಅಕ್ಷಯ್ ಚಿತ್ರಕ್ಕೆ ಪ್ರದರ್ಶನ ನೀಡಲು ಬಯಸಿದೆ, ಈ ಕುರಿತು ತಿಕ್ಕಾಟ ನಡೆಯುತ್ತಿದೆ.

ವಿತರಕರ ಜೊತೆ ಲಾಭದ ಹಂಚಿಕೆಯಲ್ಲಿ ಮಾತುಕಥೆ ಅಂತಿಮವಾಗಿಲ್ಲ. ‘ಧುರಂಧರ’ ಮೊದಲ ಭಾಗವು ನಿಧಾನವಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಆಗ ವಿತರಕರಿಗೆ ಸರಿಯಾದ ಲಾಭದ ಪಾಲು ಸಿಕ್ಕಿರಲಿಲ್ಲ. ಆದ್ದರಿಂದ, ಈ ಬಾರಿ ವಿತರಕರು ಹೆಚ್ಚಿನ ಶೇಕಡವಾರು ಲಾಭದ ಪಾಲನ್ನು ಕೇಳುತ್ತಿದ್ದಾರೆ. ಈ ಮಾತುಕತೆಗಳು ಇತ್ಯರ್ಥವಾಗದ ಕಾರಣ ಪೂರ್ಣ ಪ್ರಮಾಣದ ಬುಕಿಂಗ್ ವಿಳಂಬವಾಗಿದೆ.

ಇದನ್ನೂ ಓದಿ: ಅಡ್ವಾನ್ಸ್ ಬುಕಿಂಗ್ ನಿಂದ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಧುರಂಧರ 2’; ಹೊಸ ದಾಖಲೆ

ಪೂರ್ಣ ಪ್ರಮಾಣದಲ್ಲಿ ಬುಕಿಂಗ್ ಪ್ರಾರಂಭದ ಕಾರಣ, ಪ್ರದರ್ಶನವು ಅನಿವಾರ್ಯವಾಗಿ ಹೆಚ್ಚಿನ ಹಣ ಕೊಟ್ಟು ಪೇಯ್ಡ್ ಪ್ರಿವ್ಯೂಗಳ ಟಿಕೆಟ್ ಖರೀದಿಸುತ್ತಿದೆ. ಇದು ಪ್ರಿವ್ಯೂ ಪ್ರದರ್ಶನಗಳಿಗೆ ಲಾಭ ತಂದರೂ, ಸಾಮಾನ್ಯ ಪ್ರದರ್ಶನಕ್ಕೆ ಹೊರೆಯಾಗುತ್ತಿದೆ. ಒಟ್ಟಿನಲ್ಲಿ ‘ಧುರಂಧರ 2’ ಸಿನಿಮಾದಿಂದ ಬಾಕ್ಸ್ ಆಫೀಸ್ ನಲ್ಲಿ ಹಣದ ಹೊಳೆ ಹರಿಯುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *