ನವದೆಹಲಿ, ಫೆಬ್ರುವರಿ 15: ಎಐ ಸೆಕ್ಟರ್ ಬಹಳ ವೇಗವಾಗಿ ಬೆಳವಣಿಗೆ ಹೊಂದುತ್ತಿರುವಂತೆಯೇ ಜಾಗತಿಕವಾಗಿ ಸಹಿತ್ವ, ಹೊಂದಾಣಿಕೆ, ಮೈತ್ರಿಗಳು ಏರ್ಪಡುವ ಟ್ರೆಂಡ್ ಪ್ರಾರಂಭವಾಗಿದೆ. ಜಿಯೋ ಪ್ಲಾಟ್ಫಾರ್ಮ್ಸ್ನಿಂದ (Jio Platforms) ಹಿಡಿದು ಆಂಥ್ರೋಪಿಕ್ ವರೆಗೆ 15 ಕಂಪನಿಗಳು ಮಾಡಿಕೊಂಡಿವೆ. ಸೆಮಿಕಂಡಕ್ಟರ್‌ನಿಂದ ಹಿಡಿದು ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್‌ವರೆಗೆ ಐ ಸಂಬಂಧಿತ ಕ್ಷೇತ್ರಗಳಲ್ಲಿ ಈ ಕಂಪನಿಗಳು ಒಟ್ಟಿಗೆ ಸೇರಿ ಟ್ರಸ್ಟೆಡ್ ಟೆಕ್ ಅಲಯನ್ಸ್ (ಟ್ರಸ್ಟೆಡ್ ಟೆಕ್ ಅಲೈಯನ್ಸ್- ವಿಶ್ವಾಸೀ ತಂತ್ರಜ್ಞಾನ ಮೈತ್ರಿ) ಕೂಟ ರಚಿಸಿವೆ.
ಜರ್ಮನಿಯಲ್ಲಿ ನಡೆದ ಮ್ಯೂನಿಕ್ ಸೆಕ್ಯುರಿಟಿ ಕಾನ್ಫರೆನ್ಸ್‌ನಲ್ಲಿ (ಮ್ಯೂನಿಕ್ ಸೆಕ್ಯುರಿಟಿ ಕಾನ್ಫರೆನ್ಸ್) ಈ ಐ ಮೈತ್ರಿಕೂಟ ಗುಂಪನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಏಷ್ಯಾ, ಆಫ್ರಿಕಾ ಯೂರೋಪ್ ಮತ್ತು ಉತ್ತರ ಅಮೆರಿಕದ 15 ಕಂಪನಿಗಳು ಸದ್ಯ ಈ ಹೊಂದಾಣಿಕೆ ಮಾಡಿಕೊಂಡಿವೆ.
ಇದನ್ನೂ ಓದಿ: ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ನೋಡುವ ನಿರೀಕ್ಷೆ
ಟ್ರಸ್ಟೆಡ್ ಟೆಕ್ ಅಲಯನ್ಸ್ ನ 15 ಕಂಪನಿಗಳು
- ಆಂಥ್ರೋಪಿಕ್, ಅಮೆರಿಕ
- ಅಮೇಜಾನ್ ವೆಬ್ ಸರ್ವಿಸಸ್ (ಎಡಬ್ಲ್ಯುಎಸ್), ಅಮೆರಿಕ
- ಕಸ್ಸಾವ ಟೆಕ್ನಾಲಜೀಸ್, ದಕ್ಷಿಣ ಆಫ್ರಿಕಾ
- ಕೋಹೀರ್ (ಕೊಹೆರೆ), ಕೆನಡಾ
- ಎರಿಕ್ಸನ್, ಸ್ವೀಡನ್, ಯುರೋಪ್
- ಗೂಗಲ್ ಕ್ಲೌಡ್, ಅಮೆರಿಕ
- ಹ್ಯಾನ್ವಾ (ಹನ್ವಾ), ದಕ್ಷಿಣ ಕೊರಿಯಾ
- ಜಿಯೋ ಪ್ಲಾಟ್ಫಾರ್ಮ್ಸ್, ಭಾರತ
- ಮೈಕ್ರೋಸಾಫ್ಟ್, ಅಮೆರಿಕ
- ನೋಕಿಯಾ, ಫಿನ್ಲ್ಯಾಂಡ್ (ಯೂರೋಪ್)
- ಎನ್ ಸ್ಕೇಲ್ (ಎನ್‌ಸ್ಕೇಲ್), ಯೂರೋಪ್
- ಎನ್ಟಿಟಿ, ಜಪಾನ್
- ರಾಪಿಡಸ್, ಜಪಾನ್
- ಸಾಬ್, ಅಮೆರಿಕ
- ಎಸ್ಎಪಿ, ಜರ್ಮನಿ
ಐ ಹೊಂದಾಣಿಕೆಗೆ ಐದು ಅಂಶಗಳು
ಟ್ರಸ್ಟೆಡ್ ಟೆಕ್ ಅಲಯನ್ಸ್ ಅಥವಾ ವಿಶ್ವಾಸೀ ತಂತ್ರಜ್ಞಾನ ಮೈತ್ರಿಗೆ ಐದು ಅಂಶಗಳ ಆಧಾರ ಪ್ರಕ್ರಿಯೆ. ಪಾರದರ್ಶಕ ಕಾರ್ಪೊರೇಟ್ ಆಡಳಿತ ಮತ್ತು ನೈತಿಕ ನಡಾವಳಿ; ಕಾರ್ಯಾಚರಣೆಯ ಪಾರದರ್ಶಕತೆ; ಸುಭದ್ರ ಅಭಿವೃದ್ಧಿ ಮೊದಲಾದವರು.
ಇದನ್ನೂ ಓದಿ: ಹೊಸ ಐಟಿ ರೂಲ್ಸ್; ಎಐ ಸೃಷ್ಟಿದ ಕಾಂಟೆಂಟ್‌ಗೆ ಲೇಬಲಿಂಗ್ ಕಡ್ಡಾಯ; ಫೇಸ್ಬುಕ್, ಇನ್ಸ್ಟಾಗಳಿಗೆ ಕಠಿಣ ನಿಯಮ
ಆಯಾ ನಾಡಿನ ಕಾನೂನು ಕಟ್ಟಳೆಗಳಿಗೆ ಗೌರವ ಕೊಡುವುದು, ಡಾಟಾ ರಕ್ಷಣೆ, ಉತ್ತಮ ಪೂರೈಕೆ ಸರಪಳಿ ನಿರ್ಮಿಸುವುದು, ಸುಭದ್ರವಾದ ಡಿಜಿಟಲ್ ಇಕೋಸಿಸ್ಟಂ ನಿರ್ಮಿಸುವುದು ಇವುಗಳಂತಹ ಕಾರ್ಯಗಳಿಗೆ ಈ ಮೈತ್ರಿಕೂಟದ ಆದ್ಯತೆ ಕೊಡುವ ನಿರೀಕ್ಷೆಯಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ