
2026ರ ಪರಾಭವನಾಮ ಸಂವತ್ಸರದ ಯುಗಾದಿಯಂದು ಮೀನ ರಾಶಿಯವರ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಅವರು ವಿವರಿಸಿದ್ದಾರೆ. ಈ ರಾಶಿಯವರಿಗೆ ಶನಿ ಸಾಡೇ ಸಾತಿಯ ಗರ್ಭ ಭಾಗ ನಡೆಯುತ್ತಿರುವುದು, ಗುರು ನಾಲ್ಕರಿಂದ ಐದಕ್ಕೆ, ಶನಿ ಒಂದರಲ್ಲಿ, ರಾಹು 12ರಿಂದ 11ರಲ್ಲಿ ಮತ್ತು ಕೇತು ಆರರಿಂದ ಐದರಲ್ಲಿ ಇರುತ್ತಾರೆ. ಆದಾಯ 14 ಮತ್ತು ವ್ಯಯ 7 ಇರಲಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಏಳುಪೇರಾದರೂ ಆರ್ಥಿಕವಾಗಿ ಉತ್ತಮ ಪರಿಸ್ಥಿತಿ ಇರುತ್ತದೆ.
ಸರ್ಕಾರಿ ಉದ್ಯೋಗ, ವ್ಯಾಪಾರ, ಪಾಲುದಾರಿಕೆ ಹಾಗೂ ಉದ್ಯೋಗದಲ್ಲಿ ಶುಭ ಫಲಗಳಿವೆ. ಆದರೆ ಮಕ್ಕಳ ಚಿಂತೆ ಮತ್ತು ಅಪವಾದಗಳ ಕುರಿತು ಜಾಗ್ರತೆಯಾಗಿರಲು ಸಲಹೆಗಳು. ಕಾನೂನು ವಿಷಯಗಳಲ್ಲಿ ಮೋಸ ಹೋಗದಂತೆ ಎಚ್ಚರ ವಹಿಸಬೇಕು. ದೈವಾನುಗ್ರಹಕ್ಕಾಗಿ ದೇವಿಯ ಮೊರೆ ಹೋಗುವುದು ಮತ್ತು ಶ್ರೀರಾಮ ಸ್ತೋತ್ರ ಪಠಿಸುವುದು ಶುಭಕರ. ಮೀನ ರಾಶಿಯವರಿಗೆ ಈ ವರ್ಷ ಶೇ. 65ರಷ್ಟು ಶುಭಫಲಗಳು ದೊರೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಯುಗಾದಿ ನಂತರ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ