‘ಟಾಕ್ಸಿಕ್’ ಸಿನಿಮಾದ (ವಿಷಕಾರಿ ಚಲನಚಿತ್ರ) ಟೀಸರ್ ಸೃಷ್ಟಿಸಿದ ಹಲ್ಚಲ್ ತುಂಬಾನೇ ದೊಡ್ಡದು. ಈ ಟೀಸರ್ ನಲ್ಲಿ ಅಡಲ್ಟ್ ದೃಶ್ಯಗಳು ಇವೆ ಎಂದು ಅನೇಕರು ಕೊಂಕು ತೆಗೆದಿದ್ದರು. ಈಗ ಕ್ರೈಸ್ತ ಸಮುದಾಯದವರು ಈ ಸಿನಿಮಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಟಾಕ್ಸಿಕ್ ಸಿನಿಮಾ ವಿರುದ್ಧ ದೂರು ದಾಖಲು ಮಾಡಿದೆ. ಸಿನಿಮಾದ ದೃಶ್ಯಗಳಲ್ಲಿ ಕ್ರೈಸ್ತರಿಗೆ ಮುಜುಗರ ಹಾಗೂ ಧರ್ಮಕ್ಕೆ ಅಪಮಾನವಾಗಿದೆ ಎಂದು ಆರೋಪಿಸಲಾಗಿದೆ.
‘ಟಾಕ್ಸಿಕ್’ ಸಿನಿಮಾ ಟೀಸರ್ ಜನವರಿ 8ರಂದು ರಿಲೀಸ್ ಆಯಿತು. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ನಟಿಸಿದ್ದಾರೆ. ಈ ಟೀಸರ್ ನೋಡಿ ಅಪಸ್ವರ ಶುರುವಾಗಿದೆ. ಜೊತೆಗೆ ಸಿನಿಮಾಗೆ ಮತ್ತೊಂದು ಬರೋ ಸೂಚನೆ ಸಿಕ್ಕಿದೆ. ಟೀಸರ್ ಅಲ್ಲಿ ಕಥಾ ನಾಯಕ ರಾಯ ಕಾರಲ್ಲಿ ಇದೆ ಕ್ರಿಯೆ ನಡೆಸೋ ದೃಶ್ಯ. ಇದರಿಂದ ಕಾರು ಅಲುಗಾಡುತ್ತದೆ. ಕಾರು ಅಲುಗಾಡಿ ಡೆಟೋನೇಟರ್ ಮೂಲಕ ಬಾಂಬ್ ಸಿಡಿಸದಿದ್ದರೆ. ಕಾರಿನ ದೃಶ್ಯದ ವಿಷಯದಲ್ಲಿ ಕೊಂಕು ತೆಗೆಯಲಾಗಿದೆ.
ಸಿನಿಮಾದಲ್ಲಿ ದೇವದೂತ ಸಂತ ಮಿಕಯೇಲ್ಗೆ ಅಪಮಾನ ಮಾಡಲಾಗಿದೆ ಎಂಬುದು ಕ್ರೈಸ್ತ ಸಮುದಾಯದವರ ದೂರು. ‘ದೇವದೂತರ ಮುಂದೆ ಅಶ್ಲೀಲ ಚಿತ್ರೀಕರಿಸಿದ್ದಾರೆ. ಯೂಟ್ಯೂಬ್ ಪೋಸ್ಟ್ ತೆಗೆಯಬೇಕು, ದೃಶ್ಯಗಳನ್ನು ತೆಗೆಯಬೇಕು’ ಎಂದು ದೂರಿನಲ್ಲಿ ಕೋರಲಾಗಿದೆ. ಕ್ರೈಸ್ತರ ಒಕ್ಕೂಟ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲು ಮಾಡಿದೆ.
ಇದನ್ನೂ ಓದಿ: ಅಬ್ಬಬ್ಬಾ, ಯಶ್ ಬುದ್ಧಿವಂತಿಕೆಯನ್ನು ಮೆಚ್ಚಲೇಬೇಕು; ಈ ಡೀಲ್ ನಿಂದ ‘ಟಾಕ್ಸಿಕ್’ಗೆ ದೊಡ್ಡ ಲಾಭ
ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹಸಚಿವರು, ಸೆನ್ಸರ್ ಬೋರ್ಡ್‌ಗೂ ದೂರು ನೀಡಲಾಗಿದೆ. ಕ್ರೈಸ್ತರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ, ಸಿನಿಮಾ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಲಾಗಿದೆ. ಸಾಮಾನ್ಯವಾಗಿ ಈ ರೀತಿಯ ವಿಷಯಗಳನ್ನು ಮಾಡಿ ಮೊದಲೇ ಚರ್ಚೆ ಆದರೆ ಸೆನ್ಸಾರ್ ವೇಳೆ ಆ ವಿಷಯವನ್ನು ಮಂಡಳಿಯವರು ಗಂಭೀರವಾಗಿ ಸ್ವೀಕರಿಸುವ ಸಾಧ್ಯತೆ ಇರುತ್ತದೆ. ‘ಟಾಕ್ಸಿಕ್’ ವಿಷಯವೂ ಸಹ ಆಗುತ್ತದೆಯೇ ಎಂಬ ಅನುಮಾನ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.