Headlines

ಮದುವೆಗೆ ರೆಡಿಯಾದ ಉಗಂ ಮಂಜು, ಅರಿಶಿನ ಶಾಸ್ತ್ರದ ಫೋಟೋ ರಿಲೀಸ್‌; ಹಾರೈಸಲು ಬರ್ತಾನಾ ಪಳಾರ್‌ ಗಿಲ್ಲಿ?

ಮದುವೆಗೆ ರೆಡಿಯಾದ ಉಗಂ ಮಂಜು, ಅರಿಶಿನ ಶಾಸ್ತ್ರದ ಫೋಟೋ ರಿಲೀಸ್‌; ಹಾರೈಸಲು ಬರ್ತಾನಾ ಪಳಾರ್‌ ಗಿಲ್ಲಿ?

ಮದುವೆಗೆ ರೆಡಿಯಾದ ಉಗಂ ಮಂಜು, ಅರಿಶಿನ ಶಾಸ್ತ್ರದ ಫೋಟೋ ರಿಲೀಸ್‌; ಹಾರೈಸಲು ಬರ್ತಾನಾ ಪಳಾರ್‌ ಗಿಲ್ಲಿ?

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಹಾಗೂ ನಟ ಉಗ್ರಂ ಮಂಜು, ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿರುವ ಸಾಯಿ ಸಂಧ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜನವರಿ 23 ರಂದು ಧರ್ಮಸ್ಥಳದಲ್ಲಿ ನಡೆಯಲಿರುವ ವಿವಾಹಕ್ಕೂ ಮುನ್ನ, ಅವರ ಮನೆಯಲ್ಲಿ ಅರಿಶಿಣ ಶಾಸ್ತ್ರ ಸರಳವಾಗಿ ನೆರವೇರಿದೆ.

ಕನ್ನಡ ಚಿತ್ರರಂಗದ ಜನಪ್ರಿಯ ಪೋಷಕ ನಟ ಮತ್ತು ಬಿಗ್ ಬಾಸ್ ಸೀಸನ್ 11ರ ಖಡಕ್ ಸ್ಪರ್ಧಿ ಉಗ್ರಂ ಮಂಜು ಅವರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಜನವರಿ 23ರಂದು ನಡೆಯಲಿರುವ ವಿವಾಹ ಮಹೋತ್ಸವಕ್ಕೂ ಮುನ್ನ ಮಂಜು ಅವರ ಮನೆಯಲ್ಲಿ ಅರಿಶಿಣ ಶಾಸ್ತ್ರ ಅತ್ಯಂತ ಸರಳವಾಗಿ ಮತ್ತು ಸಂಪ್ರದಾಯಬದ್ಧವಾಗಿ ನೆರವೇರಿದೆ.

ಉಗ್ರಂ ಮಂಜು ಅವರ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು, ಆಪ್ತರು ಹಾಗೂ ಆತ್ಮೀಯ ಗೆಳೆಯರು ಮಾತ್ರ ಭಾಗವಹಿಸಿದ್ದರು.

ಅರಿಶಿಣ ಹಚ್ಚಿಕೊಂಡು ಮಧುಮಗನ ಕಳೆಯಲ್ಲಿ ಮಂಜು ಕಂಗೊಳಿಸುತ್ತಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಉಗ್ರಂ ಮಂಜು ಅವರು ಸಾಯಿ ಸಂಧ್ಯಾ ಎಂಬುವರ ಕೈ ಹಿಡಿಯುತ್ತಿದ್ದಾರೆ. ಸಂಧ್ಯಾ ಅವರು ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಈ ಜೋಡಿಯ ನಿಶ್ಚಿತಾರ್ಥ ವೈಭವದಿಂದ ನಡೆದಿತ್ತು.

ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಉಗ್ರಂ ಮಂಜು ಅವರ ಮದುವೆ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯೊಳಗೆ ಮಂಜು ಅವರ ಗೆಳೆಯರು ಆಗಮಿಸಿ, ಅಲ್ಲಿಯೇ ಗ್ರ್ಯಾಂಡ್ ಆಗಿ ಬ್ಯಾಚುಲರ್ ಪಾರ್ಟಿ ಮಾಡಿಸಿದ್ದು ವಿಶೇಷವಾಗಿತ್ತು.

ಈ ವೇಳೆ ಬಿಗ್‌ಬಾಸ್‌ ವಿನ್ನರ್‌ ಗಿಲ್ಲಿ ನಟ, ಉಗ್ರಂ ಮಂಜು ಅವರನ್ನು ಸತಾಯಿಸಿದ್ದ. ಮದುವೆಯ ವಿಚಾರವಾಗಿ ಆತ ಹಾಸ್ಯ ಮಾಡಿದ್ದು ಮಂಜುಗೆ ಕೂಡ ಸಿಟ್ಟು ತರಿಸಿತ್ತು.

ಕೊನೆಗೆ ಉಗ್ರಂ ಮಂಜು ಭಾವಿ ಪತ್ನಿ ಸಂಧ್ಯಾ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು ಈಗ ಗಿಲ್ಲಿ ನಟ ಇವರ ಮದುವೆ ಅಥವಾ ಆರತಕ್ಷತೆಗೆ ಬರುತ್ತಾರಾ ಎನ್ನುವ ಪ್ರಶ್ನೆಯೂ ಎದುರಾಗಿದೆ.

ಧರ್ಮಸ್ಥಳದಲ್ಲಿ ಜನವರಿ 23 ರಂದು ಮದುವೆ ಸರಳವಾಗಿ ನಡೆಯಲಿದ್ದು, ಬಳಿಕ ಬೆಂಗಳೂರಿನಲ್ಲಿ ಅದ್ದೂರಿಯಾಗಿ ರಿಸೆಪ್ಶನ್‌ ನಡೆಯಲಿದೆ ಎಂದು ವರದಿಯಾಗಿದೆ.

ಮದುವೆಯ ನಂತರ ಬೆಂಗಳೂರಿನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ಧೂರಿ ಆರತಕ್ಷತೆ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

Source link

Leave a Reply

Your email address will not be published. Required fields are marked *