ಬಿಲ್ ಪಾವತಿಸಲು ಲಂಚ ಪಡಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಡಿಹೆಚ್​ಒ ಕಚೇರಿ ಲೆಕ್ಕಪತ್ರ ವ್ಯವಸ್ಥಾಪಕ

ಬಿಲ್ ಪಾವತಿಸಲು ಲಂಚ ಪಡಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಡಿಹೆಚ್​ಒ ಕಚೇರಿ ಲೆಕ್ಕಪತ್ರ ವ್ಯವಸ್ಥಾಪಕ


ಬಿಲ್ ಪಾವತಿಸಲು ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಡಿಹೆಚ್ಒ ಕಚೇರಿ ಲೆಕ್ಕಪತ್ರ ವ್ಯವಸ್ಥಾಪಕ

ತುಮಕೂರು, ಮಾ.25: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರದ ಬಣ್ಣ ಬಯಲಾಗಿದೆ. ಆರೋಗ್ಯ ಜಾಗೃತಿ ಕಾರ್ಯಕ್ರಮದ ಬಿಲ್ಲು ಎನ್ ಜಿಒ ಅಧ್ಯಕ್ಷರಿಂದ ಲಂಚ ಸ್ವೀಕರಿಸುತ್ತಿದ್ದ ಲೆಕ್ಕಪತ್ರ ವ್ಯವಸ್ಥಾಪಕ ಅರವಿಂದ್ ಅವರಿಗೆ ಲೋಕಾಯುಕ್ತ ಪೊಲೀಸ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. 2025-26ರ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಜಿಲ್ಲಾ 10 ತಾಲೂಕುಗಳ ಜಾತ್ರೆ ಮತ್ತು ಸಂತೆಗಳಲ್ಲಿ ಆರೋಗ್ಯ ಜಾಗೃತಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿ ಜಾತ್ರೆ, ಸಂತೆಗಳಲ್ಲಿ ಆರೋಗ್ಯ ಕುರಿತ ವಸ್ತು ಪ್ರದರ್ಶನ ಮಾಡಲಾಗಿದೆ. ಈ ಕಾರ್ಯಕ್ರಮ ನಡೆಸಿದ್ದ ಎನ್ ಜಿಯೋಗೆ ಬರಬೇಕಿದ್ದ 1.98 ಲಕ್ಷ ರೂ. ಬಿಲ್ ಪಾವತಿಸಲು ಅರವಿಂದ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಿಲ್ ಬಿಡುಗಡೆ ಮಾಡಲು ಅರವಿಂದ್ 12 ಸಾವಿರ ರೂ. ಲಂಚ ಕೇಳಿದ್ದರು. ಎನ್‌ಜಿಒ ಅಧ್ಯಕ್ಷ ರಾಜಶೇಖರ್ ಅವರು ಲಂಚ ನಿರಾಕರಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಇಂದು ಸಂಜೆ 4:10ಕ್ಕೆ ಕಚೇರಿ ಕಾಂಪೌಂಡ್ ಒಳಗೆ ರಾಜಶೇಖರ್ ಅವರಿಂದ 12 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಅರವಿಂದ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 



Source link

Leave a Reply

Your email address will not be published. Required fields are marked *