ಸ್ಪ್ಯಾನಿಷ್ ನಟಿ ಆನಾ ಓಬ್ರೀಗಾನ್, ಕ್ಯಾನ್ಸರ್‌ನಿಂದ ಮೃತಪಟ್ಟ ತನ್ನ 27 ವರ್ಷದ ಮಗನ ಕೊನೆಯ ಆಸೆಯನ್ನು ಈಡೇರಿಸಲು ಮಗುವನ್ನು ಪಡೆದಿದ್ದಾರೆ. ಮಗನ ವೀರ್ಯಾಣು ಬಳಸಿ ಜನಿಸಿದ ಈ ಮಗು, ವಾಸ್ತವದಲ್ಲಿ ಆಕೆಗೆ ಮೊಮ್ಮಗಳಾಗಿದ್ದು, ಕಾನೂನುಬದ್ಧವಾಗಿ ಮಗಳಾಗಿದ್ದಾಳೆ.

ಇಲ್ಲೊಬ್ಬ ಫೇಮಸ್ ಕಿರುತೆರೆ ನಟಿ ಹಾಗೂ ಟಿವಿಯ ಫೇಮಸ್ ಆ್ಯಂಕರ್ ಒಬ್ಬಳು ಮಗನಿಂದಲೇ ಮಗು ಪಡೆದಿದ್ದಾಳೆ. ಇದರ ಅರ್ಥ ಅವಳಿಗೆ ಹುಟ್ಟಿರುವ ಮಗಳಿಗೆ ಈಕೆ ನಿಜಾರ್ಥದಲ್ಲಿ ಮೊಮ್ಮಗು ಆದರೆ, ಈಗ ಅದಕ್ಕೆ ಇವಳು ತಾಯಿಯಾಗಿದ್ದಾಳೆ. ಆದರೆ ವಿಚಿತ್ರ ಎಂದರೆ ಮಗನಿಂದ ಮಗು ಪಡೆದಿರುವುದಕ್ಕೆ ಮಗನೇ ಪತಿಯ ಸ್ಥಾನದಲ್ಲಿ ಇದ್ದಾನೆ!

ಏನೋ ಫುಲ್ ಕನ್ಫ್ಯೂಸ್ ಅನ್ನಿಸತ್ತೆ ಅಲ್ವಾ? ಅಷ್ಟಕ್ಕೂ ಇಲ್ಲಿ ಆಗಿದ್ದೇ ಬೇರೆ. ನಟಿ ಆನಾ ಬಾಡಿಗೆ ತಾಯ್ತನದ (Surrogacy) ಮೂಲಕ ಮಗುವನ್ನು ಪಡೆದಿದ್ದಾಳೆ. ಅಂದರೆ ತಮ್ಮ ಅಂಡಾಣು ಹಾಗೂ ಮಗನ ವೀರ್ಯಾಣುವನ್ನು ಶೇಖರಿಸಿ ಬೇರೊಬ್ಬ ಮಹಿಳೆಯ ಗರ್ಭದಲ್ಲಿ ಇರಿಸಿ ಮಗುವನ್ನು ಪಡೆಯಲಾಗಿದೆ. ಸರೋಗಸಿ ಮೂಲಕ ಈಕೆ ಮಗುವನ್ನು ಪಡೆದಿರುವುದು ಕೂಡ ಕುತೂಹಲವೇ ಆಗಿದೆ. ಅಷ್ಟಕ್ಕೂ ಆಕೆ ಹಾಗೆ ಮಾಡಿದ್ದು, ಸತ್ತು ಹೋಗಿರುವ ತಮ್ಮ ಮಗನ ವೀರ್ಯವನ್ನು ಪಡೆಯುವುದರ ಮೂಲಕ!

ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದು ವೈದ್ಯಕೀಯ ಲೋಕದಲ್ಲಿಯೂ ಅದ್ಭುತ ಸೃಷ್ಟಿಯಾಗುತ್ತಿದೆ. ಅಂಥದ್ದೇ ಒಂದು ಅಚ್ಚರಿ ಇದಾಗಿದೆ. ಅಂದಹಾಗೆ ಈಕೆ ಸ್ಪ್ಯಾನಿಷ್ ಖ್ಯಾತ ಕಿರುತೆರೆ ನಟಿ. ಹೆಸರು ಎನ್ನಾ ವಿಕ್ಟೋರಿಯಾ ಗರ್ಸಿಯ ಓಬ್ರೀಗಾನ್. ಇವಳು ಟಿವಿ ಆ್ಯಂಕರ್ ಕೂಡ. 58 ವರ್ಷದ ಈ ನಟಿ, ಯುರೋಪಿಯನ್ ಮತ್ತು ಅಮೆರಿಕನ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ್ಯವಾಗಿ ಸ್ಪ್ಯಾನಿಷ್ ದೂರದರ್ಶನ ಸರಣಿ ಎ ಲಾಸ್ ಒನ್ಸ್ ಎನ್ ಕಾಸಾ ಮತ್ತು ಅನಾ ವೈ ಲಾಸ್ 7 ನಲ್ಲಿನ ಅಭಿನಯದಿಂದ ಇವರು ಮನೆಮಾತಾಗಿದ್ದಾರೆ.

68 ವರ್ಷದ ನಟಿ ಆನಾ ಅವರು ಈ ವಿಷಯವನ್ನು ಹೋಲಾ ಎಂಬ ಮ್ಯಾಗಜಿನ್ನಲ್ಲಿ ತಿಳಿಸಿದ್ದಾರೆ. 2020ರಲ್ಲಿ ನನ್ನ ಮಗ 27ನೇ ವರ್ಷದಲ್ಲಿಯೇ ಕ್ಯಾನ್ಸರ್‌ನಿಂದ (Cancer) ಮೃತಪಟ್ಟ. ಆತನಿಗೆ ಬಹಳ ವರ್ಷಗಳಿಂದಲೂ ತನ್ನದೇ ಒಂದು ಮಗು ಬೇಕು ಎನ್ನುವ ಆಸೆ ಇತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಕ್ಯಾನ್ಸರ್‌ನಿಂದ ಈತ ಬಹಳ ವರ್ಷ ಉಳಿಯುವುದಿಲ್ಲ ಎಂದು ತಿಳಿದಿತ್ತು. ಆದ್ದರಿಂದ ಆತ ಮಗುವನ್ನು ತಾನು ಜೀವಂತ ಇರುವಾಗಲೇ ನೋಡುವ ಆಸೆ ಹೊಂದಿದ್ದ. ಕೊನೆಗೆ ಆತ ಬದುಕಿರುವಾಗ ಇದು ಸಾಧ್ಯವಾಗಿರಲಿಲ್ಲ. ಅವನ ಕೊನೆ ಆಸೆಯೂ ಇದೇ ಆಗಿತ್ತು ಎಂದಿದ್ದಾರೆ ಆನಾ.

ಆತನ ಆಸೆಯನ್ನು ಅರಿತಿದ್ದ ವೈದ್ಯರು ಆತನ ವೀರ್ಯಾಣು ಸಂಗ್ರಹಿಸಿ ಇಟ್ಟಿದ್ದರು. ಆತ ಮೃತಪಟ್ಟ ಬಳಿಕ ನನ್ನ ವೀರ್ಯಾಣು ಸೇರಿಸಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲಾಗಿದೆ ಎಂದು ನಟಿ ಆನಾ ಹೇಳಿದ್ದಾರೆ. 2020ರಲ್ಲಿ ನಟಿಯ ಮಗನ ಸಾವಿನ ಮೊದಲು ವೈದ್ಯರು ಆತನಿಗೆ ವೀರ್ಯ ತೆಗೆದಿಡಲು ಪ್ರೋತ್ಸಾಹಿಸಿದ್ದರು. ಕ್ಯಾನ್ಸರ್ ಚಿಕಿತ್ಸೆ ಆರಂಭಿಸುವ ಮೊದಲೇ ವೀರ್ಯ ತೆಗೆದಿಡುವಂತೆ ವೈದ್ಯರು ನನ್ನ ಮಗನಿಗೆ ಸಲಹೆ ಕೊಟ್ಟಿದ್ದರು. ಅದರಂತೆಯೇ ಎಲ್ಲವೂ ನಡೆದಿದೆ ಎಂದಿದ್ದಾರೆ.

ಈ ಮೂಲಕ ತನ್ನದೇ ಮಗು ಹಾಗೂ ಮೊಮ್ಮಗಳ ಮುಖವನ್ನು ಆನಾ ರಿವೀಲ್ ಮಾಡಿದ್ದಾರೆ. ಆಕೆಗೆ ಸಾಂಡ್ರಾ ಎಂದು ಹೆಸರಿಟ್ಟಿದ್ದಾರೆ. ನಟಿ ಮ್ಯಾಗಜಿನ್ (Magazine) ಮುಖಪುಟದಲ್ಲಿ ಮೊಮ್ಮಗಳ ಜೊತೆ ಪೋಸ್ ಕೊಟ್ಟಿದ್ದಾರೆ. ಮೃತಪಟ್ಟ ಮಗನಿಗಾಗಿ ಸ್ಪೆಷಲ್ ಪೋಸ್ಟ್ ಬರೆದ ನಟಿ, ಅಲೆಸ್ (Aless) ನಿನ್ನನ್ನು ಕ್ಯಾನ್ಸರ್‌ನಿಂದ ಬದುಕಿಸಲು ಪ್ರಯತ್ನಿಸಿದ್ದೆ. ಆದರೆ ನಾನು ಸೋತೆ. ನಿನ್ನ ಮಗುವನ್ನು ಈ ಭೂಮಿಗೆ ತರುವುದಾಗಿ ಮಾತುಕೊಟ್ಟಿದ್ದೆ. ನಿನ್ನ ಮಗಳು ನನ್ನ ಮಡಿಲಿನಲ್ಲಿದ್ದಾಳೆ ಎಂದು ಬರೆದಿದ್ದಾರೆ. ಆದರೆ ಸ್ಪೇನ್ನಲ್ಲಿ ಪೂರ್ವಾನುಮತಿ ಇಲ್ಲದೇ ಈ ರೀತಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವುದು ಕಾನೂನುಬಾಹಿರ ಆಗಿರುವ ಕಾರಣ, ಸದ್ಯ ನಟಿ ವಿವಾದದಲ್ಲಿ ಸಿಲುಕಿದ್ದಾರೆ.

Source link
ಮಗನ ಆಸೆ ಈಡೇರಿಸಲು ಅವನಿಂದ್ಲೇ ತಾಯಿಯಾದಳು ಖ್ಯಾತ ಕಿರುತೆರೆ ನಟಿ! ಅಷ್ಟಕ್ಕೂ ಆಗಿದ್ದೇನು?