ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿರುವ ಟಿಸಿ
ಬೆಂಗಳೂರು, ಡಿಸೆಂಬರ್ 17: ಪ್ರತಿನಿತ್ಯ ಪ್ರಯಾಣಿಕರು (ಪ್ರಯಾಣಿಕರು) ಪ್ರಯಾಣವನ್ನೇ ಅವಲಂಬಿಸಿ ಒಂದೆಡೆಯಿಂದ ಇನ್ನೊಂದೆಡೆಗೆ ತೆರಳುತ್ತಾರೆ. ಟಿಕೆಟ್ (ಟಿಕೆಟ್) ತೆಗೆದುಕೊಳ್ಳದೆ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿರುತ್ತದೆ. ಅದರಲ್ಲೂ ಬೆಂಗಳೂರು ಡಿವಿಜನ್ ನಲ್ಲಿ ಜನಸಂದಣಿ ಹೆಚ್ಚಾಗಿರುವ ಸಂದರ್ಭದಲ್ಲಿ ಕಿಲಾಡಿಗಳು ಟಿಕೆಟ್ ಪಡೆಯುವುದಿಲ್ಲ. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಕಿಲಾಡಿಗಳನ್ನು ಲಾಕ್ ಮಾಡಲಾಗಿತ್ತು, ಎರಡು ಲಕ್ಷ ಕೇಸ್ ದಾಖಲಿಸುವ ಮೂಲಕ 25 ಕೋಟಿ ರೂ. ವಸೂಲಿ ಮಾಡಿದ.
ದಿನದಿಂದ ದಿನಕ್ಕೆ ರೈಲಿನಲ್ಲಿ ಟಿಕೆಟ್ ತೆಗೆದುಕೊಂಡರೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚು. ಅದರಲ್ಲೂ ಬೆಂಗಳೂರು ಡಿವಿಜನ್‌ನಲ್ಲೇ ಹೆಚ್ಚಿನ ಪ್ರಯಾಣಿಕರು ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅಧಿಕಾರಿಗಳು ಎಷ್ಟು ಪ್ರಯತ್ನಪಟ್ಟರು ಇದಕ್ಕೆ ಬ್ರೇಕ್ ಹಾಕಲು ಕಷ್ಟವಾಗಿದೆ ಅಂತ.
ಇದನ್ನೂ ಓದಿ: ಈ ರೈಲಿನಲ್ಲಿ ಹೋದ್ರೆ ಧರ್ಮಸ್ಥಳ, ಕುಕ್ಕೆ ದೇಗುಲದ ಪಶ್ಚಿಮಘಟ್ಟದ ಸೌಂದರ್ಯ ಸವಿಯಬಹುದು!
2024ರ ನವೆಂಬರ್ ತಿಂಗಳಿನಲ್ಲಿ ನೈರುತ್ಯ 54 ಸಾವಿರ ಕೇಸ್ ದಾಖಲಿಸಿ 3.35 ಕೋಟಿ ರೂ. ದಂಡ ವಸೂಲಿ ಮಾಡಿದ್ದರೆ, 2025ರ ನವೆಂಬರ್ ತಿಂಗಳಿನಲ್ಲಿ ಒಟ್ಟು 67 ಸಾವಿರ ಟಿಕೆಟ್ ಚೆಕ್ ಮಾಡಿ 5.36 ಕೋಟಿ ರೂ. ದಂಡ ವಸೂಲಿ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ನವೆಂಬರ್‌ನಲ್ಲಿ 13 ಸಾವಿರ ಕೇಸುಗಳು ಹೆಚ್ಚಾಗಿದ್ದು, 2.01 ಕೋಟಿ ರೂ. ಹೆಚ್ಚುವರಿ ದಂಡ ವಸೂಲಿ ಮಾಡಲಾಯಿತು.
ಇತ್ತ 2024 ಏಪ್ರಿಲ್ 1 ರಿಂದ ನವೆಂಬರ್ 30ರವರೆಗೆ ನೈರುತ್ಯ ಅವಧಿಯಿಂದ 4.8 ಲಕ್ಷ ಕೇಸ್ ದಾಖಲಿಸಿ 32.87 ಕೋಟಿ ರೂ. ದಂಡ ವಸೂಲಿ ಮಾಡಿದರೆ2025 ಏಪ್ರಿಲ್- 1 ರಿಂದ ನವೆಂಬರ್- 30 ರ ವರೆಗೆ 5.57 ಲಕ್ಷ ಟಿಕೆಟ್ ಚೆಕ್ ಮಾಡಿ 45.89 ಕೋಟಿ ರೂ ದಂಡ ವಸೂಲಿ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 77 ಸಾವಿರ ಹೆಚ್ಚುವರಿ ಕೇಸ್ ಮತ್ತು 13 ಕೋಟಿ ರೂ. ದಂಡ ವಸೂಲಿ ಮಾಡಿದ.
ಇನ್ನು 2024ರ ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 26248 ಕೇಸ್ ದಾಖಲಿಸಿ, 1.62 ಕೋಟಿ ರೂ. ದಂಡ ವಸೂಲಿ ಮಾಡಿದರೆ, 2025 ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 34156 ಲಕ್ಷ ಕೇಸ್ ದಾಖಲಿಸಿ 3.01 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 7908 ಹೆಚ್ಚುವರಿ ಪ್ರಕರಣಗಳನ್ನು ದಾಖಲಿಸುವ ಮೂಲಕ 1.39 ಕೋಟಿ ರೂ. ಹೆಚ್ಚುವರಿ ದಂಡ ವಸೂಲಿ ಮಾಡಲಾಯಿತು.
ಇದನ್ನೂ ಓದಿ: ಧರ್ಮಸ್ಥಳ, ಕುಕ್ಕೆ- ಶ್ರವಣಬೆಳಗೊಳಕ್ಕೆ ಹೋಗುವವರಿಗೆ ಸಿಹಿಸುದ್ದಿ: ಮತ್ತೆ ಶುರುವಾಯ್ತು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು
ಇತ್ತ 2024 ಏಪ್ರಿಲ್ ನಿಂದ ನವೆಂಬರ್ ವರೆಗೆ ಬೆಂಗಳೂರು ಡಿವಿಜನ್ 2,41,825 ಲಕ್ಷ ಕೇಸ್ ದಾಖಲಿಸಿ 17,27 ಕೋಟಿ ರೂ. ದಂಡ ವಸೂಲಿ ಮಾಡಿದರೆ, ಇತ್ತ ಏಪ್ರಿಲ್ ನಿಂದ ನವೆಂಬರ್ ನಲ್ಲಿ ಬೆಂಗಳೂರು ಡಿವಿಜನ್ 2,85,905 ಲಕ್ಷ ಕೇಸ್ ದಾಖಲಿಸಿ 25.53 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ. ಈ ವರ್ಷ ಹೆಚ್ಚುವರಿಯಾಗಿ 44080 ಕೇಸ್ ದಾಖಲಿಸಿ, 8.26 ಕೋಟಿ ರೂ. ಹೆಚ್ಚುವರಿ ದಂಡ ವಸೂಲಿ ಮಾಡಿದ್ದಾರೆ.
ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಸರಿಯಲ್ಲ: ಪ್ರಯಾಣಿಕ
ಈ ಬಗ್ಗೆ ಮಾತನಾಡುವ ಪ್ರಯಾಣಿಕರು, ಟಿಕೆಟ್ ಇಲ್ಲದೆ ಸರಿಯಲ್ಲ. ರೈಲಿನಲ್ಲಿ ಟಿಕೆಟ್ ದರ ತುಂಬಾ ಕಡಿಮೆ ಆದರೂ ಟಿಕೆಟ್ ತೆಗೆದುಕೊಳ್ಳಲಿಲ್ಲ ಅಂದರೆ ಅದು ಸರಿಯಲ್ಲ ಎಂದು ಆದರ್ಶ ಎಂಬವರು ಹೇಳಿದ್ದಾರೆ.
ಒಟ್ನಲ್ಲಿ ಬಸ್ಸು, ಕಾರಿಗೆ ಹೋಲಿಕೆ ಮಾಡಿಕೊಂಡರೇ ರೈಲಿನಲ್ಲಿ ಟಿಕೆಟ್ ದರ ಕಡಿಮೆಯೇ ಆದ್ರು,ಈ ಕಿಲಾಡಿಗಳು ಟಿಕೆಟ್ ಖರೀದಿಸಿದರೆ ಪ್ರಯಾಣ ಮಾಡಿ ಲಾಕ್ ಆಗ್ತಿರೋದು ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.