Headlines

ಅಪ್ರಾಪ್ತೆ ಮೇಲೆ ಮ್ಯೂಸಿಕ್​​ ಮೈಲಾರಿ ಅತ್ಯಾಚಾರ ಕೇಸ್​​ಗೆ ಟ್ವಿಸ್ಟ್​​: ಸಂತ್ರಸ್ತೆ ವಿಡಿಯೋ ವೈರಲ್​​

ಅಪ್ರಾಪ್ತೆ ಮೇಲೆ ಮ್ಯೂಸಿಕ್​​ ಮೈಲಾರಿ ಅತ್ಯಾಚಾರ ಕೇಸ್​​ಗೆ ಟ್ವಿಸ್ಟ್​​: ಸಂತ್ರಸ್ತೆ ವಿಡಿಯೋ ವೈರಲ್​​


ಬಾಗಲಕೋಟೆ, ಡಿಸೆಂಬರ್ 19: ಅಪ್ರಾಪ್ತೆ ಮೇಲೆ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತೆಯದ್ದು ಎನ್ನಲಾದ ವಿಡಿಯೋವಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಹೆಸರು ಕೆಡಿಸುವ ಉದ್ದೇಶದಿಂದ ನಾನು ಹಾಗೆಲ್ಲ ಹೇಳಿದ್ದೇನೆ, ನನ್ನದು ತಪ್ಪಾಗಿದೆ ಕ್ಷಮಿಸಿ ಎಂದು ಅಪ್ರಾಪ್ತೆ ಹೇಳಿರೋದು ವಿಡಿಯೋದಲ್ಲಿದೆ.

ಮ್ಯೂಸಿಕ್ ಮೈಲಾರಿ ಅಣ್ಣ, ಲತಾ, ಶ್ರಾವಣಿ ಮತ್ತು ಡ್ಯಾನ್ಸರ್ ರುಕ್ಕು ಬಗ್ಗೆ ನಾನು ಏನೇನೋ ಮಾತಾಡಿದ್ದೇನೆ. ಅವರ ಹೆಸರು ಕೆಡಿಸುವ ಜೊತೆಗೆ, ನಾನು ಹೆಸರು ಮಾಡುವ ಉದ್ದೇಶದಿಂದ ಆ ರೀತಿ ಹೇಳಿದ್ದು, ನನ್ನದು ತಪ್ಪಾಗಿದೆ. ನನ್ನ ಕ್ಷಮಿಸಿ ಎಂದು ಯುವತಿ ಕೈಮುಗಿದು ಹೇಳಿರುವ ದೃಶ್ಯಗಳು ವಿಡಿಯೋದಲ್ಲಿವೆ. ಅಪ್ರಾಪ್ತೆಯ ವಿರುದ್ದ ಮೈಲಾರಿ ಅಭಿಮಾನಿಗಳು ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇದನ್ನೂ ಓದಿ: ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ; ಯೂಟ್ಯೂಬ್ ಸ್ಟಾರ್ ಮೈಲಾರಿ ವಿರುದ್ಧ ಪೋಕ್ಸೋ ಕೇಸ್

ವಿಡಿಯೋ ಬಗ್ಗೆ ಅಪ್ರಾಪ್ತ ಸ್ಪಷ್ಟನೆ

ಇನ್ನು ಕ್ಷಮೆ ಕೇಳಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. ನಾನು ಯುವಕನೊಬ್ಬನ ಜೊತೆ ಇರುವ ಮತ್ತೂ ತಪ್ಪಾಯಿತು ಎಂದು ಹೇಳಿರುವ ವಿಡಿಯೋ ಈಗಿನದ್ದಲ್ಲ. ನನ್ನ ಮೇಲೆ ಅತ್ಯಾಚಾರ ನಡೆದ ಬಳಿಕ ಎರಡನೇ ದಿನ ಮಾಡಿರೋದು. ಬೆಂಕಿ ಲತಾ ಡ್ಯಾನ್ಸರ್, ರುಕ್ಕು ಸಿಂಗರ್, ಡಿಜೆ ಮಾಂತೇಶ್ ಗೋಕಾಕ್ ಅವರು ಬಂದು ನನಗೆ ಹೊಡೆದು ಆ ವಿಡಿಯೋ ವಿಡಿಯೋ ಮಾಡಿದ್ದಾರೆ. ಅದೇ ವಿಡಿಯೋವನ್ನೀಗ ಇನ್ಸ್ಟಾಗ್ರಾಮ್ ನಲ್ಲಿ ಎಡಿಟ್ ಮಾಡಿ ಹಾಕ್ತಿದಾರೆ. ಈ ರೀತಿ ವಿಡಿಯೋ ಸೇರ್ ಮಾಡುತ್ತಿರುವವರ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುತ್ತೇನೆ. ನಾನೊಬ್ಬ ದಲಿತ ಹುಡುಗಿ, ನನಗೆ ನ್ಯಾಯ ಬೇಕು. ಆ ವಿಡಿಯೋ ಈಗಿನದ್ದು ಅಂತ ಯಾರು ತಿಳಿದುಕೊಳ್ಳಬೇಡಿ. ನನಗೆ ನ್ಯಾಯ ಕೊಡಿಸಿ, ಸಪೋರ್ಟ್ ಮಾಡಿ ಎಂದು ಯುವತಿ ಕೈ ಮುಗಿದು ಕೇಳಿಕೊಂಡಿದ್ದಾಳೆ.

ಆರ್ಕೆಸ್ಟ್ರಾ ಕಾರ್ಯಕ್ರಮದ ನಂತರ ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿರುವ ಮ್ಯೂಸಿಕ್ ಮೈಲಾರಿ ವಿರುದ್ಧ ಕೇಳಿಬಂದಿದ್ದು, ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಪೋಕ್ಸೊ ಪ್ರಕರಣ ದಾಖಲಾಗಿದೆ. ಕೇಸ್ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಮೈಲಾರಿ ಡಿಸೆಂಬರ್ 17ರಂದು ಮಹಾರಾಷ್ಟ್ರಕ್ಕೆ ತೆರಳುತ್ತಿರುವ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾನೆ. ಮಹಾಲಿಂಗಪುರ ಆರೋಪಿಯನ್ನು ಬಂಧಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *