ನಾಳೆಯ ಹವಾಮಾನ: ಬೀದರ್​​ನಲ್ಲಿ ನಿಲ್ಲದ ಚಳಿ ಅಬ್ಬರ; ಹೇಗಿರಲಿದೆ ಬೆಂಗಳೂರು ವಾತಾವರಣ?

ನಾಳೆಯ ಹವಾಮಾನ: ಬೀದರ್​​ನಲ್ಲಿ ನಿಲ್ಲದ ಚಳಿ ಅಬ್ಬರ; ಹೇಗಿರಲಿದೆ ಬೆಂಗಳೂರು ವಾತಾವರಣ?


ಬೆಂಗಳೂರು, ಡಿಸೆಂಬರ್ 17: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಾಳೆ ಒಣಹವೆ ಇರುತ್ತದೆ. ಮುಂಜಾನೆ ವೇಳೆಗೆ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಇಳಿಕೆ ಕಂಡುಬರುತ್ತದೆ, ಹಲವು ಜಿಲ್ಲೆಗಳಲ್ಲಿ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಭಾಗದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರುತ್ತದೆ. ಬೆಳಿಗ್ಗೆ ಮತ್ತು ರಾತ್ರಿ ವೇಳೆಯಲ್ಲಿ ಚಳಿ ಹೆಚ್ಚಾಗುವ ನಿರೀಕ್ಷೆಯಿದೆ, ಮಳೆಯ ಬಗ್ಗೆ ಯಾವುದೇ ಸೂಚನೆ ಇಲ್ಲ.

ಕರ್ನಾಟಕದ ಉತ್ತರ ಒಳನಾಡು ಭಾಗದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹವಾಮಾನ ಮುಂದುವರಿಯಲಿದೆ. ಬೆಳಗಿನ ಹೊತ್ತಿನಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ, ಹಗಲಿನ ವೇಳೆ ಸಾಮಾನ್ಯ ಉಷ್ಣಾಂಶ ಇರಲಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರುವ ಸಾಧ್ಯತೆ ಇದೆ. ಮಳೆಯ ಸಾಧ್ಯತೆ ಇಲ್ಲದಿದ್ದರೂ ಕೊಂಚ ಮಟ್ಟಿನ ತಂಪಿನ ವಾತಾವರಣವಿದೆ. ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಮೋದಿ ಇರಲಿದೆ, ತಂಪು ವಾತಾವರಣದ ಅನುಭವ ಪ್ರದರ್ಶನ.

ಇದನ್ನೂ ಓದಿ: ವಿಜಯಪುರದಲ್ಲಿ ದಾಖಲಾಯ್ತು 7 ಡಿಗ್ರಿ ಸೆಲ್ಸಿಯಸ್ ತಾಪಮಾನ; ಮೂರು ಜಿಲ್ಲೆಗಳಿಗೆ ಎಲ್ಲೋ ಎಚ್ಚರಿಕೆ

ಕನಿಷ್ಠ ಉಷ್ಣಾಂಶ ಮಾಹಿತಿ

ಬೆಂಗಳೂರಿನಲ್ಲಿ 15°C, ಬೆಂಗಳೂರು ಗ್ರಾಮಾಂತರ 14°C, ಮೈಸೂರು 14°C, 15°C, ರಾಮನಗರ 14°C, ತುಮಕೂರು 13°C, ಕೋಲಾರ 13°C, ಚಿಕ್ಕಬಳ್ಳಾಪುರ 12°C, ಚಾಮರಾಜನಗರ 14°C, ಬೆಳಗಾವಿ 13°C, ಧಾರವಾಡ 14°C, ಹಾವೇರಿ 14°C, ಹಾವೇರಿ 14°C, ಗಲ 14°C, ವಿಜಯಪುರ 16°C, ಬೀದರ್ 12°C, ಕಲಬುರಗಿ 16°C, ಯಾದಗಿರಿ 15°C, ಕೊಪ್ಪಳ 16°C, ಬಳ್ಳಾರಿ 17°C, ರಾಯಚೂರು 17°C, ದಕ್ಷಿಣ ಕನ್ನಡ 22°C, ಉಡುಪಿ 22°C, ಉತ್ತರ ಕನ್ನಡ 21°C, ಉಷ್ಣಾಂಶ 16°C, ಶಿವಮೊಗ್ಗ ಕನಿಷ್ಠ 16°C ಚಿಕ್ಕಮಗಳೂರು ಅಂದಾಜಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *