Headlines

ಕನ್ನಡ ಚಿತ್ರರಂಗದ ಮೇಕಪ್ ಆರ್ಟಿಸ್ಟ್ ಮನೆಯಲ್ಲಿ ಚಿನ್ನಾಭರಣ ಕಳ್ಳತನ: 24 ಗಂಟೆಯಲ್ಲೇ ಆರೋಪಿಗಳ ಬಂಧನ

ಕನ್ನಡ ಚಿತ್ರರಂಗದ ಮೇಕಪ್ ಆರ್ಟಿಸ್ಟ್ ಮನೆಯಲ್ಲಿ ಚಿನ್ನಾಭರಣ ಕಳ್ಳತನ: 24 ಗಂಟೆಯಲ್ಲೇ ಆರೋಪಿಗಳ ಬಂಧನ


ತುಮಕೂರು, ಡಿಸೆಂಬರ್ 12: ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ (ಕನ್ನಡ ಸಿನಿಮಾ) ಅದೆಷ್ಟೋ ನಾಯಕ, ನಾಯಕಿರಿಗೆ ಬಣ್ಣ ಹಚ್ಚಿ ಕಣ್ಮನ ಸೆಳೆಯುವಂತೆ ಮಾಡಿದವರು ಹೇಮಲತಾ. ಅವರ ಸಾಧನೆಗೆ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಚಿನ್ನದ ಪದಕ ಸಹ ನೀಡಿದ್ದರು. ಚಿತ್ರರಂಗದಲ್ಲಿ ಕೊಡುಗೆ ನೀಡಿದ ಹೇಮಲತಾ ಅವರು ವೃದ್ದಾಪ್ಯದಲ್ಲಿ ಹಳ್ಳಿ ಸೇರಿದ್ದರು. ಒಂಟಿಯಾಗಿ ವಾಸಿಸುತಿದ್ದ ಅವರ ಮನೆಯಲ್ಲಿ ಅದೊಂದು ದಿನ ಕಳ್ಳತನವಾಗಿದ್ದು (ಕಳ್ಳತನ)ಚಿನ್ನಾಭರಣ, ಪದಕವನ್ನು ಕಳ್ಳರು ಹೊತ್ತೊಯ್ದಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದ್ದು 24 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪರಿಚಯಸ್ಥರೇ ಎಂಬುವುದು ಅಚ್ಚರಿಯ ಸಂಗತಿ.

ಚಿನ್ನಾಭರಣ ಸಹಿತ ಪದಕ ಕಳ್ಳತನ

ವರನಟ ಡಾ. ರಾಜಕುಮಾರ್ ಕಾಲದ ಕನ್ನಡ ಚಿತ್ರರಂಗದಲ್ಲಿ ಹೇಮಲತಾ ಹೆಸರು ಚಿರಪರಿಚಿತ. ಅದೆಷ್ಟೋ ಕನ್ನಡ ಸಿನಿಮಾಗಳಲ್ಲಿ ನಾಯಕ, ನಾಯಕಿಯರಿಗೆ ಬಣ್ಣ ಹಚ್ಚಿದ್ದ ಮೇಕಪ್ ಕಲಾವಿದ. ಚಿತ್ರರಂಗದಲ್ಲಿ ಇವರ ಸಾಧನೆಗೆ ಹಲವು ಪ್ರಶಸ್ತಿಗಳು ಬಂದಿದ್ದು, ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಚಿನ್ನದ ಪದಕ ಸಹ ನೀಡಿದ್ದರು. ಸಾಧನೆಯ ಗುರುತಾಗಿ ಪದಕವನ್ನು ತಮ್ಮ ಚಿನ್ನಾಭರಣಗಳ ಜೊತೆ ಭದ್ರವಾಗಿಟ್ಟಿದ್ದ ಹೇಮಲತಾ, ಮೊನ್ನೆ ಶಾಕ್ ಆಗಿದ್ದಾರೆ. ಯಾರಿಗೂ ಗೊತ್ತಾಗದಂತೆ ಚಿನ್ನಾಭರಣ ಸಹಿತ ಪದಕ ಕೂಡ ಕಳುವಾಗಿತ್ತು.

ಇದನ್ನೂ ಓದಿ: ಬದುಕಿರುವ ಮಹಿಳೆಗೆ ಡೆತ್ ಸರ್ಟಿಫಿಕೇಟ್: ಆಸ್ತಿಗಾಗಿ ಬದುಕಿರುವ ವೃದ್ಧೆಯನ್ನೇ ಸಾಯಿಸಿದ್ರು!

ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕಲಾವಿದೆ ತಮ್ಮ ವೃತ್ತಿ ಬದುಕಿನ ನಂತರದಲ್ಲಿ ಒಂಟಿಯಾಗಿ ವಾಸವಿದ್ದರು. ಮನೆಯ ಕೆಲಸಗಳನ್ನು ಆಗಾಗ ಪರಿಚಿತರಾದ ಶಂಕರ್ ಬಾಬು, ಗುರುರಾಜ್, ಮನೋಜ್ ಎಂಬ ಯುವಕರ ಬಳಿ ಮಾಡಿಸಿಕೊಳ್ಳುತಿದ್ದರು. ಯಾವುದೇ ಸಮಸ್ಯೆ ಇಲ್ಲದೆ ವಾಸವಿದ್ದಲ್ಲಿ, ಮೊನ್ನೆ ಆತಂಕಕ್ಕೆ ಒಳಗಾಗುವ ಘಟನೆ ನಡೆದಿದೆ.

24 ಗಂಟೆಯೊಳಗೆ ಆರೋಪಿಗಳ ಬಂಧನ

ಮನೆಯಲ್ಲಿ ಜೋಪಾನವಾಗಿ ಪರ್ಸನಲ್ಲಿಟ್ಟಿದ್ದ 70 ಗ್ರಾಂ ಚಿನ್ನಾಭರಣ ಸಹಿತ ಸರ್ಕಾರ ನೀಡಿದ್ದು 20 ಗ್ರಾಂ ಚಿನ್ನದ ಪದಕ ಕಣ್ಮರೆಯಾಗಿತ್ತು. ವಿಚಾರ ತಿಳಿದ ಕೂಡಲೇ ತಿಪಟೂರು ನಗರ ಪೊಲೀಸ್ ಠಾಣೆಗೆ ಹೇಮಲತಾ ಅವರು ದೂರು ನೀಡಿದ್ದು, ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ.

ಅಸಲಿಗೆ ಈ ಕೃತ್ಯ ಎಸಗಿದವರೆಲ್ಲರೂ ಯುವಕರೇ. ಮೇಲಾಗಿ ಹೇಮಲತಾ ಅವರಿಗೆ ಪರಿಚಯಸ್ಥರೇ ಆಗಿದ್ದಾರೆ. ಅವರ ಮನೆ ಕೆಲಸ ತಾವೇ ಮಾಡಿಕೊಟ್ಟಿದ್ದರು. ಹೀಗೆ ಅವರ ನಂಬಿಕೆ ಗಳಿಸಿದ್ದ ಮೂವರು ತಮ್ಮ ವೈಯಕ್ತಿಕ ಸಾಲಗಳನ್ನು ತೀರಿಸಲು ವೃದ್ದೆ ಬಳಿಯಿದ್ದ ಚಿನ್ನದ ಮೇಲೆ ಕಣ್ಣು ಹಾಕಿದ್ದರು. ಅದರಂತೆ ಡಿ. 10 ರಂದು ಮನೆಗೆ ಬಂದ ಮೂವರು ಸಂಜೆ 5 ಗಂಟೆ ಸುಮಾರಿಗೆ ಹೇಮಲತಾರ ಗಮನಕ್ಕೆ ಬಾರದಂತೆ ಪರ್ಸ್ ನಲ್ಲಿ ಚಿನ್ನಾಭರಣ ಎಗರಿಸಿದ್ದಾರೆ. ಆದರೆ ಪ್ರತಿ ದಿನ ಮಲಗುವಾಗ ಚಿನ್ನ ನೋಡುತಿದ್ದ ಹೇಮಲತಾ, ಅಂದು ಓದಿದಾಗ ಚಿನ್ನ ಇಲ್ಲದಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಉದ್ಯಮಿ ಮೇಲೆ ಫೈರಿಂಗ್: ಕೂದಲೆಳೆ ಅಂತರದಲ್ಲಿ ಬಚಾವ್!

ಸದ್ಯ ಆರೋಪಿಗಳನ್ನು ಬಂಧಿಸಿರುವ ತಿಪಟೂರು ನಗರ ಪೊಲೀಸರು, ಬಂಧನದಿಂದ ಚಿನ್ನದ ಪದಕ ಸಹಿತ 90 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕಲಾವಿದರಿಗೆ ತಮ್ಮ ವಸ್ತು ವಾಪಾಸ್ ನೀಡುವ ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾರೆ. ಆದರೆ ನಂಬಿಕಸ್ಥರು ಅಂತ ಮನೆಗೆ ಸೇರಿಸಿಕೊಂಡು ವೃದ್ಧೆಗೆ ಮೋಸ ಮಾಡುವ ಈ ಯುವಕರ ಯೋಚನೆ ನಿಜಕ್ಕೂ ಬೆಚ್ಚಿಬೀಳಿಸುವ ಸಂಗತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *