PSL 2026: ಪಾಕಿಸ್ತಾನ್ ಸೂಪರ್ ಲೀಗ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೂರು ಫ್ರಾಂಚೈಸಿಗಳಿಗೆ ಆಸ್ಟ್ರೇಲಿಯಾದ ಆಟಗಾರರು ನಾಯಕರಾಗಿ ಆಯ್ಕೆಯಾಗಿದ್ದಾರೆ. ಅಂದರೆ 8 ತಂಡಗಳಲ್ಲಿ ಮೂರು ತಂಡಗಳನ್ನು ಮುನ್ನಡೆಸುವವರು ಆಸ್ಟ್ರೇಲಿಯಾ ಆಟಗಾರರು. ಅವರೆಂದರೆ…
ಡೇವಿಡ್ ವಾರ್ನರ್: ಈ ಬಾರಿ ಕರಾಚಿ ಕಿಂಗ್ಸ್ ತಂಡವನ್ನು ಆಸ್ಟ್ರೇಲಿಯಾದ ಅನಿಭವಿ ಆಟಗಾರ ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ. ಕಳೆದ ಬಾರಿ ಶಾನ್ ಮಸೂದ್ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಅವರ ಬದಲಿಗೆ ಅನುಭವಿ ಬ್ಯಾಟರ್ ಡೇವಿಡ್ ವಾರ್ನರ್ ಅವರಿಗೆ ಕರಾಚಿ ಕಿಂಗ್ಸ್ ತಂಡದ ನಾಯಕತ್ವ ನೀಡಿದ್ದಾರೆ.
ಅಷ್ಟನ್ ಟರ್ನರ್: ಮುಲ್ತಾನ್ ಸುಲ್ತಾನ್ಸ್ ತಂಡವನ್ನು ಈ ಬಾರಿ ಮುನ್ನಡೆಸುವುದು ಆಸೀಸ್ ಆಟಗಾರ ಅಷ್ಟನ್ ಟರ್ನರ್. ಕಳೆದ ಬಾರಿ ನಾಯಕನಾಗಿದ್ದ ಮೊಹಮ್ಮದ್ ರಿಝ್ವಾನ್ ಈ ಬಾರಿ ತಂಡದಿಂದ ಹೊರಬಿದ್ದಿದ್ದು, ಅವರ ಬದಲಿಗೆ ಅಷ್ಟನ್ ಟರ್ನರ್ಗೆ ಮುಲ್ತಾನ್ ಸುಲ್ತಾನ್ಸ್ ತಂಡದ ಚುಕ್ಕಾಣಿ ಕೊಡುಗೆ.
ಮಾರ್ನಸ್ ಲಾಬುಶೇನ್: ಪಾಕಿಸ್ತಾನ್ ಸೂಪರ್ ಲೀಗ್ಗೆ ಹೊಸದಾಗಿ ಸೇರ್ಪಡೆಯಾಗಿರುವ ಹೈದರಾಬಾದ್ ಕಿಂಗ್ಸ್ ಮೆನ್ ಫ್ರಾಂಚೈಸಿಗೆ ಆಸ್ಟ್ರೇಲಿಯಾ ಬ್ಯಾಟರ್ ಮಾರ್ನಸ್ ಲಾಬುಶೇನ್ ನಾಯಕರಾಗಿ ನೇಮಕಗೊಂಡಿದ್ದಾರೆ. ಅದರಂತೆ ಲಾಬುಶೇನ್ ಮುಂದಾಳತ್ವದಲ್ಲಿ ಹೈದರಾಬಾದ್ ಕಿಂಗ್ಸ್ಮೆನ್ ಕಣಕ್ಕಿಳಿಯಲಿದೆ.
ಪಾಕಿಸ್ತಾನ್ ಸೂಪರ್ ಲೀಗ್ 11ನೇ ಸೀಸನ್ ಮಾರ್ಚ್ 26, 2026 ರಂದು ನಡೆಯಲಿದೆ. ಮೊದಲ ವಿನ್ಯಾಸ ಶಾಹೀನ್ ಶಾ ಅಫ್ರಿದಿ ಮುಂದಾಳತ್ವದ ಲಾಹೋರ್ ಖಲಂದರ್ಸ್ ಹಾಗೂ ಮಾರ್ನಸ್ ಲಾಬುಶೇನ್ ಸಾರಥ್ಯದ ಹೈದರಾಬಾದ್ ಕಿಂಗ್ಸ್ ಮೆನ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಫೈನಲ್ ಪಂದ್ಯವು ಮೇ 10 ರಂದು ಲಾಹೋರ್ನಲ್ಲಿ.




