ರೀಲ್ಸ್ ಹುಚ್ಚಾಟಕ್ಕೆ ಬಾಲಕ ಸಾವು: ಮಗನ ತಪ್ಪಿನಿಂದ ಜೈಲು ಸೇರಿದ ತಂದೆ

ರೀಲ್ಸ್ ಹುಚ್ಚಾಟಕ್ಕೆ ಬಾಲಕ ಸಾವು: ಮಗನ ತಪ್ಪಿನಿಂದ ಜೈಲು ಸೇರಿದ ತಂದೆ


ರೀಲ್ಸ್ ಹುಚ್ಚಾಟಕ್ಕೆ ಬಾಲಕ ಸಾವು: ಮಗನ ತಪ್ಪಿನಿಂದ ಜೈಲು ಸೇರಿದ ತಂದೆ

ಹುಬ್ಬಳ್ಳಿ, ಮಾರ್ಚ್ 22: ಪಾಲಕರೇ ಅಪ್ರಾಪ್ತ ವಯಸ್ಸಿನ ನಿಮ್ಮ ಮಕ್ಕಳಿಗೆ ನೀವು ಓಡಿಸಲು ಕಾರು, ಬೈಕ್, ಸ್ಕೂಟಿ ನೀಡುತ್ತಿದ್ದಾರೆ. ಏಕೆಂದರೆ ಅಪಘಾತವಾದರೆ ನಿಮ್ಮ ಮಕ್ಕಳು, ನೀವು ಜೈಲು ಪಾಲಾಗುತ್ತೀರಾ ಹುಷಾರ್. ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುವಾಗ ಅಪಘಾತದಲ್ಲಿ (ಅಪಘಾತ) ಬಾಲಕನ ಸಾವಿಗೆ (ಸಾವು) ಅಪಘಾತ ಮಾಡಿದ ಬಾಲಕ, ಆತನ ತಂದೆಯನ್ನು ಕೂಡ ಬಂಧಿಸಿದ್ದಾರೆ.

ರೀಲ್ಸ್ ತಂದ ಆಪತ್ತು

ಇದು ಸೋಶಿಯಲ್ ಮೀಡಿಯಾ ಜಮಾನಾ. ನಾಲ್ಕು ವರ್ಷದ ಮಕ್ಕಳಿಂದ ವೃದ್ದರವರಗೆ ಎಲ್ಲರ ಕೈಯಲ್ಲಿ ಮೊಬೈಲ್ಗಳಿವೆ. ರೀಲ್ಸ್ ನೋಡೋದು, ರೀಲ್ಸ್ ಮಾಡೋದು ಇಂದಿನ ಗೀಳಾಗಿದೆ. ಅದರಲ್ಲೂ ಬಾಲಕರು, ಹದಿಹರೆಯದ ಯುವಕರು ವಾಹನಗಳನ್ನು ಕ್ರ್ಯಾಶ್ ಮಾಡೋದು ಸೇರಿದಂತೆ ಅನೇಕ ಸ್ಟಂಟ್‌ಗಳ ವಿಡಿಯೋ ನೋಡುವುದು, ಅದೇ ರೀತಿ ಮಾಡೋದನ್ನು ಹೆಚ್ಚಾಗಿ ಮಾಡ್ತಿದ್ದಾರೆ. ಇದೇ ರೀತಿ ವಾಹನಗಳ ಕ್ರ್ಯಾಶ್ ಮಾಡೋ ವಿಡಿಯೋ ಮಾಡಲು ಹೋದಾಗ ನಡೆಯಬಾರದ ಘಟನೆಯೊಂದು ಹುಬ್ಬಳ್ಳಿಯಲ್ಲಿ ಮಾರ್ಚ್ 19 ರಂದು ನಡೆದಿತ್ತು.

ನಡೆದಿದ್ದೇನು?

ರೀಲ್ಸ್ ಮಾಡಲು ಹೋದಾಗ ಆಡಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ, ಬಾಲಕನೋರ್ವ ಚಾಲಕಿದ್ದ. ಹುಬ್ಬಳ್ಳಿ ನಗರದ ಲಕ್ಷ್ಮಿ ನಗರದ ನಮೀಷ್ ಸಂಗಳದ ಮೃತ ಬಾಲಕ. ಹುಬ್ಬಳ್ಳಿಯ ಬಿಜೆಪಿ ಮುಖಂಡ ವೀರೇಶ್ ಸಂಗಳದ ಪುತ್ರನಾಗಿದ್ದ ನಮೀಷ್, ಯುಗಾದಿ ಹಬ್ಬದ ದಿನ ಶೇಜವಾಡ್ಕರ್ ಪ್ಲಾಟ್ ನಲ್ಲಿ ಸ್ನೇಹಿತರ ಜೊತೆ ರೀಲ್ಸ್ ಮಾಡಲು ಹೋಗಿದ್ದ. ನಮೀಷ್ ಇದ್ದ ಸ್ಕೂಟಿಗೆ 17ನೇ ವರ್ಷದ ಅಪ್ರಾಪ್ತ ಬಾಲಕ ಓಡುತ್ತಿದ್ದ ಆಡಿಯೋ ಕಾರು ಗುದ್ದಿದ ಪರಿಣಾಮ ನಮೀಷ್ ಸ್ಥಳದಲ್ಲಿಯೇ ಇತ್ತು. ಈ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಇಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ: ಆಡಿ ಕಾರು-ಬೈಕ್ ಸ್ಟಂಟ್ ರೀಲ್ಸ್ ಘೋರ ದುರಂತ, ಬಿಜೆಪಿ ಮುಖಂಡನ ಪುತ್ರ ಬಲಿ

ಇನ್ನು ನಮಾಶ್ ಸಂಗಳದ್ ಹಾಗೂ ಕಾರು ಓಡುತ್ತಿರುವ ಬಾಲಕ ಮತ್ತು ಇನ್ನಿಬ್ಬರು ಸೇರಿ ಒಟ್ಟು ನಾಲ್ವರು ಬಾಲಕರು ಕ್ರ್ಯಾಶ್ ರೀಲ್ಸ್ ಮಾಡಲು ಹೋಗಿದ್ದರಂತೆ. ನಮೀಷ್ ಸಂಗಮದಿಂದ ಓಡಿಸಿಕೊಂಡು ಬರ್ತಿದ್ದ ಎದುರಿನಿಂದ ಅಪ್ರಾಪ್ತ ಬಾಲಕ ಕಾರು ಓಡಿಸಿಕೊಂಡು ಬರ್ತಿದ್ದ. ಅವು ಎರಡು ಕ್ರ್ಯಾಶ್ ಆಗುವ ವಿಡಿಯೋವನ್ನು ಇನ್ನಿಬ್ಬರು ಬಾಲಕರು ಮಾಡಲು ಮುಂದಾಗಿದ್ದರಂತೆ. ಆದರೆ 17ನೇ ವರ್ಷದ ಅಪ್ರಾಪ್ತ ಬಾಲಕ ಓಡುತ್ತಿದ್ದ ಕಾರು ಹಾಗೂ ಸ್ಕೂಟಿ ತೀರಾವೇಗವಾಗಿ ನಿಯಂತ್ರಣ ತಪ್ಪಿ ಸ್ಕೂಟಿ ಮತ್ತು ಕಾರ್ ನಡುವೆ ಅಪಘಾತವಾಗಿತ್ತು. ಹೀಗಾಗಿ ಸ್ಥಳದಲ್ಲೇ ಬಾಲಕ ಮೃತ ಪಟ್ಟಿದ್ದ.

ಬಾಲಕನ ತಂದೆ ಬಂಧನ

ಅಪಘಾತ ಮಾಡಿರುವ 17ನೇ ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಿ ಬಾಲಕರ ಬಾಲ ಮಂದಿರಕ್ಕೆ ಕಳುಹಿಸಿದರೆ, ಅಪ್ರಾಪ್ತ ಮಗನಿಗೆ ಕಾರು ನೀಡಿದ್ದ ಬಾಲಕನ ತಂದೆ ನಾಗರಾಜ್ ರಾಯ್ಕರ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೀಲ್ಸ್ ಹುಚ್ಚಾಟವಾಡಬಾರದು. ಹೆತ್ತವರು ಮಕ್ಕಳಿಗೆ ತಮ್ಮ ವಾಹನ ನೀಡಬಾರದು ಅಂತ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಜನರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸೇತುವೆ ಮೇಲೆ ನಿಂತಿದ್ದ ಈಚರ್ ವಾಹನಕ್ಕೆ ಗೂಡ್ಸ್ ವ್ಯಾನ್ ಡಿಕ್ಕಿ: ಮೂವರು ದಾರುಣ ಸಾವು

ಮಕ್ಕಳ ರೀಲ್ಸ್ ಹುಚ್ಚಾಟಕ್ಕೆ ತಂದೆ ತನ್ನ ಮಗನನ್ನು ಕಳೆದುಕೊಂಡರೆ ಅಪಘಾತಕ್ಕೀಡಾದ ಬಾಲಕ ಮತ್ತು ಆತನ ತಂದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಹೆತ್ತವರು ತಮ್ಮ ಮಕ್ಕಳ ಆಟೋಟೋಪಕ್ಕೆ ಬ್ರೇಕ್ ಹಾಕುವ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಜೊತೆಗೆ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಿದರೆ ಹೆತ್ತವರು ಕಂಬಿ ಹಿಂದೆ ಹೋಗುತ್ತಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *