Headlines

‘ಉಳಿದವರು ಕಂಡಂತೆ’ ಡೆಮೋಕ್ರಸಿ ಈಗೇನು ಮಾಡ್ತಿದ್ದಾರೆ ನೋಡಿ

‘ಉಳಿದವರು ಕಂಡಂತೆ’ ಡೆಮೋಕ್ರಸಿ ಈಗೇನು ಮಾಡ್ತಿದ್ದಾರೆ ನೋಡಿ


ರಕ್ಷಿತ್ ಶೆಟ್ಟಿ ನಿರ್ದೇಶನದ ‘ಉಳಿದವರು ಕಂಡಂತೆ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾ ರಿಲೀಸ್ ಆಗಿದ್ದು 2014ರಲ್ಲಿ. ರಕ್ಷಿತ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಬರುವ ಪ್ರತಿ ಪಾತ್ರವೂ ಗಮನ ಸೆಳೆಯಿತು ಎಂದರೂ ತಪ್ಪಾಗಲಿಕ್ಕಿಲ್ಲ. ಈ ಚಿತ್ರದಲ್ಲಿ ಬರುವ ಡೆಮೋಕ್ರಸಿ ಪಾತ್ರ ಮೆಚ್ಚುಗೆ ಪಡೆಯಿತು. ಈ ಪಾತ್ರ ಮಾಡಿದ ಸೋಹನ್ ಶೆಟ್ಟಿ ಈಗ ಏನು ಮಾಡುತ್ತಿದ್ದಾರೆ.

‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ಡೆಮೋಕ್ರಸಿ ಹೆಸರಿನ ಪಾತ್ರ ಭರ್ಜರಿ ಮೆಚ್ಚುಗೆ ಪಡೆಯಿತು. ಅವಿನಾಶ್ ಕಾಮತ್ ಅವರು ಸೋಹನ್ ಶೆಟ್ಟಿಯನ್ನು ಮಾತನಾಡಿಸಿದ್ದಾರೆ. ಈ ಸಿನಿಮಾ ಮಾಡುವಾಗ 12 ವರ್ಷ. ಅವರು ಇಂಜಿನಿಯರಿಂಗ್ ಓದಿ, ಬೆಂಗಳೂರಿನಲ್ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಅವಕಾಶ ಸಿಕ್ಕರೆ ಮತ್ತೆ ನಟಿಸೋ ಆಸಕ್ತಿ ಅವರಿಗೆ ಇದೆ.

ಸೋಹನ್ ಗೆ ಓದೋಕೆ ಇಷ್ಟ ಇರಲಿಲ್ಲ. ಈ ಕಾರಣಕ್ಕೆ ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ನಟಿಸೋಕೆ ಆಡಿಷನ್ ಆಗ್ತಿದೆ. ಆಡಿಷನ್ ನಲ್ಲಿ ಅವರು ಆಯ್ಕೆ ಆದರು ಮತ್ತು ಸಿನಿಮಾ ಮಾಡುವ ಅವಕಾಶ ಸಿಕ್ಕಿತು. ಆ ಬಳಿಕ ಸೋಹನ್ ಅವರಿಗೆ ಸಾಕಷ್ಟು ಆಫರ್‌ಗಳು ಬಂದಿವೆ. ಈ ಮೇಲಕ್ಕೆ, ‘ಸಹಿಪ್ರಾ ಶಾಲೆ ಕಾಸರಗೋಡು’, ‘ಹಂಬಲ್ ಪೊಲಿಟಿಶಿಯನ್ ನೋಗರಾಜ್’ ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿದರು.

ಇದನ್ನೂ ಓದಿ

ಆ ಬಳಿಕ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಅವರ ತಾಯಿ ಹೇಳಿದರು ಮತ್ತು ಸೋಹನ್ ಜೊತೆಗೆ ಮಾಡಿದರು. ಈ ಕಾರಣಕ್ಕೆ ಅವರಿಗೆ ನಟಿಸೋಕೆ ಆಗಲೇ ಇಲ್ಲ. ಈಗ ಅವರು ನಟನೆಯಿಂದ ದೂರ ಇದ್ದಾರೆ. ಹಾಗಂತ ಬಂದ ಅವಕಾಶಗಳಿಗೆ ಅವರು ಬೇಡ ಎನ್ನುತ್ತಿಲ್ಲ. ಸಿಕ್ಕ ಅವಕಾಶಗಳನ್ನು ಅವರು ಒಪ್ಪಿ ನಟಿಸಲು ರೆಡಿ ಇದ್ದಾರೆ.

ಇದನ್ನೂ ಓದಿ: ರಿಷಬ್ ನಟನೆಯ ‘ಕಾಂತಾರ: ಅಧ್ಯಾಯ 1’ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಅವರು ಈಗ ‘ರಿಚರ್ಡ್ ಆಯಂಟನಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ‘ಉಳಿದವರು ಕಂಡಂತೆ’ ಸಿನಿಮಾದ ಸೀಕ್ವೆಲ್ ಇದು. ಹೀಗಾಗಿ, ಈ ಚಿತ್ರದಲ್ಲಿ ಡೆಮೊಕ್ರಸಿ ಪಾತ್ರ ಕೂಡ ಇರುತ್ತದೆ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ರಕ್ಷಿತ್ ಕಡೆಯಿಂದಲೇ ಉತ್ತರ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *