
ನಟಿ ತ್ರಿಷಾ (ತ್ರಿಷಾ) ಅವರು ಈಗ ಸುದ್ದಿಯಲ್ಲಿ ಇದ್ದಾರೆ. ಅವರು ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಜೊತೆ ಸುತ್ತಾಡುತ್ತಾ ಇದ್ದಾರೆ. ಈ ಕಾರಣಕ್ಕೆ ವಿಜಯ್ ಹಾಗೂ ಅವರ ಮಧ್ಯೆ ಸಂಬಂಧ ಕಲ್ಪಿಸಲಾಗುತ್ತಿದೆ. ಹೀಗಿರುವಾಗಲೇ ವಿಜಯ್ ಪತ್ನಿ ಸಂಗೀತಾ ಅವರು ‘ವಿಜಯ್‌ಗೆ ನಟಿಯ ಜೊತೆ ಸಂಬಂಧವಿದೆ’ ಎಂದು ಆರೋಪಿಸಿದ್ದಾರೆ. ತ್ರಿಷಾ ಅವರಿಗೆ ಈಗ 42 ವರ್ಷ. ತ್ರಿಷಾ ಇನ್ನೂ ವಿವಾಹ ಆಗಿಲ್ಲ. ಹಾಗಂತ ಅವರು ಈ ಬಗ್ಗೆ ಆಲೋಚನೆ ಮಾಡಿಯೇ ಇಲ್ಲ ಎಂದು ಹೇಳೋಕೆ ಆಗುವುದಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ತ್ರಿಷಾಗೆ ಮದುವೆ ಆಗಿ, 10 ವರ್ಷಗಳೇ ಕಳೆದಿವೆ. ಈ ವಿಷಯ ಅನೇಕರಿಗೆ ತಿಳಿದಿದ್ದರೆ ಇಲ್ಲ. ಆ ಬಗ್ಗೆ ಇಲ್ಲಿದೆ ವಿವರ.
ತ್ರಿಷಾ ಅವರು ವರುಣ್ ಎಂಬುವವರನ್ನು ಮದುವೆ ಆಗಿದ್ದಾರೆ. ಜನವರಿ 23 ರಂದು ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಇವರ ಎಂಗೇಜ್ಮೆಂಟ್ ನಡೆಯಿತು. ತ್ರಿಷಾ ಮದುವೆ ಆಗಬೇಕಿದ್ದ ಹುಡುಗ ಉದ್ಯಮಿ ಆಗಿದ್ದರು. ಅವರು ನಿಶ್ಚಿತಾರ್ಥ ಮಾಡಿಕೊಂಡ ಚಿತ್ರಗಳು ವೈರಲ್ ಆದವು. ಎಂಗೇಜ್ಮೆಂಟ್ ವಿಷಯ ವೈರಲ್ ಆಗುತ್ತಿದ್ದಂತೆ ತ್ರಿಷಾ ಹಾಗೂ ವರುಣ್ ಸುತ್ತಾಟ ಆರಂಭಿಸಿದರು. ಆದರೆ, ವಿಧಿಯಾಟ ಬೇರೆಯದೇ ಇತ್ತು ಎನ್ನಿ.
ತ್ರಿಷಾ ಅವರು ಮೇ ತಿಂಗಳಲ್ಲಿ ನಿಶ್ಚಿತಾರ್ಥವನ್ನು ಕೊನೆ ಮಾಡಿಕೊಂಡರು. ಇದು ಅಭಿಮಾನಿಗಳಿಗೆ ಶಾಕಿಂಗ್ ಎಂದೆನಿಸಿತ್ತು. ನಿರೀಕ್ಷೆಗಳು ಇಬ್ಬರಿಗೂ ಹೆಚ್ಚೇ ಇದ್ದವು. ಈ ನಿರೀಕ್ಷೆ ತಲುಪಿಲ್ಲ. ಹೀಗಾಗಿ, ಇವರು ಬೇರೆ ಆದರು ಎಂದು ವರದಿಯಾಗಿದೆ. ಇವರು ಬೇರೆ ಆಗಲು ಮತ್ತೊಂದು ಕಾರಣವೂ ಇತ್ತು. ವರುಣ್ ಕುಟುಂಬ ಉದ್ಯಮದ ಹಿನ್ನೆಲೆ ಹೊಂದಿತ್ತು. ಅವರು ನಟಿಯನ್ನು ಮದುವೆ ಆಗಿರುವುದು ಕುಟುಂಬದವರಿಗೆ ಇಷ್ಟವೇ ಇಲ್ಲವಂತೆ. ಹೀಗಾಗಿ, ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದರು. ಉದ್ಯಮ ಕುಟುಂಬದ ಹಿನ್ನೆಲೆ ಹೊಂದಿರುವವರನ್ನು ಮದುವೆ ಆಗುವಂತೆ ಕುಟುಂಬದವರು ಒತ್ತಾಯ ಹೇರಿದ್ದರು.
ತ್ರಿಷಾಗೂ ವರುಣ್ನ ಮದುವೆ ಆಗಿದ್ದರೆ ಸಾಕಷ್ಟು ತೊಂದರೆ ಆಗುತ್ತಿದೆ. ಇದಕ್ಕೆ ಕಾರಣವೂ ಇದೆ. ತ್ರಿಷಾ ಅವರನ್ನು ನಿಯಂತ್ರಿಸಲು ವರುಣ್ ಇಷ್ಟಪಡುತ್ತಾರೆ. ಜೊತೆಗೆ, ನಟನೆಯನ್ನು ತೊರೆಯುವಂತೆ ಅವರು ಒತ್ತಡ ಹೇರಿದ್ದರು ಎಂದು ವರದಿಯಾಗಿದೆ. ಇದನ್ನು ಗಮನಿಸಿದ ಅವರು ನಿಶ್ಚಿತಾರ್ಥದಿಂದ ದೂರವೇ ಇರಲು ನಿರ್ಧರಿಸಿದರು.
ಇದನ್ನೂ ಓದಿ: ‘ತ್ರಿಷಾ ಮನೆಯಲ್ಲೇ ಇರಬೇಕು’; ಪಾರ್ಥಿಬನ್ ಹೇಳಿಕೆ ಬಗ್ಗೆ ಚರ್ಚೆ ಶುರುವಾಗಿದೆ
ಈ ಎರಡೂ ವಿಚಾರಕ್ಕೆ ಇಬ್ಬರ ಮಧ್ಯೆ ತಿಕ್ಕಾಟ ಆರಂಭವಾಯಿತು. ಇದು ಬೇರೆಯದೇ ಹಂತಕ್ಕೆ ಹೋಗಿದೆ. ಮದುವೆ ಆದರೆ ಜೀವನ ನಡೆಸಲು ಸಾಧ್ಯವೇ ಇಲ್ಲ ಎಂದು ಇವರಿಗೆ ಅನಿಸಿದೆ. ಈ ಕಾರಣದಿಂದ ಇಬ್ಬರೂ ದೂರ ಆದರು. ತ್ರಿಷಾ ಆ ಬಳಿಕ ವಿವಾಹ ಆಗಲೇ ಇಲ್ಲ. ಆ ಬಗ್ಗೆ ಅವರು ಯೋಚಿಸಿಯೂ ಇಲ್ಲ. ಈಗ ಅವರು ವಿಜಯ್ ಜೊತೆ ಮದುವೆ ಆಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.