Headlines

ಮಹತ್ವದ ಹುದ್ದೆಗೆ RSS ಕಾರ್ಯಕರ್ತನ ನೇಮಕ: ಸಿಎಂಗೆ ಕ್ಷಮೆ ಕೇಳಿದ ಕಾಂಗ್ರೆಸ್ ಶಾಸಕ

ಮಹತ್ವದ ಹುದ್ದೆಗೆ RSS ಕಾರ್ಯಕರ್ತನ ನೇಮಕ: ಸಿಎಂಗೆ ಕ್ಷಮೆ ಕೇಳಿದ ಕಾಂಗ್ರೆಸ್ ಶಾಸಕ


ತುಮಕೂರು, (ಅಕ್ಟೋಬರ್ 27): ಆರ್‌ಎಸ್‌ಎಸ್‌(ಆರ್‌ಎಸ್‌ಎಸ್) ಪಥಸಂಚಲನದಲ್ಲಿ ಗಣವಸ್ತ್ರ ಧರಿಸಿದ್ದ ವೈದ್ಯರು ತಿಪಟೂರಿನ ಶ್ರೀಧರ್ ಹೆಸರನ್ನು ಯಶಸ್ವಿನಿ ಟ್ರಸ್ಟ್‌ನಿಂದ ತೆಗೆದುಹಾಕಲಾಗಿದೆ. ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ್ದ ವೈದ್ಯರಿಗೆ ಸರ್ಕಾರದ ಯಶಸ್ವಿನಿ ಟ್ರಸ್ಟ್‌ ಅನ್ನು ನೇಮಿಸಲಾಯಿತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ಆದೇಶವನ್ನು ವಾಪಸ್ ನೀಡಲಾಗಿದೆ. ಇನ್ನು ಶ್ರೀಧರ್ ಅವರ ನೇಮಕಕ್ಕೆ ತಿಪಟೂರು ಕಾಂಗ್ರೆಸ್ ಶಾಸಕ ಷಡಾಕ್ಷರಿ ಅವರೇ ಶಿಫಾರಸು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಇನ್ನು ಈ ಬಗ್ಗೆ ಷಡಾಕ್ಷರಿ ಅವರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದಿಂದ ಸಿಎಂಗೆ ಮುಜುಗರವಾದರೆ ಕ್ಷಮೆ ಕೇಳುತ್ತೇನೆ. ಡಾ.ಶ್ರೀಧರ್ ಆರ್.ಎಸ್.ಎಸ್ ನಲ್ಲಿ ಸಕ್ರಿಯವಾಗಿರುವುದು ನನಗೆ ಗೊತ್ತಿರಲಿಲ್ಲ. ಅವರ ಅಭಿಮಾನಿಗಳು ಜನರ ಸೇವೆಗೆ ಅವಕಾಶ ನೀಡಿ ಎಂದು ಪ್ರಸ್ತಾಪಿಸಿದರು. ನೀಡುವ ಆಪರೇಷನ್, ಮಾಹಿತಿ. ಅವರ ಸೇವೆಯನ್ನು ಗುರುತಿಸಿ ಎಂದು ಮನವಿ ಮಾಡಿದ್ದೆ.ನಾವು ಆರ್.ಎಸ್.ಎಸ್ ಬೆಂಬಲಿಸುವುದಿಲ್ಲ. ನನಗೆ ಆರ್.ಎಸ್.ಎಸ್ ಸಂಪರ್ಕ ಇಲ್ಲ ಎಂದು ಸ್ಪಷ್ಟನೆ ನೀಡಿದೆ.



Source link

Leave a Reply

Your email address will not be published. Required fields are marked *