ಐಸ್ಕ್ರೀಮ್ ಫ್ಯಾಕ್ಟರಿ ಮೇಲೆ ಅಧಿಕಾರಿಗಳು ದಾಳಿ
ತುಮಕೂರು, ಡಿಸೆಂಬರ್ 11: ಚಳಿಗಾಲವಿದ್ದರೂ ಮಕ್ಕಳು ಐಸ್ಕ್ರೀಮ್ (ಐಸ್ ಕ್ರೀಮ್) ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಶಾಲೆ ಸುತ್ತಮುತ್ತ ಇರಲಿ, ಯಾವುದೇ ಕಾರ್ಯಕ್ರಮ ಇರಲಿ, ಜನ ಇದ್ದಲ್ಲಿ ಮಾತ್ರ ಐಸ್ಕ್ರೀಮ್ ಮಾರಾಟ ಜೋರ ಆಗಲಿದೆ. ದಣಿದವರು ತಂಪಾಗಿಸುವ ಈ ಐಸ್ ಕ್ರೀಂ ಇದೀಗ ಎಷ್ಟು ಸೇಫ್ ಎಂದು ಅನುಮಾನಕ್ಕೆ ಕಾರಣವಾಗಿದೆ. ತುಮಕೂರಿನ ಫ್ಯಾಕ್ಟರಿಯೊಂದರ ಮೇಲೆ ಅಧಿಕಾರಿಗಳ ದಾಳಿ ಬೆನ್ನಲ್ಲೇ ಆತಂಕ ಶುರುವಾಗಿದೆ.
ಮಕ್ಕಳ ಆರೋಗ್ಯಕ್ಕೆ ಕುತ್ತು ಆತಂಕ
ಮಕ್ಕಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋದರೆ ಸಾಕು, ಮಕ್ಕಳಿಗೆ ಒಂದೇ ಹಠ, ಐಸ್ಕ್ರೀಮ್ ಬೇಕು ಅಂತ. ಮಕ್ಕಳ ಮೇಲಿನ ಪ್ರೀತಿಗೆ ಕಂಡಕಂಡಲ್ಲಿ ಐಸ್ಕ್ರೀಮ್ ಕೊಡಿಸುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ. ಇತ್ತ ತುಮಕೂರಿನಲ್ಲಿ ಅನುಮತಿ ಇಲ್ಲದ ಐಸ್ಕ್ರೀಮ್ ಫ್ಯಾಕ್ಟರಿಗಳು ತಲೆ ಎತ್ತುತ್ತಿವೆ. ಪಾಲಿಕೆ ನಿಯಮವಿರಲಿ, ಅನುಮತಿಯೂ ಇಲ್ಲದೇ, ಇತ್ತ ಶುಚಿತ್ವ ಇಲ್ಲದೇ, ಮಕ್ಕಳ ಆರೋಗ್ಯಕ್ಕೆ ಕುತ್ತು ತರುವ ಆತಂಕ ಮೂಡಿಸಿದೆ.
ಇದನ್ನೂ ಓದಿ: ತುಮಕೂರು ಜನರಲ್ಲಿ ಆರೋಗ್ಯ ಸಮಸ್ಯೆ: 11 ಕಾರ್ಖಾನೆಗಳಿಗೆ ಬಿತ್ತು ಬೀಗ
ಖಚಿತ ಮಾಹಿತಿ ತುಮಕೂರು ತಹಶೀಲ್ದಾರ್ ರಾಜೇಶ್ವರಿ ನೇತೃತ್ವದಲ್ಲಿ ಗುಬ್ಬಿಗೇಟ್ ಬಳಿಯ ದಿಲ್ ಕುಶ್ ಎಂಬ ಐಎಸ್‌ಕ್ರೀಮ್ ಫ್ಯಾಕ್ಟರಿ ಮೇಲೆ ಮಹಾನಗರ ಪಾಲಿಕೆ ಆರೋಗ್ಯ ಯೋಗಾಧಿಕಾರಿ, ಜಿಲ್ಲಾ ಆಹಾರ ಅಧಿಕಾರಿ ಹರೀಶ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಪೋಟಕ ಅಂಶಗಳು ಬಯಲಾಗಿವೆ. ಫ್ಯಾಕ್ಟರಿಯಲ್ಲಿ ಯಾವುದೇ ಶುಚಿತ್ವ ಇಲ್ಲದೇ ಇರುವುದು, ಪರವಾನಗಿ ಇಲ್ಲದಿರುವುದು ಕಂಡುಬಂದಿದೆ. ಈ ಮೂಲಕ ಆಹಾರ ಇಲಾಖೆ ಸಿಬ್ಬಂದಿಗೆ ದಂಡ ಹಾಕಿದರೇ, ಆರೋಗ್ಯಾಧಿಕಾರಿ ಬೀಗ ಜಡಿದಿದ್ದಾರೆ.
ಫ್ಯಾಕ್ಟರಿಗೆ ಬೀಗ
ಅಧಿಕಾರಿಗಳ ಮಾಹಿತಿ ಪ್ರಕಾರ ಕಳೆದ ಆರು ತಿಂಗಳಿಂದ ಐಎಸ್ ಕ್ರೀಮ್ ಫ್ಯಾಕ್ಟರಿ ನಡೆಸಲಾಗುತ್ತಿದೆ, ಬಿಹಾರ್ ಮೂಲದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನವಾಸಿ ಸ್ಥಳದಲ್ಲಿ ಅನುಮತಿ ಇಲ್ಲದೇ ಫ್ಯಾಕ್ಟರಿ ನಡೆಸಲಾಗುತ್ತಿದ್ದು, ಇದರ ಸೇವನೆ ಯಾರೆಂಬುವುದು ಇನ್ನು ತಿಳಿದುಬಂದಿಲ್ಲ. ಹೀಗಾಗಿ ಪತ್ತೆಗೆ ಮುಂದಾದ ಪಾಲಿಕೆ ಸದ್ಯ ಫ್ಯಾಂಟರಿಗೆ ಬೀಗಹಾಕಿದ್ದು, ಕಠಿಣ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ದುಶ್ಚಟಕ್ಕೆ ಒಳಗಾದವರ ಮನಃಪರಿವರ್ತನೆಗೆ ಬರುತ್ತಿದ್ದಾನೆ ಗೆಳೆಯ: ಏನಿದು ಸನ್ಮಿತ್ರ ಯೋಜನೆ?
ಸದ್ಯ ಒಂದು ಐಎಸ್ ಕ್ರೀಮ್ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೆ ಇಷ್ಟೆಲ್ಲಾ ಅವಾಂತರ ಕಣ್ಣಿಗೆ ಕಂಡಿದ್ದು, ಜಿಲ್ಲೆಯ ಇತರೆ ಐಎಸ್ ಕ್ರೀಮ್ ಫ್ಯಾಕ್ಟರಿಗಳ ತಯಾರಿಕಾ ಪ್ರಕ್ರಿಯೆಯಲ್ಲಿ ಈಗ ಅನುಮಾನ ಮೂಡಿದೆ. ಹೀಗಾಗಿ ಒಟ್ಟಾರೆ ಐಎಸ್ ಕ್ರೀಮ್ ಫ್ಯಾಕ್ಟರಿಗಳ ಅಂಕಿಅಂಶಗಳ ಜೊತೆಗೆ ಪಾಲಿಕೆ ನಿಯಮ, ಅನುಮತಿಗಳ ಪರಿಶೀಲನೆಗೆ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 9:35 pm, ಗುರು, 11 ಡಿಸೆಂಬರ್ 25