
ಮಡಿಕೇರಿ, ಮಾರ್ಚ್ 26: ಮಡಿಕೇರಿ ನಗರದ ಹೊರವಲಯದಲ್ಲಿ ಹುಲಿ ಓಡಾಟ ನಡೆದಿದ್ದು ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಹುಲಿ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ. ಇಬ್ಬನಿವಳವಾಡಿ, ಸಿಂಕೋಡ್ಲು ಹಾಗೂ ಕಗ್ಗೋಡ್ಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡಿರುವ ಮಾಹಿತಿ ಹಿನ್ನೆಲೆ, ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಜನರಲ್ಲಿ ಆತಂಕ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಕಟ್ಟು ನಿಟ್ಟಿನ ನಿಗಾವಹಿಸಲಾಗಿದೆ. ಕಾರ್ಯಾಚರಣೆಗೆ ಮೂರು ಸಾಕಾನೆಗಳನ್ನು ಬಳಸಲಾಗುತ್ತಿದೆ, ದಟ್ಟ ಅರಣ್ಯ ಪ್ರದೇಶಗಳಲ್ಲಿ ಹುಲಿಯ ಚಲನವಲನವನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಥರ್ಮಲ್ ಡ್ರೋನ್ ಮೂಲಕವೂ ಹುಲಿಯ ಹಾದಿ ಮತ್ತು ಚಲನವಲನಗಳನ್ನು ನಿಗಾವಹಿಸಲಾಗುತ್ತಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ