
ದಳಪತಿ ವಿಜಯ್ (ತಲಪತಿ ವಿಜಯ್) ನಟನೆಯ ‘ಜನ ನಾಯಕನ್’ ಸಿನಿಮಾಕ್ಕೆ ಸಿಬಿಎಫ್ ಸಿ ಪ್ರಮಾಣ ಪತ್ರ ನೀಡದೆ ಸಿನಿಮಾ ಬಿಡುಗಡೆ ಆಗುವುದನ್ನೇ ತಡೆದಿದೆ. ಸಿನಿಮಾ ಬಿಡುಗಡೆ ಮಾಡಲು ಸಿನಿಮಾದ ನಿರ್ಮಾಪಕರು ಮಾಡಿರುವ ಪ್ರಯತ್ನಗಳು ಫಲ ನೀಡಿಲ್ಲ. ವಿಜಯ್ ಅವರ ರಾಜಕೀಯ ಎದುರಾಳಿಗಳು ಕುತಂತ್ರದಿಂದ ರಾಜಕೀಯ ಪ್ರಭಾವ ಬಳಸಿ ಸಿನಿಮಾ ಬಿಡುಗಡೆಯನ್ನು ತಡೆದಿದ್ದಾರೆ. ಇದೆಲ್ಲದರ ನಡುವೆ ಇದೀಗ ಹಠಾತ್ತನೆ ‘ಜನ ನಾಯಕ’ ಸಿನಿಮಾ ಪೂರ್ತಿಯಾಗಿ ಎಚ್ಡಿ ಫಾರ್ಮ್ಯಾಟ್ನಲ್ಲಿ ಲೀಕ್ ಆಗಿದೆ. ಇದು ಚಿತ್ರತಂಡಕ್ಕೆ ತಂದಿದೆ. ತಮಿಳು ಮಾತ್ರವೇ ಅಲ್ಲದೆ ಹಲವು ರಾಜ್ಯಗಳ ಸಿನಿಮಾ ಪ್ರಮುಖರು ಇದನ್ನು ಖಂಡಿಸಿದ್ದಾರೆ. ಈ ಸಿನಿಮಾ ಲೀಕ್ಗೆ ಇಬ್ಬರು ರಾಜಕೀಯ ಪ್ರಮುಖರು ಕಾರಣವೆಂದು ವಿಜಯ್ ಅಭಿಮಾನಿಗಳು ಮತ್ತು ವಿಜಯ್ ಅವರ ಟಿವಿಕೆ ರಾಜಕೀಯ ಪಕ್ಷದ ಮುಖ್ಯಸ್ಥರಾಗಿದ್ದಾರೆ.
‘ಜನ ನಾಯಕನ್’ ಸಿನಿಮಾದ ಬಿಡುಗಡೆ ತಡೆ ಮತ್ತು ಈಗ ಸಿನಿಮಾದ ಲೀಕ್ ಹಿಂದೆ ಇಬ್ಬರು ರಾಜಕೀಯ ಪ್ರಮುಖರಾಗಿದ್ದಾರೆ ಎಂದು ಟಿವಿ ಹಾಗೂ ವಿಜಯ್ ಅಭಿಮಾನಿಗಳು ಆರೋಪಿಸಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ, ತಮಿಳುನಾಡು ಬಿಜೆಪಿ ಮುಖಂಡ ಎಲ್ ಮುರುಗನ್ ಮತ್ತು ತಮಿಳುನಾಡಿನ ಆಡಳಿತರೂಢ ಪಕ್ಷವಾದ ಡಿಎಂಕೆಯ ಯುವ ಮುಖಂಡ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಅವರೇ ‘ಜನ ನಾಯಕನ್’ ಸಿನಿಮಾ ಲೀಕ್ನ ಹಿಂದಿದ್ದಾರೆ ಎಂಬ ಆರೋಪ ವಿಜಯ್ ಅಭಿಮಾನಿಗಳಿಂದ ಕೇಳಿ ಬಂದಿದೆ.
‘ಮೊದಲಿಗೆ ‘ಜನ ನಾಯಕನ್’ ಸಿನಿಮಾ ಜನರಿಗೆ ತಲುಪದಂತೆ ತಡೆಯಲಾಯ್ತು. ಈಗ ವಿಜಯ್ ಅವರ ಸಿನಿಮಾ ಆರ್ಥಿಕವಾಗಿ ನಷ್ಟ ಹೊಂದುವಂತೆ ಮಾಡಿದೆ. ಕೇಂದ್ರ ಸಚಿವ ಎಲ್ ಮುರುಗನ್ ಮತ್ತು ಉದಯನಿಧಿ ಸ್ಟಾಲಿನ್ ಅವರು ಒಟ್ಟಾಗಿ ವಿಜಯ್ ಅವರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ. ‘ಜನ ನಾಯಕನ್’ ಲೀಕ್ ಹಿಂದೆ ಇವರೇ ಇದ್ದಾರೆ ಎಂದು ಟಿವಿಕೆಯ ಆದವ್ ಅರ್ಜುನ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಅಭಿಮಾನಿಗಳು ಸಹ ಆರೋಪಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ:’ಜನ ನಾಯಕನ್’ ಲೀಕ್ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸದೆ ಹೋದ ದಳಪತಿ ವಿಜಯ್
ಆರೋಪಗಳ ಬಗ್ಗೆ ಮಾತನಾಡುತ್ತಿರುವ ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾಮಲೈ, ‘ಜನ ನಾಯಕನ್’ ಸಿನಿಮಾ ಲೀಕ್ ಆಗಿರುವುದು ಅನ್ಯಾಯ, ಕಾನೂನಿಗೆ ಬಹಿರ್ದೆಸೆ ಆದರೆ ಆ ಕೃತ್ಯವನ್ನು ಸಚಿವ ಎಲ್ ಮುರುಗನ್ ಅವರಿಗೆ ಲಿಂಕ್ ಮಾಡಲು ಯತ್ನಿಸುತ್ತಿರುವುದು ರಾಜಕೀಯ ದುರುದ್ದೇಶ’. ‘ಇದರಲ್ಲಿ ಬಿಜೆಪಿಯನ್ನು ಏಕೆ ಎಳೆಯಬೇಕು? ಚಿತ್ರ ಬಿಡುಗಡೆ ಅಥವಾ ಸೋರಿಕೆಯಾಗುವುದರಲ್ಲಿ ಬಿಜೆಪಿ ಪಕ್ಷದ ಪಾತ್ರ ಇಲ್ಲವೇ? ಸೋರಿಕೆಯ ಬಗ್ಗೆ ತನಿಖೆ ನಡೆಸಿ, ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದು ಪೊಲೀಸರ ಜವಾಬ್ದಾರಿ. ಸೂಕ್ತ ತನಿಖೆ ನಡೆಸಿ ಕೃತ್ಯದ ಹಿಂದೆ ಯಾರಿದ್ದಾರೋ ಅವರನ್ನು ಬೆಳಕಿಗೆ ತರಲಿ ಅದು ಬಿಟ್ಟು ಸುಖಾ ಸುಮ್ಮನೆ ಬಿಜೆಪಿಯನ್ನು ಎಳೆದು ತಂದ ರಾಜಕೀಯ ಲಾಭ ಪಡೆಯುವ ಪ್ರಯತ್ನ ಬೇಡ’.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ