Headlines

KBJNL ಎಡ ದಂಡೆ ಕಾಲುವೆಯಲ್ಲಿ ಘೋರ ದುರಂತ: ಒಂದೇ ಕುಟುಂಬದ ಮೂವರು ನಾಪತ್ತೆ

KBJNL  ಎಡ ದಂಡೆ ಕಾಲುವೆಯಲ್ಲಿ ಘೋರ ದುರಂತ: ಒಂದೇ ಕುಟುಂಬದ ಮೂವರು ನಾಪತ್ತೆ


ವಿಜಯಪುರ, (ನವೆಂಬರ್ 11): ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಒಂದೇ ಕುಟುಂಬದ ಮೂವರು ನಾಪತ್ತೆಯಾಗಿರುವ ಘಟನೆ ವಿಜಯಪುರ (ವಿಜಯಪುರ) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ. ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲೋನಿಯ ಸುಡಗಾಡು ಸಿದ್ದ ಸಮುದಾಯದ ಬಸಮ್ಮ ಕೊಣ್ಣೂರು(21), ಸಂತೋಷ(16), ರವಿ ಕೊಣ್ಣೂರು(15) ಎಂಬುವವರು ಕಾಲು ಜಾರಿ ಶಿರೋಳ ಬಳಿ ಕೆಬಿಜೆಎನ್ಎಲ್ ಎಡದಂಡೆ ಕಾಲುವೆಗೆ ಬಿದ್ದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ.

ಸುಡಗಾಡು ಸಿದ್ದ ಸಮುದಾಯಕ್ಕೆ ಸೇರಿದ ಬಸಮ್ಮ ಕೊಣ್ಣೂರು, ಸಂತೋಷ, ರವಿ ಇಂದು (ನವೆಂಬರ್ 11) ಕೆಬಿಜೆಎನ್ಎಲ್ ಎಡ ದಂಡೆ ಕಾಲುವೆಗೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ವಿಷಯ ತಿಳಿಯದೆಯೇ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಹಾಗೂ ಗ್ನಿಶಾಮಕ ದಳ ಸಿಬ್ಬಂದಿಗ ದೌಡಾಯಿಸಿ ನಾಪತ್ತೆಯಾದವರ ಪತ್ತೆಗೆ ಶೋಧನೆ.

ತೆಪ್ಪ ಮುಳುಗಿ ಮೀನುಗಾರ ಸಾವು

ಚಾಮರಾಜನಗರ: ತೆಪ್ಪ ಮುಳುಗಿ ಮೀನುಗಾರ ಸಾವನ್ನಪ್ಪಿದ್ದು, ಮತ್ತೋರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯದಲ್ಲಿ ನಡೆದಿದೆ. ಅಟ್ಟಗುಳಿಪುರ ಗ್ರಾಮದ ನಿವಾಸಿ ಶಿವಸ್ವಾಮಿ(32) ಮೃತ ದುರ್ದೈವಿ. ಇನ್ನು ಸ್ನೇಹಿತ ದಿಲೀಪ್, ತೆಪ್ಪ ಮುಳುಗಿದ ನಂತರ ಈಜಿ ದಡ ಸೇರಿದ್ದಾರೆ. ಸುವರ್ಣಾವತಿ ಜಲಾಶಯದಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ತೆಪ್ಪ ಮುಳುಗಿದೆ. ಸ್ಥಳಕ್ಕೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಶಿವಸ್ವಾಮಿ ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ.



Source link

Leave a Reply

Your email address will not be published. Required fields are marked *