
ಬೆಂಗಳೂರನ್ನು (ಬೆಂಗಳೂರು) ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂದೆಲ್ಲ ಕರೆಯಲಾಗುತ್ತದೆ. ಇಲ್ಲಿನ ಉದ್ಯಾನಗಳು ಬಹಳ ಜನಪ್ರಿಯ. ಆದರೆ ಅದರಷ್ಟೇ ಜನಪ್ರಿಯ ಬೆಂಗಳೂರಿನ ದೋಸೆಗಳು. ಬೆಂಗಳೂರಿನ ತರ-ತರಹದ ದೋಸೆಗಳನ್ನು ಸವಿಯಲು ನಾನಾ ಕಡೆಗಳಿಂದ ಜನ ಬರುತ್ತಾರೆ. ವಿದೇಶಗಳಿಂದಲೂ ಸಹ ಫುಡ್ ವ್ಲಾಗರ್ ಬೆಂಗಳೂರಿಗೆ ಬರುವುದು ಭಾರತೀಯ ದೋಸೆಗಳನ್ನು ಎಕ್ಸ್ ಪ್ಲೋರ್ ಮಾಡಲೇಬೇಕು. ಶತಮಾನಗಳ ಹಳೆಯ ಕೆಲ ದೋಸೆ ಹೋಟೆಲ್ ಬೆಂಗಳೂರಿನಲ್ಲಿವೆ. ಅರ್ಧ ಶತಮಾನ ದಾಟಿದ ಹಲವು ಹೋಟೆಲ್ಗಳಿವೆ. ಇದೀಗ ಟಾಲಿವುಡ್ನ ಸ್ಟಾರ್ ನಟನ ದೋಸೆ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ.
ವಿಕ್ಟರಿ ವೆಂಕಟೇಶ್ ಎಂದೆಂದಿಗೂ ಖ್ಯಾತರಾಗಿರುವ ಟಾಲಿವುಡ್ ನ ಸ್ಟಾರ್ ನಟ ದಗ್ಗುಬಾಟಿ ವೆಂಕಟೇಶ್ ಅವರು ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದರು, ಅದೂ ಬೆಂಗಳೂರಿನ ಬೆಸ್ಟ್ ದೋಸೆ ಸವಿಯಲು. ವೆಂಕಟೇಶ್ ಅವರು ಭೇಟಿ ನೀಡಿದ್ದು ಬೆಂಗಳೂರಿನ ಹೆಮ್ಮೆಯ ವಿದ್ಯಾರ್ಥಿ ಭವನ ಹೋಟೆಲ್. ಗಾಂಧಿ ಬಜಾರಿನ ಈ ನೂರು ವರ್ಷಗಳ ಹಳೆಯ ಹೋಟೆಲ್ಗೆ ಭೇಟಿ ನೀಡಿದ ವೆಂಕಟೇಶ್ ಅವರ ಹೋಟೆಲ್ನ ಹಲವು ಖಾದ್ಯಗಳನ್ನು ಸವಿದಿದ್ದಾರೆ.
ಸ್ಥಳದಲ್ಲಿ ಮೃದುವಾದ ಇಡ್ಲಿ ಮತ್ತು ಗರಿ-ಗರಿಯಾದ ವಡೆಯೊಂದಿಗೆ ಉಪಹಾರ ಪ್ರಾರಂಭಿಸಿದ ವೆಂಕಟೇಶ್. ಆ ಬಳಿಕ ಚೌ-ಚೌ ಬಾತು ಸವಿದಿದ್ದಾರೆ. ಬಳಿಕ ವಿದ್ಯಾರ್ಥಿ ಭವನದ ಬಲು ಫೇಮಸ್ ಮಸಾಲೆ ದೋಸೆ ಸವಿದು, ರುಚಿಗೆ ಮಾರು ಹೋಗಿದ್ದಾರೆ. ಒಂದು ಒಳ್ಳೆಯ ಫಿಲ್ಟರ್ ಕಾಫಿ ಜೊತೆಗೆ ಅಂತ್ಯಗೊಂಡಿದೆ. ರುವಿಗೆ ಆದ ವೆಂಕಟೇಶ್ ಅವರು ವಿದ್ಯಾರ್ಥಿ ಭವನ ಸಿಬ್ಬಂದಿ ಜೊತೆಗೆ ಜೊತೆಗೆ ಜೊತೆಗೆ ಮಾತನಾಡಿ, ಅವರೊಟ್ಟಿಗೆ ಚಿತ್ರಗಳನ್ನು ಸಹ ತೆಗೆಸಿದ್ದಾರೆ.
ಇದನ್ನೂ ಓದಿ:IPL 2026: ‘ಐಪಿಎಲ್ಗೆ ಚಿನ್ನಸ್ವಾಮಿ ರೆಡಿ ಇದ್ರು ಆರ್ಸಿಬಿ ಮನಸ್ಸು ಮಾಡ್ತಿಲ್ಲ’; ವೆಂಕಟೇಶ್ ಪ್ರಸಾದ್
ವಿಶೇಷವೆಂದರೆ ವೆಂಕಟೇಶ್ ಅವರ ಈ ಹಿಂದಿನ ಸಿನಿಮಾ ‘ಮನ ಶಂಕರ ವರ ಪ್ರಸಾದ್’ನಲ್ಲಿ ವೆಂಕಟೇಶ್ ಅವರು ಕರ್ನಾಟಕದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಕನ್ನಡದಲ್ಲೇ ಮಾತನಾಡಿದ್ದರು ಸಹ. ಆ ಸಿನಿಮಾ, ಈ ಹಿಂದೆ ಕೆಲವು ಸಿನಿಮಾಗಳಲ್ಲಿ ವೆಂಕಟೇಶ್ ಅವರು ಕನ್ನಡಿಗನಾಗಿ ನಟಿಸಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಕನ್ನಡದಲ್ಲಿ ಮಾತನಾಡಿದ್ದೂ ಸಹ ಇದೆ.
ವೆಂಕಟೇಶ್ ಅವರ ಪುತ್ರಿ ಆಶ್ರಿತಾ ದಗ್ಗುಬಾಟಿತಾ ಬೇಕರ್ ಮತ್ತು ಫುಡ್ ವ್ಲಾಗರ್ ಸಹ ಆಗಿದ್ದಾರೆ. ಭಿನ್ನ-ಭಿನ್ನ ರೀತಿಯ ಖಾದ್ಯಗಳನ್ನು ಎಕ್ಸ್ ಪ್ಲೋರ್ ಮಾಡುತ್ತಿರುತ್ತಾರೆ. ತಮ್ಮ ಮನೆಯಲ್ಲಿ ಅಡುಗೆ ಸೇರಿದಂತೆ ಹಲವು ಭಿನ್ನ ರೀತಿಯ ತಿಂಡಿ-ತಿನಿಸುಗಳ ವ್ಲಾಗ್ ಸಹ ಅವರು ಮಾಡಿದ್ದಾರೆ. ವೆಂಕೇಶ್ ಅವರ ಅಣ್ಣನ ಮಗ, ಖ್ಯಾತ ನಟ ರಾಣಾ ದಗ್ಗುಬಾಟಿ ಸಹ ಒಮ್ಮೆ ಹೇಳಿದಂತೆ ದಗ್ಗುಬಾಟಿ ಕುಟುಂಬದ ಎಲ್ಲರೂ ಆಹಾರ ಪ್ರಿಯರಂತೆ. ಅದೇ ವೆಂಕಟೇಶ್ ಸಹ, ಅವರು ದೋಸೆ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ