ಆಸ್ಟ್ರೇಲಿಯಾದಲ್ಲಿರುವ ಏಳು ಪ್ರಮುಖ ಸ್ಟೇಡಿಯಂಗಳಲ್ಲಿ ಟೆಸ್ಟ್ ಶತಕ ಬಾರಿಸಿದ ದಾಂಡಿಗರ ಪಟ್ಟಿಗೆ ಮಾಸ್ಟರ್ ಸ್ಟ್ರೋಕ್ ದಾಂಡಿಗ ಟ್ರಾವಿಸ್ ಹೆಡ್ (ಟ್ರಾವಿಸ್ ಹೆಡ್) ಸೇರ್ಪಡೆಯಾಗಿದೆ. ಅದು ಸಹ ಎಂಸಿಜಿಯಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ.
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5 ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟ್ರಾವಿಸ್ ಹೆಡ್ 163 ರನ್ಗಳ ಇನಿಂಗ್ಸ್ ಆಡಿದ್ದಾರೆ. ಈ ಶತಕದೊಂದಿಗೆ ಆಸ್ಟ್ರೇಲಿಯಾದ 7 ಸ್ಟೇಡಿಯಂಗಳಲ್ಲಿ ಟೆಸ್ಟ್ ಶತಕ ಸಿಡಿಸಿದ 5ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಟ್ರಾವಿಸ್ ಹೆಡ್ ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ಸಾಧನೆ ಮಾಡಿರುವುದು ಆಸ್ಟ್ರೇಲಿಯಾದ ಲೆಜೆಂಡ್ಸ್ಗಳಾದ ಸ್ಟೀವ್ ವಾ, ಜಸ್ಟಿನ್ ಲ್ಯಾಂಗರ್, ಮ್ಯಾಥ್ಯೂ ಹೆಡನ್ ಹಾಗೂ ಡೇವಿಡ್ ವಾರ್ನರ್. ಇವರೆಲ್ಲರೂ ಅಡಿಲೇಡ್, ಬ್ರಿಸ್ಬೆನ್, ಮೆಲ್ಬೋರ್ನ್, ಸಿಡ್ನಿ, ಹೊಬಾರ್ಟ್, ಪರ್ತ್, ಕರ್ನ್ಸ್ ಹಾಗೂ ಡಾರ್ವಿನ್ (ಸ್ಟೀವ್ ವಾ ಮಾತ್ರ) ಸ್ಟೇಡಿಯಂಗಳಲ್ಲಿ ಶತಕ ಸಿಡಿಸಿದ್ದರು.
ಇದೀಗ ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್, ಸಿಡ್ನಿ, ಹೊಬಾರ್ಟ್, ಪರ್ತ್ ಹಾಗೂ ಕ್ಯಾನ್ ಬೆರಾದಲ್ಲಿ ಟೆಸ್ಟ್ ಸೆಂಚುರಿಗಳನ್ನು ಸಿಡಿಸುವ ಮೂಲಕ ಟ್ರಾವಿಸ್ ಹೆಡ್ ಕೂಡ ಈ ಸಾಧಕರ ಪಟ್ಟಿಗೆ ಸೇರಿಸಲಾಗಿದೆ. ಹೆಡ್ ಈ ಮಾಡಿರುವುದು ಕೇವಲ 65 ಟೆಸ್ಟ್ ಪಂದ್ಯಗಳ ಮೂಲಕ ಎಂಬುದು ವಿಶೇಷ.
ಜೊತೆಗೆ ಈ ಶತಕದೊಂದಿಗೆ ಆ್ಯಶಸ್ ಸರಣಿಯಲ್ಲಿ 3 ಸೆಂಚುರಿ ಸಿಡಿಸಿದ ಆರಂಭಿಕ ದಾಂಡಿಗರ ಪಟ್ಟಿಯಲ್ಲೂ ಹೆಡ್ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಮೊದಲ ಪರೀಕ್ಷೆ 123 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಮ್ಯಾಚ್ನಲ್ಲಿ 170 ರನ್ ಸಿಡಿಸಿದ್ದರು. ಇದೀಗ 163 ರನ್ ಕಲೆಹಾಕಿದ್ದಾರೆ. ಈ ಮೂಲಕ ಮ್ಯಾಥ್ಯೂ ಹೆಡನ್ ಬಳಿಕ ಆಸ್ಟ್ರೇಲಿಯಾ ಪರ ಆಯಶಸ್ ಸರಣಿಯೊಂದರಲ್ಲಿ 3 ಸೆಂಚುರಿ ಸಿಡಿಸಿದ ಆರಂಭಿಕ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನೂ ಸಹ ಟ್ರಾವಿಸ್ ಹೆಡ್ ತಮ್ಮದಾಗಿಸಿಕೊಂಡಿದ್ದಾರೆ.




