Headlines

ಕಾರವಾರ: JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​

ಕಾರವಾರ: JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​


ಕಾರವಾರ, ಜನವರಿ 14: ಜೆಡಿಎಸ್ಮುಖಂಡೆ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ಕಿರುಕುಳವನ್ನೂ ಆರೋಪಿ ನೀಡಿದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಿಶಾಲಾ ಡಿಸೋಜಾ ತಾಯಿ ಕ್ರಿಸ್ಟೋದ ಡಿಸೋಜಾ ಗಂಭೀರ ಆರೋಪ ಮಾಡಿದ್ದಾರೆ. ಅಂತ್ಯ ಸಂಸ್ಕಾರಕ್ಕೂ ಮುನ್ನ ನಾವು ಮೃತದೇಹಕ್ಕೆ ಸ್ನಾನ ಮಾಡಿಸುತ್ತೇವೆ. ಈ ವೇಳೆ ಮಗಳ ಖಾಸಗಿ ಭಾಗ ಸೇರಿದಂತೆ ದೇಹದ ಕಡೆ ಕಚ್ಚಿದ ಗುರುತು ಕಂಡುಬಂದಿದೆ. ಖಾಸಗಿ ಭಾಗದಿಂದ ತೀವ್ರ ರಕ್ತಸ್ರಾವ ಕೂಡ ಆಗಿದೆ. ಅತ್ಯಾಚಾರದ ವಿಚಾರ ಮನೆಯಲ್ಲಿ ಹೇಳೋಕೆ ಆಗದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅವರು ಹೇಳಿದ್ದಾರೆ. ನ್ಯಾಯಕ್ಕೆ ಹಾಜರಾಗಿ ಸಿಎಂ, ಗೃಹ ಸಚಿವ ಹಾಗೂ ಎಸ್ಪಿ ಮತ್ತು ಡಿಸಿಗೆ ಕ್ರಿಸ್ಟೋಡ ಡಿಸೋಜ ಪತ್ರ ಬರೆದಿದ್ದು, ಆರೋಪಿಗಳನ್ನು ಬಂಧಿಸಿದ್ರೆ ಕಾರವಾರ ಡಿಸಿ ಕಚೇರಿ ಮುಂದೆ ಧರಣಿಗೆ ಕದ್ರಾ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ ಪುತ್ರ ಚಿರಾಗ್ ಕಿರುಕುಳಕ್ಕೆ ರಿಶಾಲಾ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಈ ಹಿಂದೆ ಕೇಳಿಬಂದಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *