
ಕಿಡ್ನಿಗಳ ಆರೋಗ್ಯವನ್ನು ಸುಧಾರಿಸಲು ಆಹಾರ ಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ. ಯಾಕಂದ್ರೆ, ದೇಹದಲ್ಲಿನ ತ್ಯಾಜ್ಯಗಳನ್ನು ಫಿಲ್ಟರ್ ಮಾಡಲು, ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸಲು ಮತ್ತು ದ್ರವದ ಮಟ್ಟವನ್ನು ಕಾಪಾಡಿಕೊಳ್ಳಲು ಕಿಡ್ನಿಗಳು ಮುಖ್ಯವಾಗಿವೆ.<img><p>ಕಿಡ್ನಿಗಳ ಆರೋಗ್ಯವನ್ನು ಸುಧಾರಿಸುವಲ್ಲಿ ಆಹಾರ ಕ್ರಮವು ದೊಡ್ಡ ಪಾತ್ರ ವಹಿಸುತ್ತದೆ. ದೇಹದ ತ್ಯಾಜ್ಯಗಳನ್ನು ಫಿಲ್ಟರ್ ಮಾಡುವುದು, ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸುವುದು ಮತ್ತು ದ್ರವದ ಮಟ್ಟವನ್ನು ಕಾಪಾಡಿಕೊಳ್ಳುವುದು ಕಿಡ್ನಿಗಳ ಪ್ರಮುಖ ಕೆಲಸ. ಕಿಡ್ನಿ ರೋಗಿಗಳು ತಮ್ಮ ಆಹಾರದಲ್ಲಿ ಕಡ್ಡಾಯವಾಗಿ ಸೇರಿಸಿಕೊಳ್ಳಬೇಕಾದ 5 ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.</p><img>ಎಲೆಕೋಸಿನಲ್ಲಿ ಪೊಟ್ಯಾಶಿಯಂ ಮತ್ತು ಫಾಸ್ಫರಸ್ ಕಡಿಮೆ ಇರುತ್ತದೆ. ಆದರೆ ಇದರಲ್ಲಿ ವಿಟಮಿನ್‌ಗಳು ಮತ್ತು ಫೈಬರ್ ಅಧಿಕವಾಗಿದೆ. ಇದನ್ನು ಸಲಾಡ್‌ಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹಸಿಯಾಗಿ ಬಳಸಬಹುದು. ಇದರ ಉರಿಯೂತ ಶಮನಕಾರಿ ಗುಣಗಳು ಕಿಡ್ನಿ ಆರೋಗ್ಯಕ್ಕೆ ಪ್ರಯೋಜನಕಾರಿ.<img>ಜೀರಿಗೆ ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಇದನ್ನು ಬೆಳಿಗ್ಗೆ ಬಿಸಿಯಾಗಿ ಕುಡಿಯಬಹುದು ಅಥವಾ ದಿನವಿಡೀ ಸ್ವಲ್ಪ ಸ್ವಲ್ಪವಾಗಿ ಸೇವಿಸಬಹುದು.<img>ಸೇಬುಗಳಲ್ಲಿ ಪೊಟ್ಯಾಶಿಯಂ ಕಡಿಮೆ ಇರುತ್ತದೆ. ಇವುಗಳಲ್ಲಿ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಇರುವುದರಿಂದ, ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಈ ಎರಡು ಅಂಶಗಳು ಕಿಡ್ನಿ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ.<img>ಸೀಬೆಹಣ್ಣನ್ನು ಮಿತವಾಗಿ ಸೇವಿಸಿದಾಗ ವಿಟಮಿನ್ ಸಿ ಮತ್ತು ಫೈಬರ್ ಸಿಗುತ್ತದೆ. ಆದರೆ, ಹೆಚ್ಚು ಮಾಗಿದ ಸೀಬೆಹಣ್ಣನ್ನು ತಿನ್ನಬಾರದು, ಏಕೆಂದರೆ ಅವುಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿರುತ್ತದೆ.<img>ಸಾಲ್ಮನ್ ಮತ್ತು ಟ್ಯೂನಾದಂತಹ ಕೊಬ್ಬಿನ ಮೀನುಗಳು ಕಿಡ್ನಿಗಳನ್ನು ರಕ್ಷಿಸುತ್ತವೆ. ಇವುಗಳಲ್ಲಿ ಉರಿಯೂತವನ್ನು ತಡೆಯುವ ಒಮೆಗಾ-3 ಫ್ಯಾಟಿ ಆಸಿಡ್‌ಗಳು ಇರುತ್ತವೆ.
Source link
ಕಿಡ್ನಿ ರೋಗಿಗಳೇ, ಈ 5 ಸರಳ ಆಹಾರಗಳನ್ನು ತಪ್ಪದೇ ಬಳಸಿ!