Headlines

ಹಸೆಮಣೆ ಏರಬೇಕಿದ್ದ ದಿನವೇ ಇಬ್ಬರು ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ

ಹಸೆಮಣೆ ಏರಬೇಕಿದ್ದ ದಿನವೇ ಇಬ್ಬರು ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ


ನವದೆಹಲಿ, ಫೆಬ್ರುವರಿ 22: ಇಬ್ಬರು ಹೆಣ್ಮಕ್ಕಳ ಮದುವೆ ಸಂಭ್ರಮದಲ್ಲಿದ್ದ ಮನೆಗೆ ದಿಢೀರನೇ ಸೂತಕದ ಜೊತೆಗೆ ಒತ್ತರಿಸಿಬಂತು. ರಾಜಸ್ಥಾನದ ಗ್ರಾಮದಲ್ಲಿ ಒಂದೇ ದಿನದಂದು ಮದುವೆಯಾಗಬೇಕಿದ್ದ ಇಬ್ಬರು ಸಹೋದರಿಯರು ಮಸಣಕ್ಕೆ ಸೇರಬೇಕಾದ ಘಟನೆ ನಡೆದಿದೆ. ಜೋಧಪುರದ ಮನಾಯ್ ಎಂಬ ಗ್ರಾಮದಲ್ಲಿ ಸಹೋದರಿಯರಾದ ಶೋಭಾ (25) ಮತ್ತು ವಿಮಲಾ (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್‌ಡಿಟಿವಿ ವಾಹಿನಿಯಲ್ಲಿ ವರದಿಯಾಗಿದೆ.

ಈ ಇಬ್ಬರು ಅಕ್ಕ ತಂಗಿಯರು ವಿಷ ಸೇವಿಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶನಿವಾರ (ಫೆ. 21) ಇಬ್ಬರದ್ದು ಮದುವೆ ಕಾರ್ಯಕ್ರಮ ಇತ್ತು. ಶುಕ್ರವಾರ ರಾತ್ರಿ ವಿವಾಹ ಕಾರ್ಯಕ್ರಮಗಳು ಸಂಭ್ರಮದಿಂದಲೇ ನಡೆದವು. ಈ ಇಬ್ಬರೂ ಸಹೋದರಿಯರು ಮಧ್ಯರಾತ್ರಿ ಮಲಗಿದ್ದಾರೆ. ಬೆಳಗಿನ ಜಾಗ 4 ಗಂಟೆಗೆ ಇವರ ಆರೋಗ್ಯದಲ್ಲಿ ಏರುಪೇರಾಗುವುದನ್ನು ಗಮನಿಸಲಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ. ಅಷ್ಟರಲ್ಲಿ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.

ಮದುವೆಗೆ ಸಾಕ್ಷಿಯಾಗಬೇಕಿದ್ದ ಅವರ ಕುಟುಂಬ ಅಂತ್ಯಕ್ರಿಯೆಗೆ ಅಣಿಯಾಗಬೇಕಿತ್ತು. ಆಸ್ಪತ್ರೆಯಿಂದ ಈ ಹೆಣ್ಮಕ್ಕಳ ಶವವನ್ನು ಮನೆಗೆ ತೆಗೆದುಕೊಂಡು ಹೋಗಲಾಯಿತು, ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಯಿತು. ಪೊಲೀಸರಿಗೆ ಇದು ಆತ್ಮಹತ್ಯೆ ಎಂಬ ಮಾಹಿತಿ ಸ್ಥಳಕ್ಕೆ ಹೋಗಿ, ಅಂತ್ಯಕ್ರಿಯೆ ನಿಲ್ಲಿಸಿ, ದೇಹಗಳನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿಕೊಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಮರಳಿಸಲಾಗಿದೆ.

ಇದನ್ನೂ ಓದಿ: ಪ್ರೇಮ ದುರಂತ: ಕ್ಷುಲ್ಲಕ ಕಾರಣಕ್ಕೆ ಜಗಳ; ಪ್ರೇಯಸಿ ಸತ್ತ ಬೆನ್ನಲ್ಲೇ ವಿಷ ಕುಡಿದು ನೇಣಿಗೆ ಶರಣಾದ ಟೆಕ್ಕಿ

ಈ ಇಬ್ಬರು ಅಕ್ಕ ತಂಗಿಯರ ಸಾವಿಗೆ ವಿಷ ಪದಾರ್ಥಗಳ ಸೇವನೆ ಕಾರಣ. ಆದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಎಂಬುದು ಗೊತ್ತಾಗುವುದಿಲ್ಲ. ಇಬ್ಬರೂ ಕೂಡ ಯಾವುದೇ ಸೂಸೈಡ್ ನೋಟ್ ಬರೆದಿಟ್ಟಿರುವುದು ಗೊತ್ತಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *