Headlines

ತುಮಕೂರು ಜಿಲ್ಲಾಸ್ಪತ್ರೆ ವೈದ್ಯೆ ಲೋಕಾ ಬಲೆಗೆ: ಕಣ್ಣಿನ ಆಪರೇಷನ್‌ಗೆ ಲಂಚ ಕೇಳಿದ್ದ ಡಾ. ಸವಿತಾ ಅರೆಸ್ಟ್!

ತುಮಕೂರು ಜಿಲ್ಲಾಸ್ಪತ್ರೆ ವೈದ್ಯೆ ಲೋಕಾ ಬಲೆಗೆ: ಕಣ್ಣಿನ ಆಪರೇಷನ್‌ಗೆ ಲಂಚ ಕೇಳಿದ್ದ ಡಾ. ಸವಿತಾ ಅರೆಸ್ಟ್!

ತುಮಕೂರು ಜಿಲ್ಲಾಸ್ಪತ್ರೆ ವೈದ್ಯೆ ಲೋಕಾ ಬಲೆಗೆ: ಕಣ್ಣಿನ ಆಪರೇಷನ್‌ಗೆ ಲಂಚ ಕೇಳಿದ್ದ ಡಾ. ಸವಿತಾ ಅರೆಸ್ಟ್!

ತುಮಕೂರು ಜಿಲ್ಲಾಸ್ಪತ್ರೆಯ ನೇತ್ರ ಚಿಕಿತ್ಸಕಿ ಡಾ. ಸವಿತಾ, ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ರೋಗಿಯೊಬ್ಬರಿಂದ ₹6,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ದೂರಿನ ಅನ್ವಯ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಅಧಿಕಾರಿಗಳು, ವೈದ್ಯೆ ಹಾಗೂ ಸಹಾಯಕ ಸಿಬ್ಬಂದಿಯನ್ನು ಲಂಚ ಸ್ವೀಕರಿಸುವಾಗಲೇ ಬಂಧಿಸಿದ್ದಾರೆ.

ತುಮಕೂರು (ಮಾ.09): ಸರ್ಕಾರಿ ಆಸ್ಪತ್ರೆಗಳಿಗೆ ಬಡವರು ಬರುವುದು ಉಚಿತ ಮತ್ತು ಉತ್ತಮ ಚಿಕಿತ್ಸೆಯ ಆಸೆಯಿಂದ. ಆದರೆ ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯೆಯೊಬ್ಬರು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಬಡ ರೋಗಿಯೊಬ್ಬರಿಂದ ಲಂಚಕ್ಕೆ ಬೇಡಿಕೆಯಿಟ್ಟು ಈಗ ಲೋಕಾಯುಕ್ತರ ಅತಿಥಿಯಾಗಿದ್ದಾರೆ. 6 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ನೇತ್ರಾ ಚಿಕಿತ್ಸಕಿ ಡಾ. ಸವಿತಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನೇತ್ರಾ ಚಿಕಿತ್ಸಕಿಯಾಗಿ (Ophthalmologist) ಕಾರ್ಯನಿರ್ವಹಿಸುತ್ತಿರುವ ಡಾ. ಸವಿತಾ ಇಂದು ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ ವೈದ್ಯೆ. ತುಮಕೂರಿನ ಉಪ್ಪಾರಹಳ್ಳಿ ನಿವಾಸಿಯಾದ ಅವಿನಾಶ್ ಎಂಬುವವರು ತಮ್ಮ ತಾಯಿಯ ಕಣ್ಣಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಪರೀಕ್ಷೆ ನಡೆಸಿದ್ದ ವೈದ್ಯರು ತಾಯಿಯ ಕಣ್ಣಿಗೆ ಲೆನ್ಸ್ (Lens) ಅಳವಡಿಸಬೇಕೆಂದು ಸೂಚಿಸಿದ್ದರು. ಆದರೆ, ಈ ಚಿಕಿತ್ಸೆ ನೀಡಲು ಡಾ. ಸವಿತಾ ಅವರು 6 ಸಾವಿರ ರೂಪಾಯಿ ಹಣ ನೀಡುವಂತೆ ಅವಿನಾಶ್ ಅವರಿಗೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗಬೇಕಾದ ಚಿಕಿತ್ಸೆಗೆ ವೈದ್ಯರೇ ಲಂಚ ಕೇಳಿದ್ದರಿಂದ ಮನನೊಂದ ಅವಿನಾಶ್, ಕೂಡಲೇ ಲೋಕಾಯುಕ್ತ ಅಧಿಕಾರಿಗಳ ಮೊರೆ ಹೋಗಿದ್ದರು. ವೈದ್ಯೆಯ ವಿರುದ್ಧ ದೂರು ನೀಡಿದ ನಂತರ, ಅಧಿಕಾರಿಗಳು ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಪ್ಲಾನ್ ಮಾಡಿದ್ದರು.

ಇಂದು ಮಧ್ಯಾಹ್ನ ಡಾ. ಸವಿತಾ ಅವರು ಲಂಚದ ಹಣವನ್ನು ಪಡೆಯಲು ಮುಂದಾಗಿದ್ದರು. ನೇರವಾಗಿ ಹಣ ಪಡೆಯುವ ಬದಲಿಗೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರ ಮೂಲಕ ಹಣ ಪಡೆಯುವ ತಂತ್ರ ಹೂಡಿದ್ದರು. ವೈದ್ಯೆಯ ಸೂಚನೆಯಂತೆ ಆಸ್ಪತ್ರೆಯ ಸಿಬ್ಬಂದಿ ಮನೋಜ್ ಎಂಬಾತ 6 ಸಾವಿರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ, ಮೊದಲೇ ಹೊಂಚು ಹಾಕಿದ್ದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಡಿವೈಎಸ್ ಪಿ ಮಂಜುನಾಥ್ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಲಂಚದ ಹಣವನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ವೈದ್ಯೆ ಡಾ. ಸವಿತಾ ಹಾಗೂ ಅವರಿಗೆ ಸಹಕರಿಸಿದ ಸಿಬ್ಬಂದಿ ಮನೋಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆಸ್ಪತ್ರೆಯ ಆವರಣದಲ್ಲಿಯೇ ಈ ದಾಳಿ ನಡೆದಿರುವುದರಿಂದ ಜಿಲ್ಲಾಸ್ಪತ್ರೆಯ ಇತರೆ ಸಿಬ್ಬಂದಿ ಮತ್ತು ರೋಗಿಗಳಲ್ಲಿ ಕೆಲಕಾಲ ಆತಂಕ ಹಾಗೂ ಕುತೂಹಲ ಮೂಡಿತ್ತು.

ಜಿಲ್ಲಾಸ್ಪತ್ರೆಗಳಲ್ಲಿ ಇಂತಹ ಲಂಚದ ಹಾವಳಿ ಹೆಚ್ಚಾಗುತ್ತಿರುವುದು ಸಾಮಾನ್ಯ ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ಡಾ. ಸವಿತಾ ಅವರ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Source link

Leave a Reply

Your email address will not be published. Required fields are marked *