ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವಾಗಲೇ ಏಕಾ-ಏಕಿ ‘ಕಾಂತಾರ: ಅಧ್ಯಾಯ 1’ ಸಿನಿಮಾ ಒಟಿಟಿಗೆ ಬಂದಿದೆ. ಅಕ್ಟೋಬರ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಸಿನಿಮಾ ತಿಂಗಳು ಕಳೆಯುವ ಮುಂಚೆ ಅಂದರೆ ನಿನ್ನೆ (ಅಕ್ಟೋಬರ್ 3) ಒಟಿಟಿ ಬಂದಿದೆ. ಅಮೆಜಾನ್ ಪ್ರೈಂನಲ್ಲಿ ಸಿನಿಮಾವನ್ನು ವೀಕ್ಷಿಸಲಾಗಿದೆ.
ಕನ್ನಡದಲ್ಲಿ ವೆಬ್ ಸರಣಿಗಳ ಕೊರತೆ ಇದೆ ಎಂಬ ದೂರಿನ ನಡುವೆ ‘ಅಯ್ಯನ ಮನೆ’ ಗಮನ ಸೆಳೆದಿದೆ. ಇದೀಗ ‘ಮಾರುಗಲ್ಲು’ ಹೆಸರಿನ ಮತ್ತೊಂದು ಕನ್ನಡ ವೆಬ್ ಸರಣಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಿಸಿರುವ ಈ ವೆಬ್ ಸರಣಿ ಜೀ 5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.
‘ಲೋಕ’ ಇತ್ತೀಚೆಗೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ಮಲಯಾಳಂ ಸಿನಿಮಾಗಳು. ಕಲ್ಯಾಣಿ ಪ್ರಿಯದರ್ಶನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಲೇಡಿ ಸೂಪರ್ ಹೀರೋ ಸಿನಿಮಾ. ಸಿನಿಮಾದ ಕತೆ ನಡೆಯುವುದು ಬೆಂಗಳೂರಿನಲ್ಲಿ. ಮಲಯಾಳಂ ಚಿತ್ರರಂಗದಲ್ಲಿ ದಾಖಲೆಗಳನ್ನು ಬರೆದ ಈ ಸಿನಿಮಾವನ್ನು ಹಾಟ್ಸ್ಟಾರ್ನಲ್ಲಿ ಹಲವು ಭಾಷೆಗಳಲ್ಲಿ ವೀಕ್ಷಿಸಲಾಗಿದೆ.
ಧನುಶ್ ನಟಿಸಿ ನಿರ್ದೇಶನವನ್ನೂ ಮಾಡಿರುವ ‘ಇಡ್ಲಿ ಕಡೈ’ ಸಿನಿಮಾ ಅಕ್ಟೋಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ‘ಕಾಂತಾರ’ ಎದುರು ಚಿತ್ರಮಂದಿರಗಳಲ್ಲಿ ಮಂಕಾದರೂ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಒಳ್ಳೆಯ ಫೀಲ್ ಗುಡ್ ಸಿನಿಮಾ ಆಗಿ ಗಮನ ಸೆಳೆದ ಈ ಸಿನಿಮಾವನ್ನು ಈಗ ನೆಟ್ ಫ್ಲಿಕ್ಸ್ ನಲ್ಲಿ ವೀಕ್ಷಿಸಲಾಗಿದೆ.
ಟೈಗರ್ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸಿ ಕನ್ನಡಿಗ ಹರ್ಷ ನಿರ್ದೇಶನ ಮಾಡಿರುವ ‘ಭಾಗಿ 4’ ಸಿನಿಮಾ ಸೆಪ್ಟೆಂಬರ್ 05 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಸಿನಿಮಾ ನಿರೀಕ್ಷಿತ ಪ್ರದರ್ಶನ ಕಂಡಿರಲಿಲ್ಲ. ಇದೀಗ ಸಿನಿಮಾ ಒಟಿಟಿಗೆ ಬಂದಿದ್ದು ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಬಂದಿದೆ.
ಹಾಲಿವುಡ್ನ ಬಲು ಭಯಾನಕ ಹಾರರ್ ಸಿನಿಮಾ ಸರಣಿಗಳಲ್ಲಿ ಒಂದಾದ ‘ಐಟಿ’ಯ ಹೊಸ ಸಿನಿಮಾ ‘ಐಟಿ: ವೆಲ್ ಕಮ್ ಟು ಡೆರ್ರಿ’ ಸಿನಿಮಾ ಇದೀಗ ಒಟಿಗೆ ಬಂದಿದೆ. ಈ ಸಿನಿಮಾ ಜಿಯೋ ಹಾಟ್ ಸ್ಟಾರ್ನಲ್ಲಿ ಈ ವಾರದ ವೀಕ್ಷಣೆಗೆ ಲಭ್ಯವಿದೆ.





