
ಬೆಂಗಳೂರು, (ಮಾರ್ಚ್ 29): ಗಾಳಿಯ ರಭಸಕ್ಕೆ ಮರದ ಬೃಹತ್ ರೆಂಬೆ ಕೊಂಬೆ ಧರೆಗುರುಳಿದಿರುವ ಘಟನೆ ಬೆಂಗಳೂರಿನ ಕುವೆಂಪು ಮೆಟ್ರೋ ಸ್ಟೇಟ್ ಬಳಿಯ ಮರಿಯಪ್ಪ ಕಾಲೇಜು ಬಳಿ ನಡೆದಿದೆ. ಅದೃಷ್ಟವಶಾತ್ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಬೃಹತ್ ರೆಂಬೆ ಕೊಂಬೆಗಳು ಉರುಳಿದ ವಿದ್ಯುತ್ ಕಂಬಗಳಿಗೆ ಹಾನಿ, ಕೆಲಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಈ ವಿಷಯ ತಿಳಿಯಬೇಕಾದರೆ ಜಿಬಿಎ ಅರಣ್ಯ ಘಟಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಮುರಿದುಬಿದ್ದಿದ್ದ ರೆಂಬೆ ಕೊಂಬೆಗಳನ್ನು ಗುರುತಿಸಿದರು.