Headlines

ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು

ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು


ಪರಮೇಶ್, ಆಶಾ, ಚಂದ್ರಪ್ಪಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ

ತುಮಕೂರು, ಮಾರ್ಚ್ 05: ಗಂಡನ (ಗಂಡ) ಸಾವು ಹೃದಯಘಾತ ಎಂದು ಪತ್ನಿ ಕಣ್ಣೀರು ಹಾಕಿದಳು. ಗಂಡನ ಸಾವಿನ ಬಗ್ಗೆ ಕಿಂಚಿತ್ತು ಕೊರಗಿಲ್ಲದ ಪತ್ನಿ, ಪತಿ 20 ದಿನಕ್ಕೆ ಮತ್ತೊಬ್ಬನ ಮದುವೆಯಾಗಿದ್ದಳು. ಆಕೆಯ ನಡೆಯಿಂದ ಅನುಮಾನಗೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಂತ್ಯಕ್ರಿಯೆ ಮಾಡಿ ಹೂತಿಟ್ಟ ಶವ ಸಹ ಹೊರ ತೆಗೆದು ಪರಿಕ್ಷೆ ನಡೆಸಲಾಯಿತು. ಈ ನಡುವೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಎಂಬಂತೆ ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಸಂಗತಿ ಬಯಲಾಗಿದ್ದರೆ, ಪತ್ನಿ ಹಾಗೂ ಆಕೆಯ ಹೊಸ ಗಂಡ ತಾವೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಹೃದಯಾಘಾತದಿಂದ ಪತಿ ಸಾವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

ಜನವರಿ 30ರಂದು ಹೃದಯಾಘಾತದಿಂದ ಸಾವನಪ್ಪಿದ್ದಾನೆ ಎನ್ನಲಾಗಿದ್ದ ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿ ನಿವಾಸಿ ಪರಮೇಶ್ ಸಾವು ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಪರಮೇಶ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿನ್ನಲೆ ಮೃತನ ಸಹೋದರಿ ಹೆಬ್ಬೂರು ಠಾಣೆಗೆ ದೂರು ನೀಡಿದ್ದರು. ಆ ಫೆ.26ರಂದು ದಾಸರಹಳ್ಳಿಯ ತೋಟದ ಮನೆ ಬಳಿ ಹೂತಿಟ್ಟಿದ್ದ ಪರಮೇಶ್ ಮೃತದೇಹವನ್ನು ಹೊರ ತೆಗೆದು ಪರೀಕ್ಷೆ ಸಹ ನಡೆಸಲಾಯಿತು. ಮತ್ತೊಂದೆಡೆ ಹೆಬ್ಬೂರು ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಹೃದಯಾಘಾತವಲ್ಲ ಇದು ವ್ಯವಸ್ಥಿತ ಕೊಲೆ? ಪತ್ನಿಯ 3ನೇ ಮದುವೆಯಿಂದ ಬಯಲಾಯ್ತು ಪರಮೇಶ್ ಸಾವಿನ ರಹಸ್ಯ!

ಪರಮೇಶ್ ಪ್ರತಿನಿಧಿಗಳು ಈ ತಿಂಗಳ ಕಾರ್ಯವೂ ಸಹ ನಡೆದಿರಲಿಲ್ಲ. ಆತನ ಸಾವು ಸಂಭವಿಸಿದ 20 ದಿನಕ್ಕೆ ಪತ್ನಿ ಆಶಾ, ಚಂದ್ರಪ್ಪ ಎಂಬಾತನ ವಿವಾಹವಾಗಿದ್ದರು. ಇದು ಪರಮೇಶ್ ಸಹೋದರಿಯರಿಗೆ ಅನುಮಾನ ಮೂಡಿಸಿತ್ತು. ಈ ಹಿನ್ನಲೆ ಕೊಟ್ಟ ದೂರಿನ ಅಡಿ ತನಿಖೆ ವೇಳೆ ಆಶಾ ಹಾಗೂ ಆಕೆಯನ್ನ ಮದುವೆಯಾದ ಚಂದ್ರಪ್ಪನ ಬಗ್ಗೆ ಅನುಮಾನ ಮೂಡಿತ್ತು. ಅದೇ ಆಯಾಮದಲ್ಲಿ ವಿಚಾರಣೆ ನಡೆಸಲಾಗಿ ತಾವೇ ಪರಮೇಶ್ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಹೇಳಿದ್ದಾರೆ. ಇದರಲ್ಲಿ ಕಣ್ಣೀರು ತರಿಸಿದೆ.

ಚಂದ್ರಪ್ಪಗೆ ಆಶಾ ಪರಿಚಯವಾಗಿದ್ದೇಗೆ?

ಇನ್ನು ಆರೋಪಿಗಳನ್ನು ಬಂಧಿಸಿದ ಹೆಬ್ಬೂರು ಪ್ರಕರಣದ ಅಸಲಿ ಕಾರಣ ಹುಡುಕಲು ಮುಂದಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಕ್ಯಾಟರಿಂಗ್ ಕೆಲಸಕ್ಕೆ ಸೇರಿದ್ದ ಆಶಾಗೆ ಚಂದ್ರಪ್ಪನ ಪರಿಚಯವಾಗಿತ್ತು. ಆ ಬಳಿಕ ಇಬ್ಬರು ಆತ್ಮೀಯ ಗೆಳೆಯ. ಇದರ ನಡುವೆ ಮನೆಯಲ್ಲಿ ಸಹ ಪರಮೇಶ್ ಗೆ ಆಶಾ ಕಿರುಕುಳ ಕೊಡುತಿದ್ದಳು. ಮೇಲಾಗಿ ಪರಮೇಶ್ ಸಹ ಆಶಾಗೆ ಎರಡನೇ ಗಂಡನಾಗಿದ್ದ. ಆದರೇ ಆತನ ಕೊಲೆ ಮಾಡಿ ಚಂದ್ರಪ್ಪನ ಮದುವೆಯಾದ ಆಶಾಳ ಉದ್ದೇಶ ಏನಾಗಿತ್ತು ಎನ್ನುವುದರ ಬಗ್ಗೆ ವಿಚಾರಣೆ ಮುಂದುವರೆದಿದೆ. ಆದರೆ ಈ ಘಟನೆ ಇಡಿ ಜನರನ್ನೇ ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ: ತುಮಕೂರು: 2 ತಿಂಗಳ ಹಿಂದಷ್ಟೇ ಮದ್ವೆ ಯುವಕ ಸಾವು: ಸಾವಿನ ಸುತ್ತ ಅನುಮಾನದ ಹುತ್ತ

ಸದ್ಯ ಸಂಬಂಧಿ ಕೊಲೆ ಪ್ರಕರಣ ದಾಖಲಿಸಿಕೊಂಡ ಹೆಬ್ಬೂರು ಆರೋಪಿ ಇಬ್ಬರನ್ನು ಬಂಧಿಸಿದ್ದಾರೆ. ಪತಿಯನ್ನೇ ಕೊಂದ ಪತ್ನಿಯ ನಾಟಕ ಪೊಲೀಸರ ತನಿಖೆ ವೇಳೆ ಬಯಲಾಗಿದ್ದರೆ, ಕೊಲೆಯ ಹಿಂದಿನ ಅಸಲಿ ಕಾರಣ ಪೊಲೀಸರ ತನಿಖೆ ಹಿಂದಕ್ಕೆ ಬರಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *