Headlines

Ugadi 2026: ಯುಗಾದಿ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿ ಆರೋಗ್ಯಕರ, ರುಚಿಕರ ಕಾಯಿ ಹೋಳಿಗೆ

Ugadi 2026: ಯುಗಾದಿ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿ ಆರೋಗ್ಯಕರ, ರುಚಿಕರ ಕಾಯಿ ಹೋಳಿಗೆ


ಯುಗಾದಿ 2026: ಯುಗಾದಿ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿ ಆರೋಗ್ಯಕರ, ರುಚಿಕರ ಕಾಯಿ ಹೋಳಿಗೆ

ನಾಡಿನೆಲ್ಲೆಡೆ ಯುಗಾದಿ (ಯುಗಾದಿ) ಹಬ್ಬದ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬ ಹಿಂದೂಗಳ ಪಾಲಿನ ವರ್ಷದ ಮೊದಲ ಹಬ್ಬ. ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬದ ದಿನ ಹೊಸ ಬಟ್ಟೆ ತೊಟ್ಟು, ಮನೆಯನ್ನು ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಿ, ಬೆಲ್ಲದ ಬೇವು ಬೆಲ್ಲವನ್ನು ಹಂಚುತ್ತಾರೆ. ಬೇವು ಬೆಲ್ಲದ ಜೊತೆ ರುಚಿ ರುಚಿಯಾದ ಬಗೆಬಗೆ ಅಡುಗೆಗಳನ್ನೂ ಮಾಡಲಿಲ್ಲ. ಅದರಲ್ಲೂ ಯುಗಾದಿ ಹಬ್ಬಕ್ಕೆ ಒಬ್ಬಟ್ಟು ಇರಲೇಬೇಕು. ಸಾಮಾನ್ಯವಾಗಿ ಒಬ್ಬಟ್ಟನ್ನು ಮೈದಾ ಹಿಟ್ಟು ಬಳಸಿ ಮಾಡಲಾಗುತ್ತೆ. ಹೀಗಿರುವಾಗ ಈ ಬಾರಿಯ ಹಬ್ಬಕ್ಕೆ ಆರೋಗ್ಯಕರ ರೀತಿಯಲ್ಲಿ ಒಬ್ಬಟ್ಟು ಮಾಡಬೇಕು ಅಂತಿದ್ರೆ, ಕಾಯಿ ಒಬ್ಬಟ್ಟನ್ನು ತಯಾರಿಸಿ, ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿ.

ಯುಗಾದಿ ಹಬ್ಬಕ್ಕೆ ಮಾಡಿ ಕಾಯಿ ಒಬ್ಬಟ್ಟು:

ಯುಗಾದಿ ಹಬ್ಬದಂದು ಬೇವು ಬೆಲ್ಲ ಎಷ್ಟು ಮುಖ್ಯವೋ ಒಬ್ಬಟ್ಟು ಕೂಡ ಅಷ್ಟೇ ಮುಖ್ಯ. ಈ ಬಾರಿಯ ಹಬ್ಬಕ್ಕೆ ಮೈದಾ ಹಿಟ್ಟನ್ನು ಬಳಸಿ ಹೋಳಿಗೆ ತಯಾರಿಸುವ ಬದಲು, ಗೋಧಿ ಹಿಟ್ಟಿನಿಂದ ಆರೋಗ್ಯಕರ ಕಾಯಿ ಒಬ್ಬಟ್ಟನ್ನು ತಯಾರಿಸಿ. ಈ ಹೆಲ್ತಿ ರೆಸಿಪಿಯನ್ನು poojaga_food ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.

ಕಾಯಿ ಒಬ್ಬಟ್ಟು ಮಾಡಲು ಬೇಕಾಗಿರುವ ಸಾಮಾಗ್ರಿಗಳು:

1 ½ ಕಪ್‌ ಗೋಧಿ ಹಿಟ್ಟು, ಅರಶಿನ, ಉಪ್ಪು, ಎಣ್ಣೆ, 1 ½ ಕಪ್‌ ಬೆಲ್ಲ, 2 ½ ಕಪ್‌ ತೆಂಗಿನಕಾಯಿ ತುರಿ, ಏಲಕ್ಕಿ ಪುಡಿ

ವಿಡಿಯೋ ಇಲ್ಲಿದೆ ನೋಡಿ:

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಪೂಜಾಶ್ರೀ ಜಗದೀಶ್ (@poojaga_food) ಹಂಚಿಕೊಂಡ ಪೋಸ್ಟ್

ಇದನ್ನೂ ಓದಿ: ಯುಗಾದಿ ಹಬ್ಬದಂದು ಬೇವು-ಬೆಲ್ಲ ಹಂಚುವುದರ ಹಿಂದಿನ ಆಧ್ಯಾತ್ಮಿಕ, ಮಾಡಲಾಗಿದೆ ಮಹತ್ವವೇನು?

ಕಾಯಿ ಒಬ್ಬಟ್ಟು ಮಾಡುವ ವಿಧಾನ:

  • ಒಂದು ಪಾತ್ರೆಗೆ ಗೋಧಿ ಹಿಟ್ಟು, ಸ್ವಲ್ಪ ಅರಶಿನ ಪುಡಿ, ಉಪ್ಪು, ತುಪ್ಪ ಹಾಕಿ ನಂತರ ಸ್ವಲ್ಪವೇ ನೀರನ್ನು ಸೇರಿಸಿ ಮೃದುವಾದ ಕಣಕ ತಯಾರಿಸಿ. ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ 1 ರಿಂದ 2 ಗಂಟೆಗಳ ಕಾಲ ನೆನೆಸಿಡಿ.
  • ನಂತರ ಮಿಕ್ಸಿ ಜಾರ್ಗೆ ಬೆಲ್ಲ, ತೆಂಗಿನಕಾಯಿ ತುರಿಯನ್ನು ಹಾಕಿ ಈ ಮಿಶ್ರಣವನ್ನು ರುಬ್ಬಿಕೊಳ್ಳಿ.
  • ಬಳಿಕ ಒಲೆಯ ಮೇಲೆ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ತುಪ್ಪ ಸೇರಿಸಿ, ಪಾತ್ರೆ ಕಾದ ಬಳಿಕ ರುಬ್ಬಿಟ್ಟ ಬೆಲ್ಲ ತೆಂಗಿನಕಾಯಿ ಹೂರಣ ಮಿಶ್ರಣವನ್ನು ಹುರಿಯಿರಿ, ಕೊನೆಯಲ್ಲಿ ಸ್ಪಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಎಲ್ಲವನ್ನು ಮಿಶ್ರಣ ಮಾಡಿ ಉಂಡೆ ಕಟ್ಟಿಕೊಳ್ಳಿ.
  • ಮೊದಲೇ ತಯಾರಿಸಿದ ಗೋಧಿ ಹಿಟ್ಟಿನ ಕಣಕವನ್ನು ಸ್ವಲ್ಪ ಈಗ ಸ್ವಲ್ಪವೇ ತೆಗೆದುಕೊಂಡು ತೆಂಗಿನಕಾಯಿ ಹೂರಣವನ್ನು ತುಂಬಿಸಿ, ಹೋಳಿಗೆ ಮಿಶ್ರಣವನ್ನು ಚೆನ್ನಾಗಿ ತಟ್ಟಿಕೊಳ್ಳಿ.
  • ಕೊನೆಯಲ್ಲಿ ಒಂದು ತವಾಗೆ ತುಪ್ಪನ್ನು ಸೇರಿಸಿ ತಯಾರಾದ ಹೋಳಿಗೆಯನ್ನು ಬೇಯಿಸಿದರೆ, ರುಚಿಕರ, ಆರೋಗ್ಯಕರ ಒಬ್ಬಟ್ಟು ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *