ಪಾವಗಡ ಪಟ್ಟಣದ ಮಟ್ಕಾ ಕಿಂಗ್‌ಪಿನ್ ಅಶ್ವಥ್ ಮನೆಯ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಆತನಿಗೆ ಸಾಥ್ ನೀಡುತ್ತಿದ್ದ ಸೊಸೆ ಶಿಲ್ಪಾಳನ್ನ ಸಹ ಬಂಧಿಸಿದ್ದಾರೆ,

ಪಾವಗಡ ಪಟ್ಟಣದ ಕೋಟೆ ಬೀದಿಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪವಿರುವ ಮಟ್ಕಾ ಕಿಂಗ್‌ಪಿನ್ ಅಶ್ವಥ್ ಮನೆಯ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಪಾವಗಡ ಇನ್ಸ್‌ಪೆಕ್ಟರ್ ಸುರೇಶ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಅಶ್ವಥ್ ಹಾಗೂ ಆತನಿಗೆ ಸಾಥ್ ನೀಡುತ್ತಿದ್ದ ಸೊಸೆ ಶಿಲ್ಪಾ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಂಧನದ ವೇಳೆ ಪೊಲೀಸರು ಅಶ್ವಥ್ ಬಳಿಯಿದ್ದ ಮಟ್ಕಾ ಚೀಟಿಗಳನ್ನು ಪತ್ತೆ ಹಚ್ಚಿದ್ದಾರೆ. ಇದರೊಂದಿಗೆ ದಂಧೆಗೆ ಬಳಸುತ್ತಿದ್ದ ಮೊಬೈಲ್ ಫೋನ್ ಮತ್ತು ₹3,600 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆನ್‌ಲೈನ್ ಮೂಲಕ ಬುಕ್ಕಿಗಳೊಂದಿಗೆ ಸಂಪರ್ಕ ಸಾಧಿಸಿ ಈತ ದೊಡ್ಡ ಮಟ್ಟದ ಜಾಲ ನಡೆಸುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ಅಶ್ವಥ್ ಮೇಲೆ ಈಗಾಗಲೇ ಪಾವಗಡದ ವಿವಿಧ ಪೊಲೀಸ್ ಠಾಣೆಗಳಲ್ಲಿ 50ಕ್ಕೂ ಹೆಚ್ಚು ಮಟ್ಕಾ ಪ್ರಕರಣಗಳು ದಾಖಲಾಗಿವೆ. ನಿರಂತರವಾಗಿ ಅಕ್ರಮ ದಂಧೆಯಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಪೊಲೀಸರು ಇವನನ್ನು ಪಾವಗಡದಿಂದ ಗಡಿಪಾರು ಮಾಡಿದ್ದರು. ಆದರೂ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಮತ್ತೆ ಅಕ್ರಮ ದಂಧೆ ಮುಂದುವರಿಸಿದ್ದನು.

ಬಂಧಿತ ಮಟ್ಕಾ ಕಿಂಗ್‌ಪಿನ್ ಅಶ್ವಥ್‌ನನ್ನು ಪೊಲೀಸರು ಪಾವಗಡ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸದ್ಯ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Source link
ತುಮಕೂರು: ಪಾವಗಡದಲ್ಲಿ ಮಟ್ಕಾ ಕಿಂಗ್‌ಪಿನ್ ಬಂಧಿಸಿ, ಬೀದಿಗಳಲ್ಲಿ ಮೆರವಣಿಗೆ ಮಾಡಿದ ಪೊಲೀಸರು!