Headlines

ಕರೆನ್ಸಿ ಇಲ್ಲ, ದೊಡ್ಡ ಸೇನೆ ಇಲ್ಲ, ಕಳ್ಳಕಾಕರಿಲ್ಲ; ರಾತ್ರಿ ಮನೆಗಳಿಗೆ ಬೀಗ ಹಾಕಲ್ಲ; ಜಗತ್ತಿನಲ್ಲಿದೆ ಇಂಥದ್ದೂ ಒಂದು ದೇಶ

ಕರೆನ್ಸಿ ಇಲ್ಲ, ದೊಡ್ಡ ಸೇನೆ ಇಲ್ಲ, ಕಳ್ಳಕಾಕರಿಲ್ಲ; ರಾತ್ರಿ ಮನೆಗಳಿಗೆ ಬೀಗ ಹಾಕಲ್ಲ; ಜಗತ್ತಿನಲ್ಲಿದೆ ಇಂಥದ್ದೂ ಒಂದು ದೇಶ


ನೀವು ಎಂಥ ಜಾಗದಲ್ಲಿ ವಾಸಿಸಲು ಇಷ್ಟಪಡುತ್ತೀರಿ…? ಯಾವ ಭಯವೂ ಇಲ್ಲದೆ ಮುಕ್ತವಾಗಿರುವ, ಅತ್ಯಂತ ಸುರಕ್ಷಿತ ಸ್ಥಳದಲ್ಲಿ, ಮತ್ತು ಅತ್ಯಂತ ಶ್ರೀಮಂತ ಪ್ರದೇಶದಲ್ಲಿ ಸುಖವಾಗಿ ಬದುಕಬೇಕೆಂಬ ಕನಸು ಎಲ್ಲರಿಗೂ ಇರುತ್ತದೆ. ನೀವು ಅಂಥ ಕನಸುಗಾರರಾಗಿದ್ದರೆ ನಿಮಗೆ ಸೂಕ್ತವಾಗುವ ದೇಶವೊಂದು ಇದೆ. ಇದು ಯೂರೋಪ್ನಲ್ಲಿ ಬಹಳ ಪುಟ್ಟದಾದ ಲೀಕ್ಟನ್ ಸ್ಟೀನ್ ದೇಶ (ಲಿಚ್ಟೆನ್ಸ್ಟೀನ್). ವಿಶ್ವದಲ್ಲಿ ಅತಿಹೆಚ್ಚು ತಲಾದಾಯ ಹೊಂದಿರುವ ದೇಶಗಳ ಮೊದಲ ಸಾಲಿನಲ್ಲಿ ಇದು ಬರುತ್ತದೆ.

ಸ್ವಿಟ್ಜರ್ಲ್ಯಾಂಡ್ ಮತ್ತು ಆಸ್ಟ್ರಿಯಾ ನಡುವೆ ಇರುವ ಲೀಕ್ಟನ್ ಸ್ಟೀನ್ ಒಂದು ಪುಟ್ಟ ದೇಶ. ಇಲ್ಲಿ ಏರ್ಪೋರ್ಟ್ ಇಲ್ಲ, ಸ್ವಂತ ಕರೆನ್ಸಿ ಇಲ್ಲ. ಆದರೂ ಕೂಡ ಶ್ರೀಮಂತ ನಾಡೆನಿಸಿದೆ. ಇಲ್ಲಿ ಅಪರಾಧವೇ ನಡೆಯದೇನೋ ಎಂಬಷ್ಟು ಮಾತ್ರ ಕ್ರೈಮ್ ರೇಟ್ ಇರುವುದು. ಇಲ್ಲಿಯ ಜನರು ತಮ್ಮ ಮನೆಗಳಿಗೆ ಸಾಮಾನ್ಯವಾಗಿ ಬೀಗ ಹಾಕುವುದೇ ಇಲ್ಲ. ಅಷ್ಟರಮಟ್ಟಿಗೆ ಸುರಕ್ಷಿತವಾಗಿದೆ ಈ ದೇಶ. ಇಷ್ಟು ಸುರಕ್ಷತೆ ಇದೆ ಎಂದರೆ ಇಲ್ಲಿ ಬಲಿಷ್ಠವಾದ ಪೊಲೀಸ್ ಮತ್ತು ಸೇನಾ ವ್ಯವಸ್ಥೆ ಇರಬೇಕೆಂದು ನೀವು ಭಾವಿಸಿದ್ದರೆ ಅದು ಸುಳ್ಳು. ಬಹಳ ಕಡಿಮೆ ಪೊಲೀಸ್ ಮತ್ತು ಮಿಲಿಟರಿ ಉಪಸ್ಥಿತಿ ಇದೆ.

ಇದನ್ನೂ ಓದಿ: ತಿಂಗಳಿಗೆ 21,000-26,000 ರೂ ಹೂಡಿಕೆ; 10 ವರ್ಷದ 50 ಲಕ್ಷ ರೂ

ಅರೆ, ಇದು ಹೇಗೆ ಸಾಧ್ಯ? ಲೀಕ್ಟನ್ ಸ್ಟೀನ್ ದೇಶವು ತನ್ನ ಸುತ್ತಲಿನ ಪರಿಸರ ಮತ್ತು ದೇಶಗಳೊಂದಿಗೆ ಉತ್ತಮ ತಾಳಮೇಳವನ್ನು ಹೊಂದಿದೆ. ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ದೇಶಗಳ ಸಾರಿಗೆ ನೆಟ್ವರ್ಕ್ ಅನ್ನು ತನ್ನ ನಾಡಿಗೆ ವಿಸ್ತರಿಸಿದೆ. ಸ್ವಿಟ್ಜರ್ ಫ್ರೆಂಡ್ನ ಸ್ವಿಸ್ ಕರೆನ್ಸಿಯನ್ನೇ ಇದು ಬಳಸುತ್ತದೆ. ಇದರೊಂದಿಗೆ ಸ್ವಂತವಾದ ಸೆಂಟ್ರಲ್ ಬ್ಯಾಂಕ್ ಇಟ್ಟುಕೊಳ್ಳುವ ಗೋಜಲು ಇರುವುದಿಲ್ಲ.

ಲೀಕನ್‌ಸ್ಟೀನ್ ಪುಟ್ಟ ದೇಶವಾದರೂ ಉತ್ಪಾದನೆಯಲ್ಲಿ ದೈತ್ಯ

ಲೀಕ್ಟನ್ ಸ್ಟೀನ್ ದೇಶದ ಒಟ್ಟು ವಿಸ್ತೀರ್ಣ 160 ಚದರ ಕಿಮೀ ಮಾತ್ರ. ಇಲ್ಲಿಯ ಜನಸಂಖ್ಯೆ ಕೇವಲ 42,000 ಆಸುಪಾಸಿನಷ್ಟೇ ಇರುವುದು. ಬೆಂಗಳೂರಿನ ಒಂದು ಪುಟ್ಟ ಏರಿಯಾದಲ್ಲೇ ಇದಕ್ಕಿಂತ ಹೆಚ್ಚು ಜನರು ಇರುತ್ತಾರೆ.

ಇದನ್ನೂ ಓದಿ: ಭಾರತದಿಂದ 7nm ಚಿಪ್ ಯೋಜನೆ; ಇದಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?

ಈ ದೇಶ ಸಾಲವೇ ಇಲ್ಲ. ಇಲ್ಲಿರುವ ಜನರು ಪ್ರಯೋಗಶೀಲತೆ ಮತ್ತು ನಾವೀನ್ಯತೆಗೆ ಪಳಗಿದವರು. ಎಂಜಿನಿಯರಿಂಗ್‌ನಲ್ಲಿ ನಿಷ್ಣಾತರು. ಹಾಗೆಯೇ, ಇಲ್ಲಿ ಉತ್ಕೃಷ್ಟವಾದ ಮ್ಯಾನುಫ್ಯಾಕ್ಚರಿಂಗ್ ಸೌಕರ್ಯವಿದೆ. ಸ್ವಿಟ್ಜರ್ಲೆಂಡ್ ರೀತಿಯಲ್ಲಿ ಪ್ರಿಸಿಶಿನ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಲೀಕ್ಟನ್ ಸ್ಟೀನ್ ಜನರು ನಿಷ್ಣಾತರಾಗಿದ್ದಾರೆ. ಇಲ್ಲಿರುವ ಜನಸಂಖ್ಯೆಯಿಂದ ನೊಂದಾಯಿತ ಕಂಪನಿಗಳ ಸಂಖ್ಯೆ ಹೆಚ್ಚು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 11:18 pm, ಶುಕ್ರ, 24 ಅಕ್ಟೋಬರ್ 25



Source link

Leave a Reply

Your email address will not be published. Required fields are marked *