ತುಮಕೂರು, ಜ.14: ತಾಯಿಗೆ ಹೊಡೆದ ಎಂಬ ಕಾರಣಕ್ಕೆ ಮಲತಂದೆಯನ್ನು ಮಗ ಕೊಂದಿರುವ ಘಟನೆ ತುಮಕೂರು (ತುಮಕೂರು) ಜಿಲ್ಲೆಯ ಶಿರಾ ತಾಲೂಕಿನ ಮಾರನಗೆರೆಯಲ್ಲಿ ನಡೆದಿದೆ. ನಿತಿನ್ ತುಳಸಿರಾಮ್(40) ಎಂಬುವವರನ್ನು ತನ್ನ ತಾಯಿಯ ಮೇಲೆ ಕೈ ಮಾಡಿದ ಎಂಬ ಕಾರಣಕ್ಕೆ ಮಗ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇನ್ನು ಹತ್ಯೆ ಮಾಡಿ ಹರೀಶ್‌ನನ್ನು ತುರುವೇಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 10 ವರ್ಷದ ಹಿಂದೆ ಯಶೋಧಾ ಅವರ ಮೊದಲ ಪತಿಯಾಗಿದ್ದ ಕಾರಣ ಮನೆಗೆ ಯಾರು ಆಧಾರವಿಲ್ಲ, ಮಕ್ಕಳು ಕೂಡ ಚಿಕ್ಕವರಿದ್ದ ಕಾರಣ ಯಶೋಧಾ 3 ವರ್ಷದ ಹಿಂದೆ ನಿತಿನ್ ಅವರನ್ನು ಮದುವೆಯಾಗಿದ್ದರು. ಹರೀಶ್ ಗೆ ಅಮ್ಮ ಮದುವೆಯಾದಳು ಎಂಬ ಕೋಪ ಕೂಡ ಇತ್ತು. ಜೊತೆಗೆ ನಿತಿನ್ ತುಳಸಿರಾಮ್ ಅವರನ್ನು ಕಂಡರೆ ಹರೀಶ್ ಉರಿದು ಬೀಳುತ್ತಿದ್ದ. ಈ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಇದ್ದಿಲು ಕೆಲಸ ಮಾಡುತಿದ್ದ ನಿತಿನ್ ಮೂರು ವರ್ಷಗಳ ಹಿಂದೆ ಯಶೋಧಾ ಅವರು ಮದುವೆಯಾಗಿದ್ದರು. ಈ ಹಿಂದೆ ಬೇರೊಂದು ಮದುವೆಯಾಗಿದ್ದ ಯಶೋಧಾಗೆ ಹರೀಶ್ ಹಾಗೂ ವಸಂತ್ ಎಂಬ ಇಬ್ಬರು ಮಕ್ಕಳಿದ್ದರು. 10 ವರ್ಷಗಳ ಹಿಂದೆ ಮೊದಲ ಪತಿ ಸಾವನ್ನಪ್ಪಿದ್ದಾನೆ. ಮಕ್ಕಳು ಚಿಕ್ಕವರು ಮತ್ತು ಮನೆಯ ಜವಾಬ್ದಾರಿಯನ್ನು ನಿಭಾಯಿಸಲು. ಈ ಕಾರಣಕ್ಕೆ ಯಶೋಧಾ ಎರಡನೇ ಮದುವೆಯಾಗಿದ್ದರು. ಅದರೂ ಮಕ್ಕಳಿಗೆ ನಿತಿನ್ನ ಕಂಡರೆ ಆಗಬೇಕು. ಅಮ್ಮ ಎರಡನೇ ಮದುವೆಯಾಗುವುದು ಕೂಡ ಅವರಿಗೆ ಇಷ್ಟವಿಲ್ಲ. ಅದರಲ್ಲೂ ಹರೀಶ್ ಗೆ ನಿತಿನ್ ಅಂದ್ರೆ ತುಂಬಾ ಕೋಪ ಇತ್ತು.
ಇದನ್ನೂ ಓದಿ: ಚಪ್ಪಲಿಯಲ್ಲಿ ಹೊಡೆಸಿ ಬೆಂಕಿ ಹಾಕಿಸ್ತೀನಿ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಕಾಂಗ್ರೆಸ್ ರಾಜ್ಯ ಸಂಯೋಜಕ
ಪ್ರತಿದಿನ ಯಶೋಧಾ ಮತ್ತು ನಿತಿನ್ ನಡುವೆ ಜಗಳ ನಡೆಯುತ್ತಿತ್ತು. ನೆನ್ನೆ ರಾತ್ರಿ ಸುಮಾರ 1 ಗಂಟೆ ತಡರಾತ್ರಿ ಅಮ್ಮ ಮತ್ತು ಮಲತಂದೆ ನಿತಿನ್ ನಡುವೆ ಜೋರಾಗಿ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ನಿತಿನ್ ಅವರು ಯಶೋಧಾ ಮೇಲೆ ಕೈ ಮಾಡಿದ್ದಾರೆ. ಇದನ್ನು ನೋಡಿದ ಹರೀಶ್ , ಮನೆಯ ಮೂಲೆಯಲ್ಲಿದ್ದ ಕೊಡಲಿಯನ್ನು ಹಿಡಿದುಕೊಂಡು ಮಲತಂದೆ ನಿತಿನ್ ತಲೆಗೆ ಹೊಡದಿದ್ದಾನೆ. ತಕ್ಷಣ ಕೆಳಗೆ ಬಿದ್ದ ನಿತಿನನ್ನು ಕೊಚ್ಚಿ ಕೊಚ್ಚಿ ಕೊಂದಿದ್ದು, ಸ್ಥಳದಲ್ಲಿಯೇ ನಿತಿನ್ ಸಾವನ್ನಪ್ಪಿದ್ದಾರೆ. ಇದೀಗ ಪ್ರಕರಣಕ್ಕೆ ಹರೀಶ್ ಅವರನ್ನು ತುರುವೇಕೆರೆ ಠಾಣೆ ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 12:07 pm, ಬುಧವಾರ, 14 ಜನವರಿ 26