ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಕರಲ್ಲಿ ಭಾರತದ ಮೂರು ಕಂಪನಿಗಳು

ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಕರಲ್ಲಿ ಭಾರತದ ಮೂರು ಕಂಪನಿಗಳು


ನವೆಂಬರ್ 8: ಜಾಗತಿಕವಾಗಿ ಡಿಫೆನ್ಸ್ ಕ್ಷೇತ್ರದಲ್ಲಿ ಮಾಡಲಾಗುತ್ತಿರುವ ವೆಚ್ಚ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಪ್ರಮುಖ ದೇಶಗಳ ಮಿಲಿಟರಿ ವೆಚ್ಚ ವಿಪರೀತ ಹೆಚ್ಚಾಗಿದೆ. ಶಸ್ತ್ರಾಸ್ತ್ರ ತಯಾರಿಸುವ ಸಂಸ್ಥೆಗಳಿಗೆ ಆದಾಯಗಳ ಸುಗ್ಗಿ ಆಗಿದೆ. ಸ್ಟಾಕ್‌ಹಾಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ ಟಿಟ್ಯೂಟ್ (SIPRI) ವರದಿ ಪ್ರಕಾರ, 2024ರಲ್ಲಿ ವಿಶ್ವದ ಟಾಪ್ 100 ಶಸ್ತ್ರಾಸ್ತ್ರ ತಯಾರಕ ಸಂಸ್ಥೆಗಳು (ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ಕಂಪನಿಗಳು) ಒಟ್ಟಾರೆ ಆದಾಯ 679 ಬಿಲಿಯನ್ ಡಾಲರ್ ಆಗಿದೆ. ಇಷ್ಟು ಮೊತ್ತದ ಆದಾಯ ದಾಖಲಾಗಿದೆ ಎಂದು ಈ ವರದಿ ಹೇಳುತ್ತಿದೆ.

ಜಾಗತಿಕ ಆರ್ಥಿಕ ಆದಾಯದಲ್ಲಿ ಭಾರತದ ಪಾಲು ಶೇ. 1.1 ಮಾತ್ರ

ಜಾಗತಿಕ ಶಸ್ತ್ರಾಸ್ತ್ರ ತಯಾರಕ ಕಂಪನಿಗಳು 2024 ರಲ್ಲಿ ಗಳಿಸಿದ ಆದಾಯದಲ್ಲಿ ಭಾರತೀಯ ಕಂಪನಿಗಳ ಪಾಲು ಶೇ. 1.1 ಮಾತ್ರ. ಅಮೆರಿಕದ ಪಾರಮ್ಯ ಅತಿಹೆಚ್ಚು ಇದೆ. ಶೇ. 49ರಷ್ಟು ಆದಾಯವು ಅಮೆರಿಕನ್ ಕಂಪನಿಗಳಿಗೆ ಹೋಗಿದೆ. ಚೀನಾ ಶೇ. 13 ಮತ್ತು ಯುನೈಟೆಡ್ ಕಿಂಗ್ಡಂ ಶೇ. 7.7ರಷ್ಟು ಪಾಲು ಇದೆ.

ಇದನ್ನೂ ಓದಿ: ಇಂಡಿಗೋ ಏರ್‌ಲೈನ್ಸ್ ದಿಢೀರ್ ಬಿಕ್ಕಟ್ಟಿಗೆ ಸಿಲುಕಲು ಹೊಸ ಎಫ್‌ಡಿಟಿಎಲ್ ನಿಯಮಗಳೇ ಕಾರಣ; ಏನಿದೆ ರೂಲ್ಸ್?

ವಿಶ್ವದ ಟಾಪ್-100 ಡಿಫೆನ್ಸ್ ಕಂಪನಿಗಳಲ್ಲಿ ಭಾರತದ ಮೂರು

ಸಿಪ್ರಿ ಪ್ರಕಟಿಸಿರುವ ವರದಿ ಪ್ರಕಾರ 2024 ರಲ್ಲಿ ಅತಿದೊಡ್ಡ ಟಾಪ್-100 ಡಿಫೆನ್ಸ್ ಕಂಪನಿಗಳಲ್ಲಿ 77 ಸಂಸ್ಥೆಗಳ ಆದಾಯ ಹೆಚ್ಚಾಗಿದೆ. ಜಪಾನ್ ಡಿಫೆನ್ಸ್ ಕಂಪನಿಗಳು ಶೇ. 40ರಷ್ಟು ಆದಾಯ ಕಂಡಿವೆ. ಜರ್ಮನಿ, ಸೌತ್ ಕೊರಿಯಾ, ರಷ್ಯಾ ದೇಶಗಳ ಕಂಪನಿಗಳೂ ಕೂಡ ಶೇ. 20ಕ್ಕಿಂತ ಹೆಚ್ಚು ಆದಾಯ ಕಂಡಿವೆ. ಭಾರತೀಯ ಡಿಫೆನ್ಸ್ ಕಂಪನಿಗಳ ಆದಾಯ ಶೇ. 8.2ರಷ್ಟು ಹೆಚ್ಚಾಗಿದೆ. 2024ರಲ್ಲಿ ಚೀನೀ ಕಂಪನಿಗಳ ಕುತೂಹಲದ ಆದಾಯ ಶೇ. 10ರಷ್ಟು ಕಡಿಮೆ ಆಗಿದೆ. ಅಮೆರಿಕ, ಯುಕೆ ಮತ್ತು ಯೂರೋಪ್ನ ಡಿಫೆನ್ಸ್ ಕಂಪನಿಗಳ ಆದಾಯ ಭಾರತಕ್ಕಿಂತ ಕಡಿಮೆ ಇದೆ.

ಎಚ್‌ಎಎಲ್, ಬಿಐಎಲ್ ಮತ್ತು ಮಜಗಾಂವ್ ಡಾಕ್ ಕಂಪನಿಗಳ ಪಾರಮ್ಯ

ವಿಶ್ವದ ಅತಿಹೆಚ್ಚು ಆದಾಯದ 100 ಶಸ್ತ್ರಾಸ್ತ್ರ ತಯಾರಕರು ಭಾರತದಲ್ಲಿ ಮೂರು ಕಂಪನಿಗಳಿವೆ. ಎಚ್ ಎಎಲ್, ಬಿಐಎಲ್ ಮತ್ತು ಮಜಗಾಂವ್ ಡಾಕ್ ಶಿಪ್ಬ್ಯುಲ್ಡರ್ ಕಂಪನಿಗಳು ಈ ಸಿಪ್ರಿ ಪಟ್ಟಿವೆ. ಇವು ಮೂರೂ ಕೂಡ ಸರ್ಕಾರಿ ಕಂಪನಿಗಳೇ ಆಗಿವೆ. ಈ ಮೇಲಿನ ಎಚ್‌ಎಎಲ್ ಮತ್ತು ಬಿಐಎಲ್ ಬೆಂಗಳೂರು ಮೂಲದ ಕಂಪನಿ. ಎಚ್‌ಎಎಲ್ 44, ಬಿಐಎಲ್ 58 ಮತ್ತು ಮಜಗಾಂವ್ ಡಾಕ್ 91ನೇ ಸ್ಥಾನ ಪಡೆದಿವೆ.

ಇದನ್ನೂ ಓದಿ: ನೆಟ್ಫ್ಲಿಕ್ಸ್ ವಾರ್ನರ್ ಬ್ರೋಸ್ ಡೀಲ್ನಿಂದ ಭಾರತೀಯ ಚಿತ್ರೋದ್ಯಮ ಕಂಗಾಲು; ಸಿನಿಮಾ ರಂಗದ ಆತಂಕವೇನು?

ಎಲ್ಸಿಎ ತೇಜಸ್ ಸೇರಿದಂತೆ ಹಲವು ಪ್ರಮುಖ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಎಚ್ಎಎಲ್ನ ಆದಾಯ 3.8 ಬಿಲಿಯನ್ ಡಾಲರ್ ಇದೆ. ಹೊಂದಿರುವಸ್ ವಾರ್ಫೇರ್ ಸಲಕರಣೆಗಳ ತಯಾರಿಕೆಯಲ್ಲಿ ಪಳಗಿರುವ ಬಿಐಎಲ್ ಸಂಸ್ಥೆ 2.5 ಬಿಲಿಯನ್ ಡಾಲರ್ ಆದಾಯವನ್ನು ಹೊಂದಿದೆ. 2024ರಲ್ಲಿ ಇದರ ಆದಾಯ ಶೇ. 24ರಷ್ಟು ಹೆಚ್ಚು. ಇನ್ನು, ಸಬ್‌ಮರೀನ್‌ಗಳನ್ನು ತಯಾರಿಸುವ ಮಜಗಾಂವ್ ಡಾಕ್ ಸಂಸ್ಥೆ 2024ರಲ್ಲಿ 1.23 ಬಿಲಿಯನ್ ಡಾಲರ್ ಆದಾಯವಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *