‘ಧುರಂಧರ್ 2’ ಚಿತ್ರಕ್ಕಿಂತ ‘ಟಾಕ್ಸಿಕ್’ ಚಿತ್ರಕ್ಕೆ ಸಿಕ್ತು ಹೆಚ್ಚುವರಿ 1200 ಪರದೆಗಳು?

‘ಧುರಂಧರ್ 2’ ಚಿತ್ರಕ್ಕಿಂತ ‘ಟಾಕ್ಸಿಕ್’ ಚಿತ್ರಕ್ಕೆ ಸಿಕ್ತು ಹೆಚ್ಚುವರಿ 1200 ಪರದೆಗಳು?


‘ಧುರಂಧರ 2’ vs ‘ಟಾಕ್ಸಿಕ್’ ಫೈಟ್‌ಗೆ ವೇದಿಕೆ ಸಿದ್ಧವಾಗುತ್ತಿದೆ. ಮಾರ್ಚ್ 19 ರಂದು ಎರಡೂ ಸಿನಿಮಾಗಳು ಮುಖಾಮುಖಿ ಆಗುತ್ತಿವೆ. ಈ ಎರಡು ಸಿನಿಮಾಗಳು ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಹೀಗಿರುವಾಗಲೇ, ‘ಟಾಕ್ಸಿಕ್’ ಸಿನಿಮಾಗೆ (ವಿಷಕಾರಿ ಚಲನಚಿತ್ರ) ‘ಧುರಂಧರ 2’ ಚಿತ್ರಕ್ಕಿಂತ ಹೆಚ್ಚುವರಿಯಾಗಿ 1200 ಪರದೆಗಳು ಸಿಗಲಿವೆ ಎಂದು ಹೇಳಲಾಗಿದೆ.

‘ಧುರಂಧರ 2’ ಸಿನಿಮಾದ ಬಗ್ಗೆ ಒಂದು ವರ್ಗದ ಜನರಿಗೆ ನಿರೀಕ್ಷೆ ಇದೆ. ರಿಲೀಸ್ ಆಗಿರುವ ಮೊದಲ ಭಾಗವು ಹಲ್ಚಲ್ ಎಬ್ಬಿಸದ ಎರಡನೇ ಭಾಗವು ಇಷ್ಟವಾಗುತ್ತದೆ ಎಂದು ಹೇಳಬಹುದು. ‘ಟಾಕ್ಸಿಕ್’ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಲು ಕಾರಣ ಆಗಿದ್ದು ಯಶ್. ‘ಕೆಜಿಎಫ್ 2’ ಚಿತ್ರದ ಬಳಿಕ ಅವರು ಮತ್ತೊಂದು ಹಂತಕ್ಕೆ ಹೋಗಿದ್ದಾರೆ. ಈಗ ‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್ ದಾಸ್ ಜೊತೆ ಅವರು ಕೂಡ ಕಥೆ ಬರೆದು, ಸಿನಿಮಾ ನಿರ್ಮಾಣದಲ್ಲಿ ಅವರು ಕೈ ಜೋಡಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಡಾಮಿನೇಷನ್ ಮಾಡಲು ರೆಡಿ ಆದ ‘ಟಾಕ್ಸಿಕ್’; ದೊಡ್ಡ ಸಂಸ್ಥೆ ಪಾಲಾಯ್ತು ಹಂಚಿಕೆ ಹಕ್ಕು

ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ‘ಟಾಕ್ಸಿಕ್’ ಚಿತ್ರಕ್ಕೆ ಭಾರತಾದ್ಯಂತ ಸುಮಾರು 5,500 ಪರದೆಗಳು ಸಿಗುವ ಸಾಧ್ಯತೆಯಿದೆ. ‘ಧುರಂಧರ 2’ ಚಿತ್ರಕ್ಕೆ 4,300 ಪರದೆಗಳು ಸಿಗಲಿವೆ ಎಂದು ಹೇಳಲಾಗುತ್ತಾ ಇದೆ. ಹೀಗಾದಲ್ಲಿ ಯಶ್ ಚಿತ್ರಕ್ಕೆ ಹೆಚ್ಚಿನ ಮೈಲೇಜ್ ಸಿಗಲಿದೆ.

ಮೊದಲ ದಿನದ ಕಲೆಕ್ಷನ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ‘ಧುರಂಧರ 2’ ಸಿನಿಮಾ ಮೊದಲ ದಿನ ಭಾರತದಲ್ಲಿ 80-100 ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. ‘ಟಾಕ್ಸಿಕ್’ ಸಿನಿಮಾ 260 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಹಾಗಾದಾಗ ಯಶ್ ಚಿತ್ರಕ್ಕೆ ದೊಡ್ಡ ಗೆಲುವು ಸಿಕ್ಕಂತೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 1:41 pm, ಸೋಮ, 23 ಫೆಬ್ರವರಿ 26





Source link

Leave a Reply

Your email address will not be published. Required fields are marked *