Headlines

ಮಾವನ ಮಗನ ಜೊತೆ ನಿಶ್ಚಿತಾರ್ಥ, ಚಾಲಕನ ಜೊತೆ ಓಡಿಹೋಗಿ ಮದುವೆಯಾದ ಯುವತಿ: ಆಮೇಲಾಯ್ತು ಸಿನಿಮೀಯ ಟ್ವಿಸ್ಟ್!

ಮಾವನ ಮಗನ ಜೊತೆ ನಿಶ್ಚಿತಾರ್ಥ, ಚಾಲಕನ ಜೊತೆ ಓಡಿಹೋಗಿ ಮದುವೆಯಾದ ಯುವತಿ: ಆಮೇಲಾಯ್ತು ಸಿನಿಮೀಯ ಟ್ವಿಸ್ಟ್!


ತುಮಕೂರು, ಫೆಬ್ರವರಿ 2: ಅದೊಂದು ರೀತಿಯ ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ. ಆಕೆ ಶ್ರೀಮಂತರ ಮಗಳು. ಆರ್ಥಿಕವಾಗಿ ಚೆನ್ನಾಗಿದ್ದ ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿತ್ತು. ಮಗಳು ಚೆನ್ನಾಗಿ ಓದಿದಿದ್ದರೂ ಸಹ ಮಾವನ ಮಗನ ಜೊತೆ ಮದುವೆ ಮಾಡುವ ಯೋಚನೆಯಲ್ಲಿ ಮನೆಯವರಿದ್ದರು. ಅದರಂತೆ ಉತ್ಪನ್ನಕ್ಕೆಲ್ಲಾ ಕಾರ್ಡ್ ಹಂಚಿ ಚೌಲ್ಟ್ರಿ ಊಟ, ಡೆಕೊರೇಷನ್ ಎಂದು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಹೀಗೆ ಮದುವೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಯುವತಿ ಶಾಕ್ ನೀಡಿದ್ದು, ಮನೆಯ ವಾಹನ ಚಾಲಕನ ಜೊತೆ ಓಡಿ ಹೋಗಿ ಮದುವೆಯಾಗಿದ್ದಾಳೆ! ಅಷ್ಟೇ ಅಲ್ಲದೆ, ಕುಟುಂಬದವರ ವಿರುದ್ಧವೇ ಆರೋಪ ಮಾಡಿದ್ದಾಳೆ.

ತುಮಕೂರು ನಗರ ಠಾಣಾ ಘಟನೆ ಈ ಘಟನೆ ನಡೆದಿದೆ. ತುಮಕೂರು ನಗರ ನಿವಾಸಿ ಹಾಗೂ ಉದ್ಯಮಿಯೊಬ್ಬರ ಮಗಳಿಗೆ ತನ್ನದೇ ಮನೆಯ ಪಾರ್ಟ್ ಟೈಂ ಚಾಲಕನಾಗಿ ಬರುತಿದ್ದ ರವೀಶ ಪ್ರೇಮಾಂಕುರವಾಗಿದೆ. ಈ ವಿಚಾರ ಆಕೆಯ ಅಣ್ಣನಿಗೆ ತಿಳಿದು ಎಚ್ಚರಿಕೆ ಸಹ ನೀಡಿದ್ದರು. ಇದಾದ ಬಳಿಕ ಈ ಹಿಂದೆ ಕೊಟ್ಟ ಮಾತಿನಂತೆ ಮಾವನ ಮಗನ ಜೊತೆ ಅವಳ ಮದುವೆಗೆ ಕುಟುಂಬ ನಿಶ್ಚಯಿಸಿ ನಿಶ್ಚಿತಾರ್ಥ ಕೂಡ ಮುಗಿಸಿದೆ. ಇದಾದ ಬಳಿಕ, ಮದುವೆಗೆ ಇನ್ನೊಂದು ತಿಂಗಳು ಬಾಕಿ ಇರುವಾಗಲೇ, ಜನವರಿ 19ರಂದು ಯವತಿ ಮನೆಯ ರವೀಶ ಜೊತೆ ಓಡಿಹೊಗಿದ್ದಾಳೆ. ಚಿಕ್ಕನಾಯಕನಹಳ್ಳಿಯಲ್ಲಿ ಮದುವೆಯಾಗಿದ್ದಾಳೆ. ಇತ್ತ ಮಗಳು ಕಾಣದ ಹಿನ್ನಲೆಯಲ್ಲಿ ಕಾಣೆಯಾದ ಬಗ್ಗೆ ನಗರ ಠಾಣೆಗೆ ದೂರು ನೀಡಿದ ಕುಟುಂಬಕ್ಕೆ ಶಾಕ್ ಆಗಿದೆ. ಅತ್ತ ಯುವತಿಯೇ, ‘ಕುಟುಂಬದವರಿಂದ ಬೆದರಿಕೆ ಇದೆ, ನನಗೆ ಭದ್ರತೆ ಬೇಕು’ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾಳೆ.

ಆಮೇಲೇನಾಯ್ತು?

ಯುವತಿಯ ಪ್ರತಿಕ್ರಿಯೆಗೆ ಪ್ರತಿಕ್ರಿಯೆ ನೀಡಿದ ಆಕೆಯ ಸಹೋದರ, ಅವಳ ಆಯ್ಕೆಗೆ ವಿರುದ್ಧವಾಗಿ ನಾವು ಮದುವೆ ಆರೋಪ ಮಾಡಲಿಲ್ಲ. ಮನೆ ಮಗಳು ಕಾಣೆಯಾಗಿದ್ದಾಳೆಂದು ನಾವು ಠಾಣೆಗೆ ಬಂದಿದ್ದೇವೆ ಅವರಲ್ಲ. ಆಕೆಯ ಒಪ್ಪಿಗೆಯಂತೆ ಚಿನ್ನಾಭರಣ ಖರೀದಿ, ಸೀರೆ, ಮದುವೆ ಕಾರ್ಡ್‌ಗಳನ್ನು ಮಾಡಿದ್ದೆವು. ಆಕೆಯ ತಾಯಿ ಆರೋಗ್ಯದ ಸಮಸ್ಯೆ ನಡುವೆ ಮದುವೆ ಆಗಿದ್ದರು. ಮದುವೆ ಇಷ್ಟ ಇಲ್ಲ ಎಂದು ನಮಗೆ ಹೇಳಬಹುದಿತ್ತು. ಅದರ ಬದಲು ಈ ರೀತಿ ಮಾಡಿರುವುದು ನಮಗೆ ಸೂಚಿಸಿದೆ.

ಪೊಲೀಸರ ಮಧ್ಯಸ್ಥಿಕೆಯಲ್ಲೇ ರಾಜಿ ಸಂಧಾನ!

ಯುವತಿ ಕಾಣೆಯಾದ ಬಗ್ಗೆ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಪ್ರೇಮಿಗಳು ಮದುವೆಯಾಗಿರುವ ವಿಚಾರ ತಿಳಿದುಬಂತು. ಯುವತಿ ಕುಟುಂಬಸ್ಥರಿಂದ ಬೆದರಿಕೆ ಆರೋಪದ ಕಾರಣ ಪೊಲೀಸರ ಮಧ್ಯಸ್ಥಿಕೆಯಲ್ಲೇ ರಾಜಿ ಸಂಧಾನ ನಡೆದು, ಎರಡೂ ಕಡೆಯ ಕುಟುಂಬದ ಒಪ್ಪಿಗೆ ಹಾಗೂ ಖುಲಾಸೆ ಪತ್ರಕ್ಕೆ ಸಹಿ ಹಾಕಿ ಪ್ರಕರಣಕ್ಕೆ ತೆರೆ ಎಳೆದರು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *