ನವದೆಹಲಿ, ಫೆಬ್ರುವರಿ 11: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು (US India trade deal) ಈಗ ಭಾರತೀಯ ರೈತರ ಅಸ್ತಿತ್ವದ ಚರ್ಚೆ ಹುಟ್ಟುಹಾಕಿದೆ. ಈ ಒಪ್ಪಂದದ ಮೂಲಕ ಭಾರತದ ಕೃಷಿ ಕ್ಷೇತ್ರವನ್ನು ಸರ್ಕಾರ ಅಮೆರಿಕಕ್ಕೆ ಮಾರಿಬಿಟ್ಟಿದೆ ಎಂದು ಆರೋಪಿಸಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆಗಳಿಗೆ ಸಜ್ಜಾಗಿವೆ. ಕೃಷಿ ಮತ್ತು ಡೈರಿ ಸೆಕ್ಟರ್‌ಗಳನ್ನು ತೆರೆದಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ಟ್ರಂಪ್ ಸರ್ಕಾರದ ಫ್ಯಾಕ್ಟ್ ಶೀಟ್‌ನಲ್ಲಿ ಕೃಷಿ ಅಧ್ಯಯನ ಸೇರಿಸಲಾಗಿರುವುದು ರೈತ ಸಂಘಟನೆಗಳ ಅನುಮಾನ ಬಲಗೊಳ್ಳುತ್ತಿದೆ. ಈ ಮಧ್ಯೆ, ಅಮೆರಿಕ ಸರ್ಕಾರವು ಈ ಒಪ್ಪಂದದ ಫ್ಯಾಕ್ಟ್ ಶೀಟ್‌ನಲ್ಲಿ (US ಫ್ಯಾಕ್ಟ್ ಶೀಟ್) ಸದ್ದಿಲ್ಲದೆ ಬದಲಾವಣೆಯಾಗಿದೆ. ಗೊಂದಲಕ್ಕೀಡು ಮಾಡಿದ ಕೆಲ ವಿಚಾರಗಳಲ್ಲಿ ಸ್ಪಷ್ಟನೆ ಕೊಟ್ಟಿದೆ. ಅಮೆರಿಕದ ಫ್ಯಾಕ್ಟ್ ಶೀಟ್‌ನಲ್ಲಿ ಮಾಡಲಾದ ಕೆಲ ಬದಲಾವಣೆಗಳ ವಿವರ ಇಲ್ಲಿದೆ…
ಕಾಳುಗಳು ಈ ಒಪ್ಪಂದದಲ್ಲಿ ಇರುವುದಿಲ್ಲ…
‘ಒಣಗಿಸಿದ ಡಿಸ್ಟಿಲರ್ಸ್ ಗ್ರೇನ್ (ಡಿಡಿಜಿ, ಪಶು ಆಹಾರ), ಕೆಂಪು ಜೋಳ, ಮರ ಬೀಜಗಳು (ಬಾದಾಮಿ ಇತ್ಯಾದಿ), ಹಣ್ಣು, ಕೆಲ ಕಾಳುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಮದ್ಯ, ಹೆಚ್ಚುವರಿ ಉತ್ಪನ್ನಗಳ ಜೊತೆಗೆ ವಿಸ್ತೃತ ಶ್ರೇಣಿಯ ಅಮೆರಿಕನ್ ಆಹಾರ ಮತ್ತು ಕೃಷಿ ಉತ್ಪನ್ನಗಳು ಮತ್ತು ಎಲ್ಲಾ ವಾಣಿಜ್ಯ ಸರಕುಗಳ ಮೇಲೆ ಭಾರತವು ಟ್ಯಾರಿಫ್ ಅನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ’ ಎಂದು ಫ್ಯಾಕ್ಟ್‌ನಲ್ಲಿ ಪ್ರಕಟಿಸಲಾಗಿದೆ.
ಅಪ್‌ಡೇಟ್ ಮಾಡಲಾದ ಫ್ಯಾಕ್ಟ್ ಶೀಟ್‌ನಲ್ಲಿ ಈ ಮೇಲಿನ ಹೇಳಿಕೆಯಲ್ಲಿ ‘ಕೆಲ ಕಾಳುಗಳು’ ಎಂಬ ಪ್ರಸ್ತಾಪವನ್ನು ತೆಗೆದುಹಾಕಲಾಗಿದೆ.
ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಾಂಗ್ಲಾದೇಶ; ಟ್ಯಾರಿಫ್ ಶೇ. 19ಕ್ಕೆ ಇಳಿಕೆ
ಅಮೆರಿಕನ್ ಖರೀದಿಸುವ ಬದ್ಧತೆ ಅಲ್ಲ ಉದ್ದೇಶ ಮಾತ್ರ…
‘500 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಇಂಧನ, ಮಾಹಿತಿ, ಸಂವಹನ ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತು ಇತರ ಸಂಸ್ಥೆಗಳಿಂದ ಖರೀದಿಸಲು ಭಾರತ ಬದ್ದವಾಗಿದೆ’ ಎಂದು ಮತ್ತೊಂದು ಟರ್ಮ್ಸ್ ಆಫ್ ಇಂಡಿಯಾದಲ್ಲಿ ತಿಳಿಸಲಾಗಿದೆ. ಅದರಲ್ಲಿ ಬದಲಾವಣೆ ಮಾಡಲಾಗಿದೆ.
ಇಲ್ಲಿ ಪಟ್ಟಿ ಮಾಡಿದ ಇಂಧನ, ಕಲ್ಲಿದ್ದಲು ಉತ್ಪನ್ನಗಳ ಪಟ್ಟಿಯಿಂದ ಕೃಷಿ ಹೆಸರನ್ನು ಕೈಬಿಡಲಾಗಿದೆ. ಹಾಗೆಯೇ, 500 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಲು ಭಾರತ ಬದ್ಧವಾಗಿದೆ ಎಂದು ಬದಲಿಸಿ, ಸರಕುಗಳನ್ನು ಖರೀದಿಸಲು ಉದ್ದೇಶಿಸಿದೆ.
ಡಿಜಿಟಲ್ ಸರ್ವಿಸ್ ಟ್ಯಾಕ್ಸ್ ತೆಗೆದುಹಾಕುವುದಿಲ್ಲ…
‘ಭಾರತ ತನ್ನ ಡಿಜಿಟಲ್ ಸರ್ವೀಸ್ ಟ್ಯಾಕ್ಸ್‌ಗಳನ್ನು ತೆಗೆದುಹಾಕುತ್ತದೆ. ಟ್ರಾನ್ಸ್ಮಿಷನ್ಗಳ ಮೇಲೆ ಆಮದು ಸುಂಕ ವಿಧಿಸುವುದನ್ನು ನಿರ್ಬಂಧಿಸುವ ನಿಯಮಗಳು, ಪ್ರಬಲ ದ್ವಿಪಕ್ಷೀಯ ಡಿಜಿಟಲ್ ಟ್ರೇಡ್ ನಿಯಮಗಳು ರೂಪಿಸಲು ಸಂಧಾನಕ್ಕೆ ಭಾರತ ಬದ್ಧವಾಗಿದೆ’ ಎಂದು ಈ ಮೊದಲು ಬರೆಯಲಾಗಿದೆ.
ಇದನ್ನೂ ಓದಿ: ಹಲವು ಇಂಧನ ಮೂಲಗಳನ್ನು ಅವಲಂಬಿಸುವುದು ಭಾರತದ ಕಾರ್ಯತಂತ್ರ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಪ್ರತಿಕ್ರಿಯೆ
ಇದರಲ್ಲಿ ಡಿಜಿಟಲ್ ಸರ್ವಿಸ್ ಟ್ಯಾಕ್ಸ್ ಅನ್ನು ತೆಗೆದುಹಾಕಲಾಗಿದೆ ಎನ್ನುವುದನ್ನು ತೆಗೆದುಹಾಕಲಾಗಿದೆ. ಈ ಮೇಲಿನ ಮೂರು ಬದಲಾವಣೆಗಳು ಈ ಒಪ್ಪಂದಕ್ಕೆ ಭಾರತದ ನಿಲುವು ನಿಚ್ಚಳವಾಗಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ