ಬೆಂಗಳೂರು, (ಜನವರಿ 21): ಚಿತ್ರದುರ್ಗ ಖಾಸಗಿ ಬಸ್ ಅಗ್ನಿದುರಂತ (ಚಿತ್ರದೃಗ ಬಸ್ ಅಪಘಾತ) ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (ರಾಮಲಿಂಗಾ ರೆಡ್ಡಿ) ಅವರು ಮಹತ್ವದ ಸಭೆ. ರಾಜ್ಯದ ಖಾಸಗಿ ಬಸ್ ನಿರ್ಮಾಣ, ಬಸ್ ಕೋಚ್ ನಿರ್ಮಾಣ ಕಂಪನಿಗಳ ಗುತ್ತಿಗೆ ಮತ್ತು ಸಾರಿಗೆ ಅಧಿಕಾರಿಗಳ ಸಭೆ ನಡೆಸಿದ್ದು, ಈ ಸಭೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಯಾವ ರೀತಿಯಲ್ಲಿ ಬಸ್‌ಗಳ ಬಾಡಿ ಬಿಲ್ಡಿಂಗ್ ಮಾಡಬೇಕು? ಎಷ್ಟು ಎಮರ್ಜೆನ್ಸಿ ಡೋರ್ ಇಡಬೇಕು? ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದು, ಅಂತಿಮವಾಗಿ 8 ನಿಯಮಗಳ ಕಡ್ಡಾಯ ಪಾಲನೆ ಮಾಡುವಂತೆ ಖಡಕ್ ಸೂಚನೆ ನೀಡಲಾಗಿದೆ.
ರಾಮಲಿಂಗಾರೆಡ್ಡಿ ಖಡಕ್ ಸೂಚನೆ
ಪ್ರಯಾಣಿಕರಿಗೆ ಯಾವ ರೀತಿಯಲ್ಲಿ ಮಾಹಿತಿ ನೀಡಲಾಗಿದೆ? ಫೈರ್ ಎಸ್ಟಿಂಗ್ ವಿಷರ್ ಗಳನ್ನು ಅಳವಡಿಸುವ ಬಗ್ಗೆ,ಎಮರ್ಜೆನ್ಸಿ ಎಕ್ಸಿಟ್ ಡೋರ್ ಗಳ ಬಳಿ ಯುವಕರು ಮತ್ತು ಮಧ್ಯ ವಯಸ್ಕರಿಗೆ ಸೀಟ್ ಮಾಡಿ, ಎಸಿ ಬಸ್ಸುಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಹೇಗೆ ನಂದಿಸಬೇಕು? ಹೊರಗೆ ಬರಲು ಗ್ಲಾಸ್ ಹೊಡೆಯಲು ಹ್ಯಾಮರ್ ಗಳನ್ನು ಇಡಬೇಕೇ? ಡೋರ್ ಜಂಪ್ ಮಾಡಲು ಮೆಟ್ಟಿಲುಗಳ ವ್ಯವಸ್ಥೆ ಮಾಡಬೇಕು, ಬೆಂಕಿ ಕಾಣಿಸಿಕೊಂಡರೆ ಪ್ರಯಾಣಿಕರಿಗೆ ಡ್ರೈವರ್ ಅಲರಾಂ ಪ್ರಯಾಣಿಕರು. ಹೀಗೆ ಖಾಸಗಿ ಬಸ್ ಬಿಲ್‌ಗಳಿಗೆ ಮತ್ತು ಬಸ್ ಬಾಡಿಡಿಂಗ್ ಮಾಡುವ ಕಂಪನಿಗಳಿಗೆ ಸಾರಿಗೆ ಸಚಿವರು ಖಡಕ್ ಆಗಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬಸ್ಸಿನಲ್ಲಿ ವಿಮಾನದ ಗಗನಸಖಿಯರ ರೀತಿ ಸಂದೇಶ! ಸಾರಿಗೆ ಇಲಾಖೆಯಿಂದ ಖಾಸಗಿ ಬಸ್‌ಗಳಿಗೆ ಹೊಸ ನಿಯಮ
ಸ್ಲೀಪರ್ ಬಸ್ ಗಳಿಗೆ 8 ನಿಯಮ ಪಾಲನೆ ಕಡ್ಡಾಯ
- ಸ್ಲೀಪರ್ ಬಸ್ ಚಾಲಕರು ಹಿಂಬದಿ ಡೋರ್ ತೆಗೆಯಬೇಕು.
- ಸ್ಲೀಪರ್ ಬರ್ತ್ ಗಳಲ್ಲಿ ಸ್ಲೈಡರ್ ತೆಗೆಯಬೇಕು
- ಫೈರ್ ಡಿಟೆಕ್ಷನ್ ಅನ್ನ ತಿಂಗಳೊಳಗೆ ಅಳವಡಿಸಬೇಕು
- 10ಕೆಜಿ ತೂಕದ ಅಗ್ನಿ ಶಾಮಕ ಸಾಧನ ಅಳವಡಿಕೆ ಕಡ್ಡಾಯ
- ಚಾಸಿಸ್ ಅನಧಿಕೃತ ವಿಸ್ತರಣೆಗೆ ಬ್ರೇಕ್
- ಅನುಮೋದಿತ ಪರೀಕ್ಷೆ ಏಜೆನ್ಸಿಯಿಂದ ಪ್ರಮಾಣ ಪತ್ರ ಕಡ್ಡಾಯ
- ಪ್ರಯಾಣಿಕರ ಸೇಫ್ಟಿ ಇದ್ದರೆ ಮಾತ್ರ ಎಫ್ ಸಿ ಮಾಡಬೇಕು
- ಬಸ್ ಕವಚ ನಿರ್ಮಾಣ ಸಂಸ್ಥೆ ಸಿಂಧುತ್ವ ಪರಿಶೀಲಿಸಿದ ನಂತರವೇ ನೋಂದಣಿ ಮಾಡಬೇಕು
ಈ ಗುಜರಾತಿನ 41 ವಾಹನಗಳಿಗೆ ಕೋರಮಂಗಲ ಆರ್ಟಿಓ ಕಚೇರಿಯಲ್ಲಿ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ ಬಗ್ಗೆ ಟಿವಿ9 ನಿನ್ನೆ ಸುದ್ದಿ ಪ್ರಸಾರ ಮಾಡಿತ್ತು. ರೂಲ್ಸ್ ಪ್ರಕಾರ ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ಪ್ರಕಾರ, ಯಾವುದೇ ರಾಜ್ಯದಲ್ಲಾದರೂ ವಾಹನಗಳು ಎಫ್‌ಸಿ ಮಾಡಿಸಿಕೊಳ್ಳಲು ಅವಕಾಶವಿದೆ. ಆದರೆ, ವಾಹನವನ್ನು ಖುದ್ದು ಆರ್‌ಟಿಒ ಮುಂದೆ ಹಾಜರುಪಡಿಸಿದ ನಂತರ ಪರಿಶೀಲನೆ ನಡೆಸಿಯೇ ಎಫ್‌ಸಿ ಸಂಸ್ಥೆ ಎಂಬ ನಿಯಮವಿದೆ. ಆದರೆ, ಕೋರಮಂಗಲ ಆರ್ಟಿಒ ಅಧಿಕಾರಿಗಳು, ವಾಹನಗಳು ಇಲ್ಲಿಗೆ ಬಂದಿದ್ದವು, ನಾವು ಖುದ್ದಾಗಿ ಪರಿಶೀಲಿಸಿದ್ದೇವೆ ಎಂದು ಸುಳ್ಳು ಹೇಳಿ ಎಫ್‌ಸಿಗಳನ್ನು ನೀಡಿದ್ದರು.
ಆ ಸಮಯದಲ್ಲಿ ಆ ವಾಹನಗಳು ಗುಜರಾತ್‌ನಲ್ಲಿ ಸಂಚರಿಸುತ್ತಿರುವುದನ್ನು ಅಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಸಮೇತ ತಿಳಿಸಿದ್ದಾರೆ. ಈ ಸಂಬಂಧ ಕೋರಮಂಗಲ ಆರ್ಟಿಒದ ಹಿರಿಯ ಮೋಟಾರು ನಿರೀಕ್ಷಕ ನಿಸಾರ್ ಅಹಮದ್ ಅವರನ್ನು ಅಮಾನತುಗೊಳಿಸಲಾಗಿದೆ. ಇತ್ತ ಸಾರಿಗೆ ಇಲಾಖೆಯ ಸೂಚನೆಗೆ ಖಾಸಗಿ ಬಸ್ ಸಂಘವು ನಾವು ಸಾರಿಗೆ ರೂಲ್ಸ್ ಅಳವಡಿಸಿಕೊಳ್ಳುತ್ತೇವೆ. ಆದರೆ ಅದಕ್ಕೆ 6 ತಿಂಗಳ ಕಾಲಾವಕಾಶ ಬೇಕು ಎಂದು ಮನವಿ ಮಾಡಲಾಗಿದೆ.