ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​: ದುಡ್ಡು ಕೊಟ್ರೂ ಸಿಗ್ತಿಲ್ಲ ನುಗ್ಗೇಕಾಯಿ!

ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​: ದುಡ್ಡು ಕೊಟ್ರೂ ಸಿಗ್ತಿಲ್ಲ ನುಗ್ಗೇಕಾಯಿ!


ಕೋಲಾರ, ಡಿಸೆಂಬರ್ 03: ಹವಾಮಾನ ವೈಪರೀತ್ಯದ ಕಾರಣ ವಿವಿಧ ತರಕಾರಿಗಳು ಇಳುವರಿಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆದರೆ ಬೇಡಿಕೆ ಮಾತ್ರ ಹೆಚ್ಚಿರುವ ಕಾರಣಕ್ಕೆ ಟೊಮ್ಯಾಟೋ ಸೇರಿ ಹಲವು ತರಕಾರಿಗಳ ಬೆಲೆ ಗಗನಕ್ಕೇರಿದ್ದರೆ, ಇನ್ನು ಕೆಲವು ಮಾರುಕಟ್ಟೆಯಿಂದಲೇ ನಾಪತ್ತೆಯಾಗಿವೆ. ಏಷ್ಯಾದಲ್ಲೇ ಅತಿ ದೊಡ್ಡ ಟೊಮ್ಯಾಟೋ ಮಾರುಕಟ್ಟೆ ಎಂದು ಕರೆಸುಕೊಳ್ಳುವ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಪೂರೈಕೆಯ ಅಭಾವ ಕಂಡುಬಂದಿದೆ.

ಬಾಕ್ಸ್ ಟೊಮ್ಯಾಟೋ ಬೆಲೆ 600-800 ರೂ.

ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಭಾರಿ ಡಿಮ್ಯಾಂಡ್ ಬಂದಿದ್ದು, 15 ಕೆಜಿ ತೂಕದ ಒಂದು ಬಾಕ್ಸ್ 600-800 ರೂಪಾಯಿಗೆ ಮಾರಾಟವಾಗುತ್ತಿದೆ. ಮೊನ್ನೆ ಮೊನ್ನೆವರೆಗೂ ಬಾಕ್ಸ್ ಟೊಮ್ಯಾಟೋ ದರ 150-200 ರೂ. ಇತ್ತು. ಟೊಮ್ಯಾಟೋ ಹೆಚ್ಚಾಗಿ ಬೆಳೆಯುವ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಹೊರ ರಾಜ್ಯಗಳಿಗೆ ಟೊಮ್ಯಾಟೋಗೆ ಬೇಡಿಕೆ ಹೆಚ್ಚಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಪಕ್ಕದ ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯದ ಗಡಿ ಭಾಗಗಳಿಂದ ಟೊಮ್ಯಾಟೋ ಸರಬರಾಜಾಗುತ್ತಿದೆ. ಜೊತೆಗೆ ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಮಡಿಕೇರಿ, ಮಂಡ್ಯ, ಚಾಮರಾಜನಗರ, ಸೇರಿದಂತೆ ಹೊರ ಜಿಲ್ಲೆಗಳ ಟೊಮ್ಯಾಟೋಗಳೂ ಲಗ್ಗೆ ಇಟ್ಟಿವೆ.

ಇದನ್ನೂ ಓದಿ: ಥರಗುಟ್ಟುವ ಚಳಿ ಜನರಿಗೆ ತರಕಾರಿ ಬೆಲೆ ಏರಿಕೆ ಬಿಸಿ; ಯಾವುದರ ದರ ಎಷ್ಟಿದೆ?

ಮಳೆಯಿಂದ ನುಗ್ಗೆಕಾಯಿ ಬೆಳೆಗೆ ಹೊಡೆತ

ಇನ್ನು ನುಗ್ಗೇಕಾಯಿ ಹೆಚ್ಚಾಗಿ ಬೆಳೆಯುವ ಪ್ರದೇಶವಾದ ತಮಿಳುನಾಡಿನಲ್ಲಿಯೂ ವರುಣ ಅಬ್ಬರ ಮತ್ತು ಚಂಡಮಾರುತದ ಕಾರಣ ಬೆಳೆ ನೆಲ ಕಚ್ಚಿದೆ. ನಿರೀಕ್ಷಿತ ಮಟ್ಟದ ಬೆಳೆ ಮಾರುಕಟ್ಟೆಗೆ ಬಾರದ ಕಾರಣಕ್ಕೂ ಬೇಡಿಕೆ ಹೆಚ್ಚಿದೆ. ಬೆಲೆಯಲ್ಲೂ ಗಣನೀಯ ಏರಿಕೆಯಾಗಿದೆ. ಜೊತೆಗೆ, ಒಳಗೆ ನುಗ್ಗೇಕಾಯಿ ಸಿಗೋದು ಕಷ್ಟ ಎಂಬ ಸ್ಥಿತಿ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *