Headlines

‘ಧುರಂಧರ್ 2’ ಜೊತೆ ಕ್ಲ್ಯಾಶ್ ಮಿಸ್ ಮಾಡಿಕೊಂಡ ‘ಟಾಕ್ಸಿಕ್’ ಎದುರು ಬರ್ತಿವೆ ಡಜನ್ ಸಿನಿಮಾಗಳು

‘ಧುರಂಧರ್ 2’ ಜೊತೆ ಕ್ಲ್ಯಾಶ್ ಮಿಸ್ ಮಾಡಿಕೊಂಡ ‘ಟಾಕ್ಸಿಕ್’ ಎದುರು ಬರ್ತಿವೆ ಡಜನ್ ಸಿನಿಮಾಗಳು


'ಧುರಂಧರ 2' ಜೊತೆ ಕ್ಲ್ಯಾಶ್ ಮಿಸ್ ಮಾಡಿಕೊಂಡ 'ಟಾಕ್ಸಿಕ್' ಎದುರು ಬರ್ತಿವೆ ಡಜನ್ ಸಿನಿಮಾಗಳು

‘ಟಾಕ್ಸಿಕ್’ ಸಿನಿಮಾ (ವಿಷಕಾರಿ ಚಲನಚಿತ್ರ) ರಿಲೀಸ್ ಗೆ ವಿಘ್ನ ಎದುರಾಗಿತ್ತು. ಇರಾನ್ ಹಾಗೂ ಇಸ್ರೇಲ್ ಯುದ್ಧದ ಕಾರಣ ನೀಡಿ ಇವರು ಸಿನಿಮಾವನ್ನು ಮುಂದಕ್ಕೆ ಹಾಕಿಕೊಂಡರು. ಇದರಿಂದ ‘ಧುರಂಧರ 2’ ಸಿನಿಮಾ ಜೊತೆಗಿನ ಕ್ಲ್ಯಾಶ್ ಮಿಸ್ ಆಗಿದೆ. ಆದರೆ, ಕೆಲವು ವರದಿಗಳ ಪ್ರಕಾರ ‘ಟಾಕ್ಸಿಕ್’ ಸಿನಿಮಾ ಈಗ ಡಜನ್ ಸಿನಿಮಾಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ‘ಟಾಕ್ಸಿಕ್’ ತುಂಬಾನೇ ದೊಡ್ಡ ಚಾಲೆಂಜ್ ಎದುರಿಸುವ ಸೂಚನೆ ಪಡೆದಿದೆ.

‘ಟಾಕ್ಸಿಕ್’ vs ‘ಧುರಂಧರ 2’ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಯಾವುದಾದರೂ ಒಂದು ಸಿನಿಮಾ ಮುಂದಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕೊನೆಗೆ, ‘ಟಾಕ್ಸಿಕ್’ ತಂಡದವರು ಚಿತ್ರವನ್ನು ಜೂನ್ 4ಕ್ಕೆ ಮುಂದಕ್ಕೆ ಹಾಕಿಕೊಂಡರು. ಯಶ್ ಈಗ 11 ಸಿನಿಮಾಗಳಿಂದ ಸ್ಪರ್ಧೆ ಎದುರಿಸಬೇಕಿದೆ.

‘ಟಾಕ್ಸಿಕ್’ ಸಿನಿಮಾದ ಬಜೆಟ್ ದೊಡ್ಡದಿದೆ. ಹೀಗಾಗಿ, ಈ ಸಿನಿಮಾ ಕನಿಷ್ಠ ಎರಡು ತಿಂಗಳ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಬೇಕಾದ ಅನಿವಾರ್ಯತೆ ಇದೆ. ಆದರೆ, ಈ ಎರಡು ತಿಂಗಳಲ್ಲಿ ಬರೋಬ್ಬರಿ 12 ಚಿತ್ರಗಳು ಬರುತ್ತಿವೆ.

ಜೂನ್ 5ಕ್ಕೆ ಹಾಲಿವುಡ್‌ನ ‘ಮಾಸ್ಟರ್ ಆಫ್ ದಿ ಯೂನಿವರ್ಸ್’ ಬರುತ್ತಿದೆ. ಜೂನ್ 12 ರಂದು ‘ಹೇ ಜವಾನಿ ತೋ ಇಷ್ಕ್ ಹೋನಾ ಹೇ’, ‘ಮೇ ವಾಪ್ಸ್ ಆವುಂಗಾ’ ತೆರೆಗೆ ಬರುತ್ತಿದೆ. ಜೂನ್ 19 ರಂದು ‘ಕಾಕ್ಟೇಲ್ 2’ ಮತ್ತು ‘ಟಾಯ್ ಸ್ಟೋರಿ 5’ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದ ಮಧ್ಯೆ ಶೀಘ್ರವೇ ಹೊಸ ಸಿನಿಮಾ ಸೆಟ್ಟೇರಲಿದೆ ಯಶ್

ಜೂನ್ 26ಕ್ಕೆ ‘ಕ್ಯಾರಿ ಆನ್ ಜಟ್ಟಾ 4’ ತೆರೆಗೆ ಬರಲಿದೆ. ಜುಲೈ 1 ರಂದು ‘ಮಿನಿಯನ್ 2’, ಜುಲೈ 3 ರಂದು ‘ಧಮಾಲ್ 4’, ಜುಲೈ 9 ರಂದು ‘ಮೋನಾ’, ಜುಲೈ 10 ರಂದು ‘ಆಲ್ಫಾ’, ಜುಲೈ 17 ರಂದು ‘ದಿ ಒಡಿಸ್ಸಿ’, ಜುಲೈ 31 ರಂದು ‘ಸ್ಪೈಡರ್ ಮ್ಯಾನ್, ‘ಬ್ರ್ಯಾಂಡ್ ನ್ಯೂ ಡೇ’ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *