‘ಟಾಕ್ಸಿಕ್’ ಮ್ಯೂಸಿಕ್; ಅನಿರುದ್ಧ್ ರವಿಚಂದರ್​ ಹೊರಗಿಟ್ಟು ಕನ್ನಡಿಗನಿಗೆ ಅವಕಾಶ ಕೊಟ್ಟ ಯಶ್

‘ಟಾಕ್ಸಿಕ್’ ಮ್ಯೂಸಿಕ್; ಅನಿರುದ್ಧ್ ರವಿಚಂದರ್​ ಹೊರಗಿಟ್ಟು ಕನ್ನಡಿಗನಿಗೆ ಅವಕಾಶ ಕೊಟ್ಟ ಯಶ್


ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (ವಿಷಕಾರಿ ಚಲನಚಿತ್ರ) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ ಎಂದರೆ ಯಾವುದೇ ಪ್ರಮುಖ ವಿಷಯಗಳು ಲೀಕ್ ಆಗುತ್ತಿಲ್ಲ. ಈ ಸಿನಿಮಾಗೆ ಮ್ಯೂಸಿಕ್ ಯಾರು ಮಾಡ್ತಾರೆ ಎಂಬ ಚರ್ಚೆಗಳು ನಡೆದವು. ಕೊನೆಗೂ ಉತ್ತರ ಸಿಕ್ಕಿದೆ. ಕನ್ನಡದ ಮ್ಯೂಸಿಕ್ ಕಂಪೋಸರ್ನ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

‘ಟಾಕ್ಸಿಕ್’ ಸಿನಿಮಾ ಕನ್ನಡದ ಜೊತೆಗೆ ಇಂಗ್ಲಿಷ್ ನಲ್ಲೂ ರಿಲೀಸ್ ಆಗುತ್ತಿದೆ. ಎರಡೂ ಭಾಷೆಯಲ್ಲಿ ಒಟ್ಟಿಗೆ ಸಿನಿಮಾನ ಶೂಟ್ ಮಾಡಲಾಗುತ್ತಿದೆ. ಹಾಲಿವುಡ್‌ಗೆ ಸಾಕಷ್ಟು ಸಿನಿಮಾ ಮಾರಾಟವಾಗಬೇಕು ಎಂದರೆ ಸಿದ್ಧತೆ ಬೇಕು. ಈ ಕಾರಣದಿಂದಲೇ ‘ಟಾಕ್ಸಿಕ್’ ತಂಡದವರು ಹೆಚ್ಚು ಶ್ರಮಪಡುತ್ತಿದ್ದಾರೆ. ಈ ಸಿನಿಮಾಗೆ ರಾಜೀವ್ ರವಿ ಛಾಯಾಗ್ರಹಣ ಮಾಡಿದ್ದಾರೆ, ಸ್ಟಂಟ್‌ಗಳನ್ನು ಹಾಲಿವುಡ್‌ನ ಜೆಜೆ ಪೆರ್ರಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡೋದು ಯಾರು ಎಂಬ ಪ್ರಶ್ನೆ ಇತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ರವಿ ಬಸ್ರೂರು ಅವರೇ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಮ್ಯೂಸಿಕ್ ಮಾಡುತ್ತಾರೆ ಎಂಬ ಸುದ್ದಿ ಈ ಮೊದಲು ಹರಿದಾಡಿತ್ತು. ಚಿತ್ರಕ್ಕಾಗಿ 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿತ್ತು. ಅನಿರುದ್ಧ್ ಕೊಡೋ ಸಂಗೀತ ಗಮನ ಸೆಳೆಯುವ ರೀತಿಯಲ್ಲಿರುತ್ತದೆ ಎಂಬ ಕಾರಣದಿಂದ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ, ಈಗ ‘ಟಾಕ್ಸಿಕ್’ ತಂಡ ಮನಸ್ಸು ಬದಲಿಸಿದಂತೆ ಇದೆ.

ರವಿ ಬಸ್ರೂರು ಅವರು ‘ಟಾಕ್ಸಿಕ್’ ಕೆಲಸದಲ್ಲಿ ಬ್ಯೂಸಿ ಆಗಿದ್ದಾರೆ. ಯಶ್ ಹಾಗೂ ತಂಡದವರು ಆಗಾಗ ರವಿ ಅವರ ಸ್ಟುಡಿಯೋಗೆ ಭೇಟಿ ನೀಡಿ ಕೆಲಸದ ಬಗ್ಗೆ ಅಪ್‌ಡೇಟ್ ಪಡೆಯುತ್ತಿದ್ದಾರೆ. ಯಶ್ ನಟನೆಯ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಯಶಸ್ಸು ಕಾಣುವಲ್ಲಿ ರವಿ ಬಸ್ರೂರು ಅವರ ಸಂಗೀತದ ಕೊಡುಗೆ ತುಂಬಾ ದೊಡ್ಡದಿದೆ. ಅವರು ‘ಟಾಕ್ಸಿಕ್’ ಚಿತ್ರದಲ್ಲಿ ಯಾವ ರೀತಿ ಮೋದಿ ಮಾಡುತ್ತಾರೆ ಎಂಬುದನ್ನು ನೋಡಬೇಕಾಗಿದೆ. ಈ ಮೊದಲು ರಿಲೀಸ್ ಆಗಿದ್ದ ‘ಟಾಕ್ಸಿಕ್’ ಚಿತ್ರದ ಗ್ಲಿಂಪ್ಸ್‌ಗೆ ರವಿ ಅವರೇ ಸಂಗೀತ ಸಂಯೋಜನೆ ಮಾಡಿದರು.

ಇದನ್ನೂ ಓದಿ: ‘ಟಾಕ್ಸಿಕ್’ ಎದುರು ಬರಲಿದೆ ಸಲ್ಮಾನ್ ಸಿನಿಮಾ; ಶಾರುಖ್ ಗೆ ಆದ ಗತಿ ನೆನಪಿಸಿದ ಫ್ಯಾನ್ಸ್

ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ‘ಟಾಕ್ಸಿಕ್’ ನಿರ್ಮಾಣ ಮಾಡುತ್ತಿದೆ. ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್’ ಕೂಡ ಇದಕ್ಕೆ ಕೈ ಜೋಡಿಸಿದೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ ಇದ್ದಾರೆ. ಮಾರ್ಚ್ 19 ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *