
ತುಮಕೂರು, ಮಾರ್ಚ್ 06: ಜಿಲ್ಲೆಯ ತಿಪಟೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿರುವ ವ್ಯಕ್ತಿಯ ಶವ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೂರು ಲಕ್ಷ ರೂ ಹಣದಾಸೆಗೆ 7 ವರ್ಷದ ಸ್ನೇಹಕ್ಕೆ ಗೆಳೆಯ ಕೊಳ್ಳಿ ಇಟ್ಟಿದ್ದಾನೆ. ಕೊಲೆ (ಕೊಲೆ) ಬಳಿಕ ಗೆಳೆಯನ ಹಣದಲ್ಲೇ ಎರಡನೇ ಪತ್ನಿಗೆ ಹೊಸ ಟಿವಿ ಖರೀದಿಸಿ ಗಿಫ್ಟ್ ನೀಡಿದ್ದ. ಅಷ್ಟೇ ಅಲ್ಲದೆ ಪತ್ನಿಯೊಂದು ಲಾಡ್ಜ್‌ನಲ್ಲಿ ಮಸ್ತಿ ಮಾಡಿ ಪರಾರಿಯಾಗಿರುವ ಭೂಪನನ್ನು ಇದೀಗ ಬಂಧಿಸಿದ್ದಾರೆ. ಸದ್ಯ ಹೊನ್ನವಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಡೆದಿದ್ದೇನು?
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಅರಣ್ಯ. ಎಲ್ಲಾ ಖಾಲಿ ಜಾಗ. ಎತ್ತನೋಡದರೂ ಕಾಣದ ಸೂರು. ನಿಜ ಹೇಳಬೇಕೆಂದರೆ ಅದೊಂದು ನಿರ್ಜನ ಸ್ಥಳ. ಆ ಸ್ಥಳದಲ್ಲಿ ಕಳೆದ ಫೆಬ್ರುವರಿ 20 ರ ಬೆಳಿಗ್ಗೆಯಂದು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ದಾರಿಯ ಪಕ್ಕದಲ್ಲಿ ಅದೊಂದು ಅಪರಿಚಿತ ಶವವಿತ್ತು. ದುಷ್ಕರ್ಮಿಗಳು ಆ ವ್ಯಕ್ತಿಯ ಕತ್ತು ಸೀಳಿ ಹತ್ಯೆಗೈದಿದ್ದರು. ಅರಣ್ಯ ದಾರಿಯಲ್ಲಿ ಹೆಜ್ಜೆ ಹಾಕಿದ್ದ ಅದೊಬ್ಬ ಶವ ಕಂಡು ಬೆಚ್ಚಿ ಬಿದ್ದಿದ್ದ. ಕೂಡಲೇ ಹೊನ್ನವಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದ.
ಇದನ್ನೂ ಓದಿ: ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು
ಸ್ಥಳಕ್ಕೆ ಬಂದ ಪೊಲೀಸರಿಗೆ ಗೊಂದಲ. ಕೊಲೆ ಮಾಡಿದ್ಯಾರು ಅನ್ನೋದಕ್ಕಿಂತ ಅಲ್ಲಿ ಕೊಲೆಯಾದವನು ಯಾರು ಅನ್ನೋದೇ ಪೊಲೀಸರಿಗೆ ಪ್ರಶ್ನೆಯಾಗಿತ್ತು. ಹೀಗಾಗಿ ಅಲ್ಲಿ ಸಿಕ್ಕ ಒಂದಷ್ಟು ಮಾಹಿತಿಗಳ ಮುಖಾಂತರ ತನಿಖೆ ಆರಂಭಿಸಿದ ಪೊಲೀಸರಿಗೆ ಮೃತ ವ್ಯಕ್ತಿ ಪುಟ್ಟರಾಜು ಎಂಬುದು ಗೊತ್ತಾಗಿತ್ತು. ಇನ್ನು ಈತ ಚಿಕ್ಕಮಗಳೂರಿನ ಬೀರೂರು ನಿವಾಸಿ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಲಕ್ಷ ಲಕ್ಷ ಹಣ ತಂದಿದ್ದ ಪುಟ್ಟರಾಜು
ಅಸಲಿಗೆ ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತಿದ್ದ ಪುಟ್ಟರಾಜು ತುಮಕೂರು ಬಂದಿದ್ದು ಏಕೆ ಎಂಬ ಗೊಂದಲದ ಜೊತೆ ಕೊಲೆಯಾಗಿ ಎಂಬ ಪ್ರಶ್ನೆ ಮೂಡಿತ್ತು. ಹೀಗಾಗಿ ಕೊಲೆಯಾದವನು ಪತ್ತೆ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಪುಟ್ಟರಾಜು ವಿಳಾಸ ಸಿಕ್ಕಿತ್ತು. ಅಸಲಿಗೆ ಫೆಬ್ರವರಿ 19 ರಂದು, ಅಂದರೆ ಕೊಲೆಯ ಹಿಂದಿನ ದಿನ ಬೆಳಿಗ್ಗೆ 11 ಗಂಟೆಗೆ ಪುಟ್ಟರಾಜು ಬಿರೂರಿನ ತನ್ನ ಮನೆಯಿಂದ ಹೊರ ಬಂದಿದ್ದ. ಈ ವೇಳೆಯಲ್ಲಿ ಲಕ್ಷ ಲಕ್ಷ ಹಣ ಹಿಡಿದಿದ್ದರಾಜು ಹೊನ್ನವಳ್ಳಿಯ ಚಿನ್ನದ ಹರಾಜು ಪ್ರಕ್ರಿಯೆಯಲ್ಲಿ ಕೈಯಲ್ಲಿ ಪುಟ್ಟದಾಗಿ ಹೇಳಿದ್ದ. ಈ ವೇಳೆ ಬಂದಿದ್ದ ಶಫೀ ಎಂಬ ಏಳು ವರ್ಷದ ಗೆಳೆಯನ ಜೊತೆ ಬೈಕ್ ಹತ್ತಿದ ಪುಟ್ಟರಾಜು ತುಮಕೂರಿನತ್ತ ಹೊರಟಿದ್ದ. ಅದೇ ಮರು ದಿನ ಪುಟ್ಟರಾಜು ಶವವಾಗಿ ಇದ್ದಿದ್ದ. ಆದರೆ ಈ ವೇಳೆ ಆತನ ಜೊತೆ ಹೊರಟಿದ್ದ ಗೆಳೆಯ ಶಫಿ ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿದ್ದ. ಹೀಗಾಗಿ ಇಬ್ಬರ ಬಳಿ ಇದ್ದ ಹಣಕ್ಕಾಗಿಯೋ ಅಥವಾ ಹರಾಜು ಬಳಿಕ ಚಿನ್ನಕ್ಕಾಗಿಯೋ ಅಪರಿಚಿತ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಅಸಲಿಗೆ ಕೊಲೆಯಾದ ಪುಟ್ಟರಾಜು ಗೆಳೆಯ ಶಫೀ ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯವನು. ಚಿಕ್ಕಮಗಳೂರಿನ ಬಿರೂರಿನಲ್ಲಿ ನೆಲೆಸಿದ್ದ. ಈತ ಕಬಾಬ್ ಸೆಂಟರ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ಈತನಿಗೆ ಪುಟ್ಟರಾಜು ಕಳೆದ ಏಳು ವರ್ಷದಿಂದ ಪರಿಚಯ. ಆರಂಭದಲ್ಲಿ ಕಬಾಬ್ ಅಂಗಡಿ ಬಳಿ ಬರುತಿದ್ದ ಪುಟ್ಟರಾಜು ನಂತರ ಗೆಳೆಯನಾಗಿದ್ದ. ಏಳು ವರ್ಷದ ಈ ಆತ್ಮೀಯತೆಯಲ್ಲೇ ಇಬ್ಬರ ನಡುವೆ ಸಹ ಒಂದಷ್ಟು ಹಣಕಾಸಿನ ವ್ಯವಹಾರವು ನಡೆದಿತ್ತು. ಆದರೆ ಈ ಹಣ ಇಬ್ಬರ ನಡುವೆ ಯಾವತ್ತು ಜಗಳ ತಂದಿರಲಿಲ್ಲ. ಒಬ್ಬರಿಗೊಬ್ಬರು ಕಷ್ಟಕ್ಕೆ ಜೊತೆಯಾಗಿದ್ದರು. ಶಫೀ ಸಹ ಆಗಾಗ ಪುಟ್ಟರಾಜು ಮನೆಗೆ ಬಂದು ಹೋಗುತ್ತಿದ್ದ. ಜೀವನದಲ್ಲಿ ಮುಂದೆ ಹೇಗೆ ಸೆಟಲ್ ಆಗುವುದು ಎನ್ನುವ ಇಬ್ಬರಿಗೂ ಚರ್ಚೆ ಇತ್ತು.
ಹೀಗೆ ಆತ್ಮೀಯರಾಗಿದ್ದರು ಕಳೆದ ಫೆಬ್ರವರಿ 19ರಂದು ಹೊನ್ನವಳ್ಳಿಗೆ ತೆರಳಿದ್ದರು. ಕಾರಣ ಅದೊಂದು ಚಿನ್ನದ ಹರಾಜು ಪ್ರಕ್ರಿಯೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಚಿನ್ನದ ಬೆಲೆ. ಈ ಸಮಯದಲ್ಲಿ ಚಿನ್ನ ಖರೀದಿ ಮಾತು ಸವಾಲು. ಇಲ್ಲವೇ ಹಾರಾಜು ಪ್ರಕ್ರಿಯೆ ಚಿನ್ನ ಕಡಿಮೆಗೆ ಸಿಕ್ಕರೆ ಖರೀದಿಸಬಹುದು. ಆ ಬಳಿಕ ಆ ಚಿನ್ನ ಭವಿಷ್ಯಕ್ಕೆ ಉಪಯೋಗವಾಗುತ್ತೆ. ಹೀಗಂತ ಯೋಚನೆ ಮಾಡಿದ್ದ ಶಫೀ ಕಳೆದ ಕೆಲವು ದಿನಗಳ ಹಿಂದೆ ಪುಟ್ಟರಾಜುಗೆ ತಿಳಿಸಿದ್ದ. ಜೊತೆಗೆ ಪುಟ್ಟರಾಜು ಅವರ ಕಡೆ ಶಫೀ ಕರೆದುಕೊಂಡು ಹೋಗಿದ್ದ, ಚಿನ್ನ ಹರಾಜು ಪ್ರಕ್ರಿಯೆ ತೋರಿಸಿ ಲಾಭದ ಲೆಕ್ಕ ಹೇಳಿದ್ದ. ನಂತರ ತಾನೂ ಹಾರಾಜು ಪ್ರಕ್ರಿಯೆಯಲ್ಲಿ ಚಿನ್ನ ಖರೀದಿಸಲು ಪುಟ್ಟರಾಜು ಆಸಕ್ತಿ ತೋರಿದ್ದಕ್ಕೆ ಮನೆಯಲ್ಲಿ ಒಂದಷ್ಟು ಹಣ ಕೂಡ ತಂದಿದ್ದ. ಶಫೀ ಜೊತೆ ಫೆಬ್ರವರಿ 19ರಂದು ತುಮಕೂರಿನ ತಿಪಟೂರು ತಾಲೂಕಿನ ಹೊನ್ನವಳ್ಳಿಯ ಖಾಸಗಿ ಫೈನಾನ್ಸ್ ನ ಹರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಹೀಗೆ ಹೋದ ಪುಟ್ಟರಾಜು ಶವವಾಗಿ ಪತ್ತೆಯಾದರೇ, ಶಫೀ ನಾಪತ್ತೆಯಾಗಿದ್ದವರು.
ಶಫೀ ಕಾಣೆ: ಪೊಲೀಸರಿಗೆ ಅನುಮಾನ
ಶಫೀ ಕಾಣೆಯಾದ ಹಿನ್ನಲೆ ಪೊಲೀಸರಿಗೆ ಅನುಮಾನ ಮೂಡಿತ್ತು. 7 ವರ್ಷದ ಆತ್ಮೀಯ ಗೆಳೆಯರು. ಒಬ್ಬ ಶವವಾಗಿ ಸಿಕ್ಕರೆ ಮತ್ತೊಬ್ಬ ಅರಣ್ಯ ಪ್ರದೇಶದಲ್ಲಿ ನಾಪತ್ತೆ ಅನ್ನೋದು ಗೊಂದಲ ಮೂಡಿಸಿತ್ತು. ಕೂಡಲೇ ಅಲರ್ಟ್ ಆದ ಶಫೀ ಹುಡುಕಲು ಮುಂದಾಗಿದ್ದರು. ಆಗಲೇ ನೋಡಿ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು. ಅಸಲಿಗೆ ಪುಟ್ಟರಾಜು ಕೊಲೆ ಆಕಸ್ಮಿಕವಾಗಿ ಆಗಲಿಲ್ಲ. ಬದಲಾಗಿ ಅದೊಂದು ಪ್ರೀ ಪ್ಲ್ಯಾನ್ ಆಗುತ್ತಿದೆ. ಯಾವಾಗ ಶಫೀ ಹುಡುಕಲು ಮುಂದಾರೋ ಆಗ ಶಫೀಯ ಒಂದಷ್ಟು ಸಂಗತಿಗಳು ಹೊರ ಬಂದಿದ್ದವು. ಶಫೀಗೆ ಎಲ್ಲಿಲ್ಲದ ಸಾಲ, ನಮಗೆ ತುಂಬಾ ಸಾಲ. ಮೂಲತಃ ತುಮಕೂರಿನ ಹೊನ್ನವಳ್ಳಿಯನ್ನೇ ಆದ ಈತ ಕಳೆದ 14 ವರ್ಷದ ಹಿಂದೆಯೇ ಬಿಟ್ಟಿದ್ದ. ಕಾರಣ ಮೈತುಂಬ ಸಾಲ. ಹಣ ಕೊಟ್ಟವರು ಮನೆ ಬಳಿ ಬರುತಿದ್ದಂತೆ ಬಿಟ್ಟಿದ್ದ ಶಫೀ ಚಿಕ್ಕಮಗಳೂರಿಗೆ ತೆರಳಿದ್ದ.
ಹೀಗೆ ಚಿಕ್ಕಮಗಳೂರಿಗೆ ಬಂದು ಬಿರೂರಿನಲ್ಲಿ ಮನೆ ಮಾಡಿಕೊಂಡ ಶಫೀ ಕಬಾಬ್ ಅಂಗಡಿ ತೆರೆದಿದ್ದ. ಅಂಗಡಿ ಮಾಡಿಕೊಂಡು ಹೊಸ ಜೀವನ ಮಾಡೊ ನಡುವೆ ಎರಡು ಮದುವೆ. ಇಬ್ಬರು ಹೆಂಡತಿಯರ ಮುದ್ದಿನ ಗಂಡನಾದ ಶಫೀಗೆ ಹಣದಾಸೆ. ಹೀಗಾಗಿ ಅಲ್ಲಿಯೂ ಸಹ ಮತ್ತೆ ಸಾಲ. ಮಾಡಿದ ಸಾಲಗಳನ್ನು ತೀರಿಸಲಾಗದ ಪರದಾಡುತಿದ್ದ. ಇನ್ನು ಈತ ಪುಟ್ಟರಾಜು ಜೊತೆ ಬಂದಿದ್ದ ಅನ್ನೋ ಗೊಂದಲ. ಇದರ ನಡುವೆ ಪೊಲೀಸರಿಗೆ ಅನುಮಾನ ಮೂಡಿಸಿದ್ದು, ಪುಟ್ಟರಾಜು ಮನೆಯಲ್ಲಿ ಹೇಳಿದ್ದ ಮಾತು.
ಕೊಲೆ ಮಾಡಿ ಬಿಟ್ಟಿದ್ದ ಆರೋಪಿ: ಎರಡನೇ ಹೆಂಡತಿ ಟಿವಿ ಗಿಫ್ಟ್
ಹೊನ್ನವಳ್ಳಿಯ ಫೈನಾನ್ಸ್‌ನಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿ ಹೋಗಿದ್ದಾರೆ. ಆದರೆ ಅವತ್ತು ಹೊನ್ನವಳ್ಳಿಯಲ್ಲಿ ಯಾವುದೇ ಚಿನ್ನದ ಹರಾಜು ಪ್ರಕ್ರಿಯೆ ಇರಲಿಲ್ಲ. ಮೇಲಾಗಿ ಅದೊಂದು ಸುಳ್ಳು. ಆ ಸುಳ್ಳು ಸೃಷ್ಟಿಸಿದ್ದವನು ಇದೆ ಶಫೀ. ಅಲ್ಲಿಗೆ ಶಫೀ ಕೃತ್ಯ ಪೊಲೀಸರಿಗೆ ಗೊತ್ತಾಗಿತ್ತು. ಆತನ ಹುಡುಕಾಟಕ್ಕೆ ಮುಂದಾದ ಟೆಕ್ನಿಕಲ್ ಜಾಡು ಹಿಡಿದಿದ್ದರು. ಅದಾಗಲೇ ಕೊಲೆ ಮಾಡಿ ಬಿಟ್ಟಿದ್ದ ಆರೋಪಿ ಶಫೀ ತನ್ನ ಎರಡನೇ ಹೆಂಡತಿ ಭೇಟಿ ಮಾಡಿದ್ದ. ಹಾಸನದ ಅರಸಿಕೆರೆಯ ಲಾಡ್ಜ್‌ನಲ್ಲಿ ಆಕೆ ಭೇಟಿ ಮಾಡಿದ ಆಸಾಮಿ ಅವಳಿಗೊಂದು ಟಿವಿ ಹಾಗೂ 60 ಸಾವಿರ ರೂ ಹಣ ನೀಡಿದ್ದರು. ಆ ಬಳಿಕ ಅಲ್ಲಿಂದ ಹೊರಟವನೇ ಬೆಂಗಳೂರು ಮಾರ್ಗವಾಗಿ ಚಿಂತಮಣಿ ಸೇರಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೊನ್ನವಳ್ಳಿ ಪೊಲೀಸರು ಕೊನೆಗೂ ಆತನನ್ನು ಬಂಧಿಸಿದ್ದರು. ಆ ಬಳಿಕ ಪೊಲೀಸರಿಗೆ ಗೊತ್ತಾಗಿದ್ದು ಮೂರು ಲಕ್ಷ ರೂ ಸಾಲದ ಕಥೆ.
ಸಾಲದ ಸುಳಿಯಲ್ಲಿ ಸಿಲುಕಿದ ಶಫೀಗೆ ಖರ್ಚು ಮಾಡುವ ಹುಚ್ಚಾಟ. ಹೀಗಾಗಿಯೇ ಮಾಡಿಕೊಂಡ ಒಂದಷ್ಟು ಸಾಲ ಹಾಗೂ ತುರ್ತಾಗಿ ಬೇಕಾದ ಹಣಕ್ಕಾಗಿ ಶಫೀ ಪರದಾಡಿದ್ದ. ಈಗಾಗಲೇ ಗೊತ್ತಿರುವವರ ಬಳಿಯೆಲ್ಲಾ ಸಾಲ ಮಾಡಿದ್ದ ಶಫಿಗೆ ಮತ್ಯಾರನ್ನು ಕೇಳುವುದು ಎಂಬ ಗೊಂದಲ. ಈ ವೇಳೆ ಶಫೀಗೆ ನೆನಪಾದರೆ ಪುಟ್ಟರಾಜು. ಪುಟ್ಟರಾಜು ಜೊತೆ ಮೊದಲಿನಿಂದಲೂ ಸಣ್ಣಪುಟ್ಟ ಹಣದ ವ್ಯವಹಾರ ಮಾಡಿದ್ದ ಶಫೀ ಈ ಬಾರಿ ಆತನಿಂದ ದೊಡ್ಡದನ್ನೇ ಬಯಸಿದ್ದ. ಆದರೆ ಅದನ್ನು ಕೇಳುವುದು ಹೇಗೆ ಎಂಬ ಗೊಂದಲ ಶಫೀಗಿತ್ತು. ಹೀಗಾಗಿಯೇ ಚಿನ್ನದ ಹರಾಜು ಕಥೆ ಕಟ್ಟಿದ್ದ.
ಚಿನ್ನದ ಹರಾಜು ಕಥೆ ನಂಬಿಸುವ ಬರದಲ್ಲಿ ಶಫೀಗೆ ಹುಚ್ಚು ಯೋಚನೆಯೊಂದು ಮೂಡಿತ್ತು. ಅದುವೇ ಪುಟ್ಟರಾಜು ಬಳಿ ಇರುವ ಹಣ ಎಗರಿಸುವ ಚಿಂತೆಯಲ್ಲಿ ಅವನ ಕೊಲೆ ಮಾಡುವ ಸಂಚು. ಯಾವಾಗ ಶಫೀ ನಂಬಿದ ಮಾತುಗಳನ್ನೆಲ್ಲಾ ಪುಟ್ಟರಾಜು ಆರಂಭಿಸಿದ್ನೋ ಆಗ ಹೊಸದೊಂದು ಕಥೆ ಸೃಷ್ಟಿಸಿಬಿಟ್ಟಿದ್ದ. ಈ ಕಥೆಗೆ ಸ್ವಂತವನ್ನು ಆರಿಸಿಕೊಂಡ ಶಫೀ ಹೊನ್ನವಳ್ಳಿಯಲ್ಲಿ ಫೈನಾನ್ಸ್ ನ ಚಿನ್ನದ ಹರಾಜು ಹೋದರೆ ದೊಡ್ಡ ಲಾಭ ಬರುತ್ತದೆ ಎಂಬ ಕಥೆ ಕಟ್ಟಿದ್ದಕ್ಕೆ ನಾನು ಸಹ ಹಣ ತರ್ತಿನಿ ನೀನು ಲಕ್ಷ ಲಕ್ಷ ಹಣ ತೆಗೆದುಕೊಂಡು ಬಾ ಎಂದಿದ್ದೆ. ಈ ಮಾತು ಕೇಳಿದ ಪುಟ್ಟರಾಜು ಮನೆಯಿಂದ ಎರಡುವರೆ ಲಕ್ಷ ರೂ ತಂದು ಶಫೀ ಕೈಗಿಟ್ಟಿದ್ದ. ಅಲ್ಲಿಗೆ ಶಫೀ ಯೋಚನೆ ಮತ್ತಷ್ಟು ಅಡ್ಡದಾರಿ ಕಡೆ ತಿರುಗಿತ್ತು. ಹೀಗಾಗಿ ಮೊದಲೇ ಒಂದಷ್ಟು ಸಂಚು ರೂಪಿಸಿದ್ದ ಶಫೀ ತನ್ನ ಮತ್ತೊಬ್ಬ ಗೆಳೆಯನ ಸ್ಪ್ಲೆಂಡರ್ ಬೈಕ್ ತಂದಿದ್ದ. ಅದೇ ಗಾಡಿಯಲ್ಲಿ ಹೋಗೋಣ ಬಾ ಎಂದು ಪುಟ್ಟರಾಜು ಕರೆದಿದ್ದ. ಅತ್ತ ಪುಟ್ಟರಾಜು ನೈಟ್ ಪ್ಯಾಟ್ ನಲ್ಲಿ ಹೊರ ಬಂದವೇ ಕೈಯಲ್ಲಿ ಹಣ ಹಿಡಿದ್ದ. ತನ್ನ ಬಳಿ ಹಣ ಇಟ್ಕೊಳೋಕೆ ಆಗಲ್ಲಪ್ಪ ನೀನೇ ಇಟ್ಕೊ ಅಂತ ಆ ಹಣವನ್ನು ಶಫೀ ಕೈಗಿಟ್ಟಿದ್ದ.
ಪುಟ್ಟರಾಜು ಹಣದಿಂದಲೇ ಆಯುಧ ಖರೀದಿ
ಹೀಗೆ ಹಣದ ಜೊತೆ ಹೊರಟವರೇ ನೇರವಾಗಿ ಅರಸಿಕೆರೆಯತ್ತ ತೆರಳಿದ್ದರು. ಅದು ಶಫೀ ಪ್ಲ್ಯಾನ್‌ನಂತೆ. ಕಾರಣ ಶಫೀ ಅದೊಂದು ಅಂಗಡಿ ಬಳಿ ಕರೆದುಕೊಂಡು ಹೋಗಿದ್ದ. ಅಲ್ಲಿ ಮನೆಯ ಬಳಿ ಒಂದಷ್ಟು ಗಿಡಗಳು ಬೆಳೆದಿವೆ. ಅದನ್ನು ಮಾಡಬೇಕು. ಹೀಗಾಗಿ ಅಲ್ಲಿ ಒಂದಷ್ಟು ಸಾಮಾನು ಖರೋದಿ ಇದೆ ಎಂದಿದ್ದ. ಈತನ ಮಾತು ನಂಬಿದ್ದ ಪುಟ್ಟರಾಜುವಿಗೆ ಮುಂದಾಗಬಹುದಿದ್ದ ಅನಾಹುತದ ಅರಿವಿರಲಿಲ್ಲ. ಹೀಗೆ ಅರಸಿಕೆರೆಯ ಅಂಗಡಿ ಒಂದಕ್ಕೆ ಬಂದ ಶಫೀ ಅಲ್ಲಿ ಮಚ್ಚು, ಸಣ್ಣ ಎರಡು ಚಾಕು, ಪೊರಕೆ ಅಂತ ಖರೀದಿ ಮಾಡಿದ್ದ. ಅಸಲಿಗೆ ಪುಟ್ಟರಾಜು ಹತ್ಯೆಗೆ ಸಂಚು ರೂಪಿಸಿದ್ದ ಶಫೀಗೆ ಮಚ್ಚು ಮಾತ್ರ ಬೇಕಾಗಿತ್ತು. ಆದರೆ ಪುಟ್ಟಿಗೆ ಈ ವಿಚಾರ ಗೊತ್ತಾಗಬಾರದು ಅನ್ನೋ ಕಾರಣಕ್ಕೆ ನಾಟಕವಾಡಿ ಕಥೆ ಬಿಟ್ಟ ಶಫೀ ಬೇರೆ ವಸ್ತುಗಳನ್ನು ಸಹ ಖರೀದಿಸಿದ್ದ. ಆ ಬಳಿಕ ಬೈಕ್ ಏರಿ ಇಬ್ಬರು ಹೊರಟವರೇ ನೇರವಾಗಿ ಅರಣ್ಯ ಪ್ರದೇಶದತ್ತ ಬಂದಿದ್ದರು. ಅದಾಗಲೇ ಸಮಯ ಮಧ್ಯಾಹ್ನವಾಗಿತ್ತು. ಉರಿ ಬಿಸಿಲು ನೆತ್ತಿಯ ಮೇಲಿತ್ತು. ಕಾಡಿನ ಒಂಟಿ ದಾರಿಯಲ್ಲಿ ಬೈಕ್ ಪಕ್ಕಕ್ಕೆ ಹಾಕಿದ ಶಫೀ ಕೆಳಗೆ ಇಳಿದಿದ್ದ. ಮೂತ್ರ ವಿಸರ್ಜನೆ ರೀತಿ ಹಿಂದೆ ಹೊದ ಶಫೀ ಏಕಾಏಕಿ ಮಚ್ಚಿನಿಂದ ಪುಟ್ಟರಾಜು ತಲೆಗೆ ಎರಡು ಬಾರಿ ಹೊಡೆದಿದ್ದ. ಕೂಡಲೇ ತಿರುಗಿದ ಪುಟ್ಟರಾಜು ಯಾಕೋ ಶಫೀ ಎಂದ ಅಷ್ಟೇ. ಮಚ್ಚಿನಿಂದ ಕುತ್ತಿಗೆಗೆ ಹಲ್ಲೆ ಮಾಡಿದ. ಸ್ಥಳದಲ್ಲೇ ಬಿದ್ದ ಪುಟ್ಟರಾಜು ಸಾವನಪ್ಪಿದ್ದ.
ಹೇಳಿಕೇಳಿ ಅದು ಅರಣ್ಯ ಪ್ರದೇಶ. ಸಾಮಾನ್ಯವಾಗಿ ಆ ರಸ್ತೆಯಲ್ಲಿ ಹೆಚ್ಚಾಗಿ ಜನರು ಹೋಗುವುದಿಲ್ಲ. ಹೀಗಾಗಿಯೇ ಮಧ್ಯಾಹ್ನ ಕೊಲೆ ನಡೆದ ವಿಚಾರ ಬೆಳಕಿಗೆ ಬಂದಿದ್ದು ಮರುದಿನ ಬೆಳಗ್ಗೆ. ವ್ಯಕ್ತಿಯೋರ್ವ ಹಾಲು ತೆಗೆದುಕೊಳ್ಳುವಾಗ ಶವ ಕಾಣಿಸಿದೆ. ಆ ಬಳಿಕ ಆತ ಹೊನ್ನವಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ: ಗಲಾಟೆ ಬಿಡಿಸಲು ಹೋದವನಿಂದಲೇ ಚಾಕು ಇರಿತ: ಹೋಳಿ ದಿನವೇ ನಡೀತು ರಕ್ತದೋಕುಳಿ
ಇತ್ತ ಕೊಲೆ ಬಳಿಕ ಬಿಟ್ಟ ಶಫೀ ಡಿವೋರ್ಸ್ ಆಗಿದ್ದ ಹಳೆ ಹೆಂಡತಿ ನೆನಪಿಸಿಕೊಂಡಿದ್ದ. ಅದಾಗಲೇ ಪುಟ್ಟರಾಜು ಹಣ ಈತನ ಕೈ ಸೇರಿತ್ತು. ಹೀಗಾಗಿಯೇ ಹೊಸ ಟಿವಿ ಖರೀದಿಸಿ ಆಕೆ ಮನೆಗೆ ತೆರಳಿ ಟಿವಿ ಕೊಟ್ಟ ಆತ ಬಳಿಕ ಅರಿಸಿಕೆರೆ ಲಾಡ್ಜ್ ಕರೆದೊಯ್ದು 60 ಸಾವಿರ ಕೊಟ್ಟಿದ್ದ. ನಂತರ ಅಲ್ಲಿಂದ ಉಳಿದ ಹಣದ ಸಮೇತ ಚಿಂತಾಮಣೆ ಹೊನ್ನವಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.