ಹಿಂದೂ ಧರ್ಮವು ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ತನ್ನ ವಿಶಿಷ್ಠ ಆಚರಣೆ ಮೂಲಕ ಜಗತ್ತಿಗೆ ಹಲವು ವಿಚಾರಗಳಲ್ಲಿ ಹಿಂದೂ ಧರ್ಮವು ಸ್ಪೂರ್ತಿಯಾಗಿದೆ. ಅತಿಹೆಚ್ಚು ಹಿಂದೂ ಧರ್ಮವನ್ನು ಅನುಸರಿಸುವ ಜಗತ್ತಿನ ಟಾಪ್ 6 ದೇಶಗಳು ಯಾವುವು ನೋಡೋಣ ಬನ್ನಿ.

ಹಿಂದೂ ಧರ್ಮದ ಉಗಮ ಸ್ಥಾನವೇ ಭಾರತ. ಇದು ಬಹುಸಂಸ್ಕೃತಿಯ ನಾಡಾಗಿದ್ದರೂ, ಇಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ. ಭಾರತದಲ್ಲಿ ಸುಮಾರು 100 ಕೋಟಿಗೂ ಅಧಿಕ ಹಿಂದೂಗಳಿದ್ದಾರೆ ಎಂದು ವರದಿಯಾಗಿದೆ.

ಭಾರತದ ನೆರೆಯ ರಾಷ್ಟ್ರವು ಜಗತ್ತಿನ ಏಕೈಕ ಹಿಂದೂ ರಾಷ್ಟ್ರವಾಗಿತ್ತು. ಆದರೆ 2008ರಿಂದೀಚೆಗೆ ಈ ರಾಷ್ಟ್ರ ಕೂಡಾ ಜಾತ್ಯಾತೀತ ರಾಷ್ಟ್ರವಾಗಿದೆ. ಈ ದೇಶದ ಒಟ್ಟು ಜನಸಂಖ್ಯೆಯ ಶೇ.81% ಮಂದಿ ಹಿಂದು ಧರ್ಮವನ್ನು ಫಾಲೋ ಮಾಡುತ್ತಾರೆ. ಅಂದರೆ ಸುಮಾರು ಎರಡೂವರೆ ಕೋಟಿಗೂ ಅಧಿಕ ಮಂದಿ ಹಿಂದೂಗಳು ನೇಪಾಳದಲ್ಲಿ ವಾಸಿಸುತ್ತಿದ್ದಾರೆ.

ಭಾರತದ ಮತ್ತೊಂದು ನೆರೆಯ ರಾಷ್ಟ್ರವಾಗಿರುವ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿರುವ ಸುದ್ದಿಗಳು ವರದಿಯಾಗುತ್ತಲೇ ಇವೆ. ಹೀಗಿದ್ದೂ ಬಾಂಗ್ಲಾದೇಶದಲ್ಲಿ ಸುಮಾರು ಒಂದೂವರೆ ಕೋಟಿಗೂ ಅಧಿಕ ಮಂದಿ ವಾಸವಾಗಿದ್ದಾರೆ.

ಕಟ್ಟರ್ ಮುಸ್ಲಿಂ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಇಂಡೋನೇಷ್ಯಾದಲ್ಲೂ ಹಿಂದೂಗಳಿದ್ದಾರೆ. ಇಂಡೋನೇಷ್ಯಾದಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದು, ಇಲ್ಲಿ 50 ಲಕ್ಷ ಹಿಂದೂಗಳು ಬದುಕು ಕಟ್ಟಿಕೊಂಡಿದ್ದಾರೆ.

ನೆರೆಯ ದೇಶವಾದ ಪಾಕಿಸ್ತಾನದಲ್ಲಿ ವರ್ಷದಿಂದ ವರ್ಷಕ್ಕೆ ಹಿಂದೂಗಳ ಸಂಖ್ಯೆ ಕುಸಿಯುತ್ತಾ ಸಾಗುತ್ತಿದೆ. ಇದೀಗ ಪಾಕಿಸ್ತಾನದಲ್ಲಿ ಸುಮಾರು 44 ಲಕ್ಷ ಹಿಂದೂಗಳು ವಾಸವಾಗಿದ್ದಾರೆ ಎಂದು ವರದಿಯಾಗಿದೆ.

ದ್ವೀಪರಾಷ್ಟ್ರವಾಗಿರುವ ಶ್ರೀಲಂಕಾದಲ್ಲೂ ಲಕ್ಷಾಂತರ ಮಂದಿ ಹಿಂದೂಗಳು ಬದುಕು ಕಟ್ಟಿಕೊಂಡಿದ್ದಾರೆ. ಶ್ರೀಲಂಕಾದಲ್ಲಿ ಸುಮಾರು 30 ಲಕ್ಷ ಹಿಂದೂಗಳು ವಾಸವಾಗಿದ್ದಾರೆ.

Source link
ಅತಿಹೆಚ್ಚು ಹಿಂದೂ ಧರ್ಮವನ್ನು ಪಾಲಿಸುವ ಟಾಪ್ 6 ದೇಶಗಳಿವು! ಈ ಲಿಸ್ಟ್‌ನಲ್ಲಿದೆಯಾ ಪಾಕಿಸ್ತಾನ?