ಬೋಟಿನಲ್ಲಿ ಶೂಟಿಂಗ್ ವೇಳೆ ಅವಘಡ, ನಟ ರಾಹುಲ್ ಸಾವಿಗೆ ಬೆಚ್ಚಿಬಿದ್ದ ಸೀರಿಯಲ್ ಇಂಡಸ್ಟ್ರಿ, 42ರ ಹರೆಯದ ರಾಹುಲ್ ಬ್ಯಾನರ್ಜಿ ಸಾವಿಗೆ ಹಲವರು ಕಣ್ಣೀರಿಟ್ಟಿದ್ದಾರೆ. ಶೂಟಿಂಗ್ ನಡೆಯುತ್ತಿದ್ದ ನಡುವೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಚ್ಚಿ ಬೀಳಿಸಿದೆ.

ಬಂಗಾಳಿ ಸಿನಿಮಾ ಮತ್ತು ಕಿರುತೆರೆಯ ಜನಪ್ರಿಯ ನಟ ರಾಹುಲ್ ಬ್ಯಾನರ್ಜಿ (ಅರುಣೋದಯ್ ಬ್ಯಾನರ್ಜಿ) ಶೂಟಿಂಗ್ ನಡುವೆ ನಡೆದ ಅವಘಡದಲ್ಲಿ ದುರಂತ ಅಂತ್ಯಕಂಡಿದ್ದಾರೆ. 42ರ ಹರೆಯದ ರಾಹುಲ್ ಬ್ಯಾನರ್ಜಿ ಬಂಗಾಳಿ ಸಿನಿಮಾ ಹಾಗೂ ಸೀರಿಯಲ್ ಮೂಲಕ ಜನಪ್ರಿಯರಾಗಿದ್ದರು. ಒಡಿಶಾ ಸಮುದ್ರದಲ್ಲಿ ಶೂಟಿಂಗ್ ಮಾಡುತ್ತಿದ್ದ ವೇಳೆ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ರಾಹುಲ್ ಅವರಿಗೆ ನಟನೆಯ ನಂಟು ಶುರುವಾಗಿದ್ದು ಬಾಲ್ಯದಿಂದಲೇ. ಕೇವಲ ಮೂರು ವರ್ಷದವರಿದ್ದಾಗ, ಅವರು ತಮ್ಮ ತಂದೆಯ ನಾಟಕ ತಂಡದ ಮೂಲಕ ರಂಗಪ್ರವೇಶ ಮಾಡಿದರು. ಅವರ ತಂದೆ ವಿಶ್ವನಾಥ್ ಬ್ಯಾನರ್ಜಿ ನಾಟಕ ತಂಡದ ನಿರ್ದೇಶಕರಾಗಿದ್ದರು. ರಾಹುಲ್ ತಮ್ಮ ಜೀವನದಲ್ಲಿ ಸುಮಾರು 450ಕ್ಕೂ ಹೆಚ್ಚು ರಂಗ ನಾಟಕಗಳಲ್ಲಿ ನಟಿಸಿದ್ದಾರೆ.

ರಾಜ್ ಚಕ್ರವರ್ತಿ ನಿರ್ದೇಶನದ ‘ಚಿರೋದಿನಿ ತುಮಿ ಜೆ ಅಮರ್’ ಚಿತ್ರದ ಮೂಲಕ ರಾಹುಲ್ ಬೆಳ್ಳಿತೆರೆಯಲ್ಲಿ ದೊಡ್ಡ ಯಶಸ್ಸು ಕಂಡರು. ಈ ಚಿತ್ರದಲ್ಲಿ ಪ್ರಿಯಾಂಕಾ ಸರ್ಕಾರ್ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಿಟ್ ಆಗಿ, ರಾಹುಲ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿಸಿತು.

ಲವ್ ಸರ್ಕಸ್’, ‘ಶೋನೋ ಮಾನ್ ಬೋಲಿ ತೋಮಯ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಕಿರುತೆರೆಯಲ್ಲೂ ಅವರು ಅಷ್ಟೇ ಯಶಸ್ಸು ಗಳಿಸಿದ್ದರು. ಜೀ ಬಾಂಗ್ಲಾದ ಜನಪ್ರಿಯ ಧಾರಾವಾಹಿ ‘ಖೇಲಾ’ದಲ್ಲಿ ಆದಿತ್ಯ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದರು. ಇದಲ್ಲದೆ, ‘ತುಮಿ ಆಶ್ಬೆ ಬೋಲೆ’ ಧಾರಾವಾಹಿಯಲ್ಲಿನ ಅವರ ನಟನೆಗೂ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು.ತಮ್ಮ ನಟನೆಗಾಗಿ ರಾಹುಲ್ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಚಿರೋದಿನಿ ತುಮಿ ಜೆ ಅಮರ್’ ಚಿತ್ರದ ನಟನೆಗಾಗಿ ಅವರು ಅತ್ಯುತ್ತಮ ನಟ ವಿಭಾಗದಲ್ಲಿ ‘ಆನಂದಲೋಕ್’ ಪ್ರಶಸ್ತಿಯನ್ನು ಗೆದ್ದುಕೊಂಡರು.

ವೈಯಕ್ತಿಕ ಜೀವನದಲ್ಲಿ, ರಾಹುಲ್ ತಮ್ಮ ಸಹನಟಿ ಪ್ರಿಯಾಂಕಾ ಸರ್ಕಾರ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಸಹಜ್ ಬ್ಯಾನರ್ಜಿ ಎಂಬ ಓರ್ವ ಮಗನಿದ್ದಾನೆ. 2017ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರೂ, 2023ರಲ್ಲಿ ಮತ್ತೆ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು.

ರಾಹುಲ್ ಬ್ಯಾನರ್ಜಿ ಅವರ ಅಕಾಲಿಕ ನಿಧನದಿಂದ ಬಂಗಾಳಿ ಚಿತ್ರರಂಗದಲ್ಲಿ ಶೋಕದ ಛಾಯೆ ಆವರಿಸಿದೆ. ಅವರ ಸಾವಿಗೆ ಸಹೋದ್ಯೋಗಿಗಳು ಮತ್ತು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Source link
ಬೋಟಿನಲ್ಲಿ ಶೂಟಿಂಗ್ ವೇಳೆ ಅವಘಡ, ನಟ ರಾಹುಲ್ ಸಾವಿಗೆ ಬೆಚ್ಚಿಬಿದ್ದ ಸೀರಿಯಲ್ ಇಂಡಸ್ಟ್ರಿ