ಬೆಂಗಳೂರು, (ನವೆಂಬರ್ 30): ಸಾಂಬಾರ್ಗೂ ಬೇಕು. ಸಾಗುಗೂ ಬೇಕು. ಥರಥರ ಚಳಿನಡುವೆ ಮಾಡಿಕೊಳ್ಳೋ ಬಿಸಿಬಿಸಿ ರಸನಲ್ಲೂ ಇದರ ಪಾತ್ರವೇ ದೊಡ್ಡದು.ವೆಜ್,ನಾನ್‌ವೆಜ್ ಅಂತಾ ಎಲ್ಲಾ ಬಗೆಯ ಅಡುಗೆಯಲ್ಲೂ ಮೇಲುಗೈ ಸಾಧಿಸುವ ತರಕಾರಿ ಅಂದ್ರೆ ಅದು ಅಲ್ಲಿ (ಟೊಮೆಟೋ). ಇದೀಗ ಅದೇ ಕೆಂಪು ಸುಂದರಿ ದರ ಈಗ ಮುಗಿಲು ಮುಟ್ಟಿದೆ. ಇನ್ನೊಂದೆಡೆ ಸಿಲಿಕಾನ್ ಸಿಟಿ ಜನರು ನುಗ್ಗೆಕಾಯಿ ಸಹವಾಸ ಬೇಡ ಅಂತಿದ್ದಾರೆ.ಇದರ ಜೊತೆಯಲ್ಲಿ ಉಳಿದಂತೆ ಅವರೆಕಾಯಿ, ಬೀನ್ಸ್, ತೊಂಡೆಕಾಯಿ, ಕ್ಯಾರೆಟ್, ಹಸಿಮೆಣಸಿನಕಾಯಿ ಸೇರಿದಂತೆ ಇತರೆ ತರಕಾರಿಗಳು (ತರಕಾರಿ ಬೆಲೆ) ನೂರರ ಗಡಿಯಲ್ಲೇ ಇವೆ
ಬೆಂಗಳೂರಿಗೆ ಈ ಹಿಂದೆ ಪ್ರತಿದಿನ 100 ಟನ್ ನುಗ್ಗೆಕಾಯಿ ಸಪ್ಲೈ ಆಗ್ತಿತ್ತು. ಆದರೆ ಇದೀಗ ವಾತಾವರಣ ಬದಲಾವಣೆಯಿಂದ ನುಗ್ಗೆಕಾಯಿ ಬೆಳೆ ಸರಿಯಾಗಿ ಬಂದಿಲ್ವಂತೆ, ಇದರಿಂದ ಪ್ರತಿದಿನ ನಗರಕ್ಕೆ 30 ರಿಂದ 40 ಟನ್ ಮಾತ್ರ ನುಗ್ಗೆಕಾಯಿ ಸಪ್ಲೈ ಆಗ್ತಿದ್ಯಂತೆ.ಇತ್ತ ಒಂದು ಕೆಜಿ ನುಗ್ಗೆಕಾಯಿ 500 ರಿಂದ 600 ರೂಪಾಯಿ ಆಗಿರುವ ಕಾರಣ ಗೃಹಿಣಿಯರು ನುಗ್ಗೆಕಾಯಿ ಸಹವಾಸ ಬೇಡ ಅಂತಿದ್ದಾರೆ.
ಇದನ್ನೂ ಓದಿ: ಇಂದು ಚಿನ್ನದ ದರ ಬೆಂಗಳೂರು: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ
ಆರಕ್ಕೇರಿದ ಟೊಮೆಟೊ, 600ಕ್ಕೆ ಜಿಗಿದ ನುಗ್ಗೆಕಾಯಿ!
ಆರಕ್ಕೇರೋ, ಮೂರಕ್ಕಿಳಿಯೋ ತರಕಾರಿ ಅಂತಾ ಕರೆಸಿಕೊಳ್ಳೋ ತರಕಾರಿ ಅಂದ್ರೆ ಟೊಮೆಟೊ. ಯಾಕಂದ್ರೆ ಒಮ್ಮೆ 1 ರೂಪಾಯಿಗೆ ಒಂದು ಕೆಜಿ ಆಗುತ್ತೆ, ಮತ್ತೊಮ್ಮೆ ಶತಕದ ಆಟ ಆಡುತ್ತೆ. ಹೀಗೆ ಆಟವಾಡ್ತಿರೋ ಈಗ ಶತಕದ ಸಮೀಪ ಬಂದು ನಿಂತಿದೆ. ರಾಜ್ಯದಲ್ಲಿ ಟೊಮೆಟೊಗೆ ಫೇಮಸ್ ಆಗಿರೋ ಕೋಲಾರದಲ್ಲೇ 15 ಕೆಜಿ ಒಂದು ಬಾಕ್ಸ್‌ನ ಬೆಲೆ 600 ರಿಂದ 850 ಆಗಿದೆ. ಅಂದ್ರೆ ಹೋಲ್ಸೇಲ್ ದರವೇ ಪ್ರತೀ ಕೆಜಿಗೆ 50 ರಿಂದ 60 ರೂಪಾಯಿ ಆಗಿದೆ. ಗ್ರಾಹಕ 70- 80 ರೂಪಾಯಿಗೆ ಸಿಗ್ತಿದೆ. ಹೊರ ರಾಜ್ಯಗಳಲ್ಲಿ ಜನರಿಗೆ ಬೇಡಿಕೆಯಿದೆ. ಬೇಡಿಕೆಯಂತೆ ಮಾರುಕಟ್ಟೆಗೆ ಬರ್ತಿಲ್ಲ. ಹೀಗೇ ಬೆಲೆ ಏರಿಕೆ ಆಗಿದೆ.
ಇನ್ನು ಟೊಮೆಟೊ ಜತೆ ನುಗ್ಗೆಕಾಯಿ ಕೂಡ ಭರ್ಜರಿ ಬೆಲೆ ಹೆಚ್ಚಿಸಿಕೊಂಡಿದೆ. ಬೆಂಗಳೂರಿಗೆ ನಿತ್ಯ 100 ಟನ್ ನುಗ್ಗೆಕಾಯಿ ಬರ್ತಿತ್ತು. ಆದ್ರೀಗ ಅದು 40 ರಿಂದ 30 ಟನ್‌ಗೆ ಇಳಿದಿದೆ. ಹೀಗಾಗಿ ಆವಕ ಕುಸಿತ ಆಗ್ತಿದ್ದಂತೆ ಬೆಲೆ ಏರಿಕೆ ಆಗಿದೆ. ಒಂದು ಕೆಜಿ ನುಗ್ಗೆಕಾಯಿ ಬೆಲೆ ಬರೋಬ್ಬರಿ 600 ರೂಪಾಯಿಗೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ನುಗ್ಗೆಕಾಯಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಅಲ್ಲಿ ಬೆಳೆ ಬರೋವರೆಗೂ ಇದೇ ದರ ಮುಂದುವರಿಯಲಿದೆ
ತರಕಾರಿ ಹೋಲ್ ಸೇಲ್ ಮತ್ತು ರಿಟೇಲ್ ದರಗಳು.
- ನುಗ್ಗೆಕಾಯಿ- 500 ರಿಂದ 600 ರುಪಾಯಿ.
- ಅವರೆಕಾಯಿ- 80 ರಿಂದ 100 ರೂಪಾಯಿ.
- ಹಸಿರು ಬಟಾಣಿ- 80 ರಿಂದ 100 ರುಪಾಯಿ.
- ಬೀನ್ಸ್- 60 ರಿಂದ 80 ರೂಪಾಯಿ.
- ತೊಂಡೆಕಾಯಿ- 80 ರಿಂದ 100 ರುಪಾಯಿ.
- ತೊಗರಿಕಾಯಿ- 70 ರಿಂದ 80 ರೂಪಾಯಿ.
- ಕ್ಯಾರೆಟ್- 60 ರಿಂದ 80 ರೂಪಾಯಿ.
- ಬೀಟ್ ರೂಟ್- 60 ರಿಂದ 60 ರುಪಾಯಿ.
- ಹಣ್ಣು ಹುರಳಿಕಾಯಿ- 100 ರಿಂದ 120 ರುಪಾಯಿ.
- ಹಸಿ ಮೆಣಸಿನಕಾಯಿ- 80 ರಿಂದ 100 ರುಪಾಯಿ.
- ಬೆಂಡೇಕಾಯಿ- 60 ರಿಂದ 80 ರುಪಾಯಿ.
- ಟೊಮೆಟೊ- 60 ರಿಂದ 80 ರೂಪಾಯಿ.
ಇನ್ನೂ ಹೋಲ್ ಸೇಲ್ ನಲ್ಲಿ 500 ರೂಪಾಯಿ ಕೆಜಿಗೆ ಮಾರಾಟವಾಗುತ್ತಿರುವ ನುಗ್ಗೆಕಾಯಿ, ರಿಟೇಲ್ ನಲ್ಲಿ 600 ಗೆ ಮಾರಾಟವಾಗ್ತಿದೆ. ಶೇಕಡ 60%ರಷ್ಟು ನುಗ್ಗೆಕಾಯಿ ಪೊರೈಕೆ ಕುಸಿತ ಕಂಡಿದಂತೆ. ತಮಿಳುನಾಡಿನಿಂದ ನುಗ್ಗೆಕಾಯಿ ಸಪ್ಲೈ ಬರುವವರೆಗೂ ದರದಲ್ಲಿ ಕಡಿಮೆ ಆಗೋದಿಲ್ವಂತೆ. ತಮಿಳುನಾಡಿನಲ್ಲಿ ರೈತರು ಹೆಚ್ಚಾಗಿ ಬೆಳೆ ಬೆಳೆದಿದ್ದು, ಜನವರಿ ಫೆಬ್ರವರಿಯಲ್ಲಿ ಒಂದಷ್ಟು ಬೆಲೆ ಕಡಿಮ ಆಗಲಿದಂತೆ. ಈ ಹಿಂದೆ ನುಗ್ಗೆಕಾಯಿ ಬೆಲೆ ಕಡಿಮೆ ಇದ್ದಾಗ ಮಾರಾಟ ಮಾಡ್ತಿದ್ವಿ ದರ ಏರಿಕೆ ಆದ ಮೇಲೆ ನುಗ್ಗೆಕಾಯಿ ಮಾರಾಟ ಮಾಡುವುದನ್ನು ಬಿಟ್ಟಿದ್ದೇವೆ ಅಂತಾರೇ ತರಕಾರಿ ವ್ಯಾಪಾರಿ ಅಜಯ್.
ಒಟ್ಟಿನಲ್ಲಿ ಅಕಾಲಿಕ ಮಳೆ ಮತ್ತು ಚಂಡಮಾರುತದ ಎಫೆಕ್ಟ್ ನಿಂದ ನುಗ್ಗೆಕಾಯಿ ಸೇರಿದಂತೆ ತರಕಾರಿ ದರ ಗಗನಕ್ಕೇರಿದ್ದು, ಡಿಸೆಂಬರ್ ನಲ್ಲೂ ದರ ಕಡಿಮೆ ಆಗಲಿದ್ಯಾ ಎಂದು ಕಾದು ನೋಡಬೇಕಾಗಿದೆ.