
ಹುಬ್ಬಳ್ಳಿ, (ನವೆಂಬರ್ 11): ನಗರದ ಗ್ಲೋಬಲ್ ಕಾಲೇಜು ಮುಂಭಾಗದಲ್ಲಿ ಕಳೆದ ರಾತ್ರಿ ಇಬ್ಬರು ಯುವಕರಿಗೆ ಚಾಕು ಇರಿಯಲಾಗಿದೆ. ಅಭಿಷೇಕ್ ಬಂಡಿವಂಡರ್, ಮಾರುತಿ ಬಂಡಿವಂಡರ್ ಚಾಕು ಇರಿತಕ್ಕೊಳಗಾದ ಯುವಕರು. ಒಂದೇ ಹುಡುಗಿಯನ್ನು ಇಬ್ಬರು ಲವ್ ಮಾಡುತ್ತಿದ್ದಾರೆ, ಇದೆ ವಿಚಾರಕ್ಕೆ ಬರ್ತ್ ಪಾರ್ಟಿಗೆಂದು ಕರೆದು ಚಾಕುವಿನಿಂದ ಹಲ್ಲೆ ಮಾಡಿದರು. ಇನ್ನು ಗಲಾಟೆಯಲ್ಲಿ ಪ್ರೀತಿ ಮಾಡಿದವನು ಪರಾದ್ರೆ ಆತನ ಜೊತೆ ಹೋಗಿದ್ದವರು ಚಾಕು ಇರಿತಕ್ಕೊಳಗಾಗಿದ್ದಾರೆ.
ಹುಬ್ಬಳ್ಳಿ ನಗರದ ನಿವಾಸಿಗಳಾದ ಇಬ್ಬರು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ನಿನ್ನೆ (ನವೆಂಬರ್ 10) ರಾತ್ರಿ ಏರಿದ ಪವನ್ ಅನ್ನೋ ಸ್ನೇಹಿತ ಜೊತೆ ಹೋಗಿ ಸಂಕಷ್ಟ ತಂದೊಂಡಿದ್ದಾರೆ. ಹೌದು ಪವನ ಜೊತೆ ಮಣಿಕಂಠ ಅನ್ನೋನ ಬರ್ತಡೇ ಪಾರ್ಟಿಗೆ ಕಳೆದ ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಹೋಗಿದ್ದರಂತೆ. ಆದರೆ ಬರ್ತಡೇ ಪಾರ್ಟಿಗೆ ಕರೆದಿದ್ದ ಮಣಿಕಂಠ, ಬರ್ತಡೇ ಮುನ್ನವೇ ಪವನ ಮತ್ತು ಆತನ ಜೊತೆ ಹೋಗಿದ್ದ ಅಭಿಷೇಕ್, ಮಾರುತಿ ಜೊತೆ ಜಗಳ ಆರಂಭಿಸಿದ್ದ. ಗಲಾಟೆಯಲ್ಲಿ ಮಣಿಕಂಠ್ ಮತ್ತು ಆತನ ಸ್ನೇಹಿತರು ಅಭಿಷೇಕ ಮತ್ತು ಮಾರುತಿ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇದ್ದಿದ್ದಾರೆ. ಗಲಾಟೆ ಜೋರಾಗಿ ಸ್ಥಳೀಯರು ಬಂದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಸುಖಿ ಸಂಸಾರದಲ್ಲಿ ಮೂರನೇ ವ್ಯಕ್ತಿ ಪ್ರವೇಶ: ಬಲರಾಮನಿಗಾಗಿ ಕಟ್ಟಿಕೊಂಡ ಗಂಡನನ್ನೇ ಕೊಂದ ಹೆಂಡ್ತಿ
ಗಲಾಟೆಗೆ ಕಾರಣವಾಯ್ತು ಲವ್
ಹೌದು…ಮಣಿಕಂಠ ಮತ್ತು ಪವನ್, ಇಬ್ಬರು ಗ್ಲೋಬಲ್ ಕಾಲೇಜ್ ನಲ್ಲಿ ಬಿಬಿಎ ಮೊದಲು ಓದುತ್ತಿದ್ದಾರೆ. ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದಾರಂತೆ. ಇದೇ ಕಾರಣಕ್ಕೆ ತಿಂಗಳ ಹಿಂದೆ ಇಬ್ಬರ ನಡುವೆ ಜಗಳವಾಗಿತ್ತಂತೆ. ನಿನ್ನೆ ತನ್ನ ಬರ್ತಡೇ ಪಾರ್ಟಿ ಇದೆ.ಆಗಿರೋ ಸಮಸ್ಯೆಗಳ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿ ಮಣಿಕಂಠ, ಪವನ್ ನನ್ನನ್ನು ಕರೆಸಿದ್ದನಂತೆ. ಪವನ್ ಒಬ್ಬನೇ ಹೋಗದೆ ಮಾರುತಿ ಮತ್ತು ಅಭಿಷೇಕ ನನ್ನನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದ. ಆದರೆ ಗಲಾಟೆಯಲ್ಲಿ ಪ್ರೀತಿ ಮಾಡಿದವನು ಪರಾದ್ರೆ ಆತನ ಜೊತೆ ಹೋಗಿದ್ದವರು ಚಾಕು ಇರಿತಕ್ಕೊಳಗಾಗಿದ್ದಾರೆ. ಇನ್ನು ಮಾಹಿತಿ ಗೊತ್ತಾಗುತ್ತಿದ್ದಂತೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಕಿಮ್ಸ್ ಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಚಾಕು ಇರಿತಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಮುಖ ಆರೋಪಿ ಮಣಿಕಂಠ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಕಾಲೇಜಿನಲ್ಲಿ ಓದುವುದನ್ನು ಬಿಟ್ಟು ಪ್ರೀತಿ ಪ್ರೇಮ ಅಂತ ಹೋದವರು ಇದೀಗ ಕಂಬಿ ಹಿಂದೆ ಹೋಗಿದ್ದಾರೆ. ಆದರೆ ತಮಗೆ ಸಂಬಂಧವಿಲ್ಲದ ವಿಚಾರಕ್ಕೆ ಸ್ನೇಹಿತನ ಜೊತೆ ಹೋದವರು ಚಾಕು ಇರಿತಕ್ಕೊಳಗಾಗಿದ್ದರೆ ಮಾತ್ರ ದುರ್ದೈವವೇ ಸರಿ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ