ಯುಗಾದಿ ಹಬ್ಬದ ಖರೀದಿಗೆ ಕೆಆರ್​ ಮಾರ್ಕೆಟ್​ಗೆ ಮುಗಿಬಿದ್ದ ಗ್ರಾಹಕರು

ಯುಗಾದಿ ಹಬ್ಬದ ಖರೀದಿಗೆ ಕೆಆರ್​ ಮಾರ್ಕೆಟ್​ಗೆ ಮುಗಿಬಿದ್ದ ಗ್ರಾಹಕರು


ಯುಗಾದಿ ಹಬ್ಬದ ಖರೀದಿಗೆ ಕೆಆರ್ ಮಾರುಕಟ್ಟೆಗೆ ಮುಗಿದ ಗ್ರಾಹಕರು

ಬೆಂಗಳೂರು, ಮಾರ್ಚ್ 19: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಡಗರ ಮನೆ ಮಾಡಿದೆ. ಬೆಂಗಳೂರಿನ ಹೃದಯಭಾಗ ಕೆಆರ್ ಮಾರ್ಕೆಟ್‌ನಲ್ಲಿ ಭಾರಿ ಖರೀದಿ ಭರಾಟೆ ನಡೆದಿದೆ. ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಸಿಲಿಕಾನ್ ಸಿಟಿ ಜನರು ಮಧ್ಯರಾತ್ರಿಯಿಂದಲೇ ಮಾರುಕಟ್ಟೆಗೆ ಧಾವಿಸಿದ್ದಾರೆ. ಕೆ.ಆರ್. ಮಾರುಕಟ್ಟೆಯಲ್ಲಿ ತಾಜಾ ಮತ್ತು ಬಣ್ಣದ ಹೂವುಗಳು ಹೋಲ್ಸೇಲ್ ದರದಲ್ಲಿ ಇರುವುದರಿಂದ ಜನರು ಹೆಚ್ಚಾಗಿ ಇಲ್ಲಿಗೆ ಆಗಮಿಸುತ್ತಾರೆ. ಬೆಂಗಳೂರಿನ ಸುತ್ತಮುತ್ತಲಿನ ರೈತರು ಮತ್ತು ವ್ಯಾಪಾರಿಗಳು ನೇರವಾಗಿ ಇಲ್ಲಿಗೆ ಬಂದು ತಮ್ಮ ಹೂವಿನ ಮಾರಾಟ ಮಾಡುತ್ತಾರೆ. ಇದು ಸ್ಥಳೀಯ ಸಣ್ಣ ಮಾರುಕಟ್ಟೆಗೆ ಸ್ವಲ್ಪ ಕಡಿಮೆ ದರದಲ್ಲಿ ಹೂವುಗಳು ಸಿಗಲು ಕಾರಣ. ಹಬ್ಬದ ಜೊತೆಗೆ ದರ ಕೊಂಚ ಏರಿಕೆಯಾಗಿದ್ದರೂ, ಸಾಮಾನ್ಯ ಜನಸಾಗರವೇ ಹರಿಬಂದಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *