2026ರ ಯುಗಾದಿ ಹಬ್ಬವು ಮಾರ್ಚ್ 19 ರಂದು ಅಮಾವಾಸ್ಯೆಯೊಂದಿಗೆ ಬಂದಿದೆ. ಈ ಅಪರೂಪದ ದಿನದಂದು, ಸೂರ್ಯೋದಯದ ತಿಥಿಯ ಆಧಾರದ ಮೇಲೆ ಆಚರಣೆಗಳನ್ನು ವಿಂಗಡಿಸಲಾಗಿದೆ. ಪಿತೃ ಕಾರ್ಯಗಳನ್ನು ಬೆಳಿಗ್ಗೆ ಮುಗಿಸಿ, ನಂತರ ಯುಗಾದಿ ಸಂಭ್ರಮವನ್ನು ಆಚರಿಸುವ ಬಗ್ಗೆ ಮಾಹಿತಿ ಇಲ್ಲಿದೆ.
ಹೊಸ ವರ್ಷಕ್ಕೆ ಮುನ್ನುಡಿ ಇರುವ ಯುಗಾದಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇದೇ 19ರಂದು ಯುಗಾದಿಯ ಸಂಭ್ರಮ. ಯುಗಾದಿ ಹಬ್ಬವು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಆಚರಿಸಲಾಗುವ ಹಿಂದೂ ಹೊಸ ವರ್ಷವಾಗಿದೆ.

ಆದರೆ ಈ ಬಾರಿ ಇದೇ ದಿನ ಅಮವಾಸ್ಯೆಯೂ ಬಂದಿದೆ. ಯುಗಾದಿಯ ಸಂಭ್ರಮದ ಜೊತೆ ಅಮವಾಸ್ಯೆಯೂ ಸೇರಿಕೊಂಡಿರುವುದು ಅಪರೂಪವೇ. ಫಾಲ್ಗುಣ ಮಾಸದ ಕೊನೆಯ ದಿನ ಅಮಾವಾಸ್ಯೆ, ನಂತರದ ಚೈತ್ರ ಮಾಸದ ಮೊದಲ ದಿನ ಯುಗಾದಿ ಪಾಡ್ಯಮಿ ಈ ಬಾರಿಯ ವಿಶೇಷವಾಗಿದೆ.

ಹೀಗೆ ಎರಡೂ ಒಟ್ಟಿಗೇ ಬಂದರೆ, ಸಾಮಾನ್ಯವಾಗಿ, ಅಮಾವಾಸ್ಯೆಯಂದು ಪಿತೃ ತರ್ಪಣ ನೀಡಿ, ಮರುದಿನ ಪಾಡ್ಯಮಿಯಂದು ಬೇವು-ಬೆಲ್ಲ ಸೇವಿಸಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ.

ಹಾಗಿದ್ದರೆ ಈ ಬಾರಿ ಇದರ ಮುಹೂರ್ತ ಯಾವುದು ಎಂದು ನೋಡುವುದಾದರೆ, ಸಾಮಾನ್ಯವಾಗಿ ಸೂರ್ಯೋದಯದ ಸಮಯದಲ್ಲಿ ಯಾವ ತಿಥಿ ಇರುತ್ತದೆಯೋ ಅದನ್ನೇ ಮುಖ್ಯ ತಿಥಿ ಎಂದು ಕರೆಯುತ್ತಾರೆ. ಸೂರ್ಯೋದಯದ ಸಮಯದ ತಿಥಿಯು ಮುಖ್ಯವಾಗುವುದರಿಂದ, 2026ರ ಯುಗಾದಿ ಆಚರಣೆಯು ಮಾರ್ಚ್ 19 ರಂದು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದೇ ಕಾರಣಕ್ಕೆ, ಮಾರ್ಚ್ 18ನೇ ಸಂಜೆಯಿಂದ ಮತ್ತು 19ನೇ ತಾರೀಖಿನ ಬೆಳಿಗ್ಗೆ 6.30ರ ಒಳಗೆ ಅಮವಾಸ್ಯೆಯ ಪಿತೃ ಕಾರ್ಯಗಳನ್ನೆಲ್ಲಾ ಮುಗಿಸಿಕೊಳ್ಳಬೇಕು. 06.54ರ ಬಳಿಕ ಸಂಪೂರ್ಣವಾಗಿ ಯುಗಾದಿ ಹಬ್ಬದ ಆಚರಣೆ, ಪೂಜೆ, ಪಂಚಾಂಗ ಶ್ರವಣ ಎಲ್ಲವನ್ನೂ ಮಾಡಬಹುದು.

ಯುಗಾದಿ ಹಬ್ಬದ ಹಿಂದಿನ ದಿನವು ಅಮಾವಾಸ್ಯೆಯಾಗಿರುವುದರಿಂದ, ಈ ದಿನದಂದು ಹೆಚ್ಚಿನ ದಾನ-ಧರ್ಮ, ಪಿಂಡದಾನ ಮತ್ತು ತರ್ಪಣ ಕಾರ್ಯಗಳನ್ನು ಮಾಡಲಾಗುತ್ತದೆ, ನಂತರ ಮರುದಿನ ಯುಗಾದಿ ಆಚರಣೆಗಳನ್ನು ನಡೆಸಲಾಗುತ್ತದೆ

Source link
ಈ ಬಾರಿ ಯುಗಾದಿ- ಅಮವಾಸ್ಯೆ ಒಂದೇ ದಿನ: ಪಿತೃ ತರ್ಪಣ, ಹಬ್ಬದ ಆಚರಣೆ ಮುಹೂರ್ತದ ಡಿಟೇಲ್ಸ್ ಇಲ್ಲಿದೆ