ನವದೆಹಲಿ, ಫೆಬ್ರುವರಿ 23: ಹತ್ತು ಕೋಟಿ ರೂಪಾಯಿ ಅಧಿಕ ಮೌಲ್ಯದ ಅತಿ ಐಷಾರಾಮಿ ಮನೆಗಳಿಗೆ (ಅಲ್ಟ್ರಾ-ಐಷಾರಾಮಿ ಮನೆಗಳು) ದೇಶದಲ್ಲೇ ಅತಿದೊಡ್ಡ ಮಾರುಕಟ್ಟೆ ಎಂದರೆ ಬೆಂಗಳೂರು, ಮುಂಬೈ, ದೆಹಲಿ ಮುಂತಾದ ನಗರಗಳ ಹೆಸರು ಮೊದಲು ಕಾಣಿಸಿಕೊಳ್ಳುತ್ತದೆ. ಆದರೆ, 2025ರಲ್ಲಿ ಅಲ್ಟ್ರಾ ಲಕ್ಷುರಿ ಮನೆಗಳಿಗೆ ದೇಶದಲ್ಲೇ ಅತಿದೊಡ್ಡ ಮಾರುಕಟ್ಟೆ ಎನಿಸಿದ್ದು ಗುರುಗ್ರಾಮ ಅಂತ. ಇಂಡಿಯಾ ಸೋತೆಬೈಸ್ ಇಂಟರ್ನ್ಯಾಷನಲ್ ರಿಯಾಲ್ಟಿ ಹಾಗೂ ಸಿಆರ್‌ಇ ಮ್ಯಾಟ್ರಿಕ್ಸ್ ನ ಇತ್ತೀಚಿನ ಹೈ ಎಂಡ್ ಲಕ್ಸುರಿ ಹೌಸಿಂಗ್ ರಿಪೋರ್ಟ್ ಪ್ರಕಾರ 10 ಕೋಟಿ ರೂಗೂ ಅಧಿಕ ಮೌಲ್ಯದ ಮನೆಗಳು ಅತಿಹೆಚ್ಚು ಸೇಲ್ ಆಗಿದ್ದು ಗುರುಗ್ರಾಮದಲ್ಲಿ.
ದೆಹಲಿ ಎಡಬದಿಯಲ್ಲಿರುವ, ಹಾಗೂ ಹರಿಯಾಣ ರಾಜ್ಯಕ್ಕೆ ಸೇರಿದ ಗುರುಗ್ರಾಮದಲ್ಲಿ 2025ರ ಕ್ಯಾಲೆಂಡರ್‌ನಲ್ಲಿ 24,120 ಕೋಟಿ ರೂ ಮೊತ್ತದ ಅಲ್ಟ್ರಾ ಲಕ್ಷುರಿ ಮನೆಗಳು ಮಾರಾಟವಾಗಿವೆ. ಇದು ದೇಶದಲ್ಲೇ ಗರಿಷ್ಠ.
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಅತಿಯಾಗಿ ಏರಿದ್ದು ಯಾಕೆಂದು ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್
ಈ ವರದಿ ಪ್ರಕಾರ, 2025ರಲ್ಲಿ ಗುರುಗ್ರಾಮದಲ್ಲಿ ಮಾರಾಟವಾದ 10 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆಗಳ ಸಂಖ್ಯೆ 1,494. ಕೇವಲ ಎರಡು ವರ್ಷಗಳ ಹಿಂದೆ (2023) ಇಲ್ಲಿ ಮಾರಾಟವಾದ ಇಂಥ ಮನೆಗಳ ಸಂಖ್ಯೆ ಕೇವಲ 155. ಈಗ ಇಷ್ಟು ಸಂಖ್ಯೆಯಲ್ಲಿ ಮಾರಾಟದ ಮೊತ್ತ ಆಗಿರುವುದು ಸೋಜಿಗದ ಸಂಗತಿ. ಎರಡೇ ಸುಮಾರು ಹತ್ತು ಪಟ್ಟು ಹೆಚ್ಚು ಮನೆಗಳು ಆಗಿವೆ.
ಐಷಾರಾಮಿ ಮನೆಗಳು 2025ರಲ್ಲಿ ಅತಿಹೆಚ್ಚು ಮಾರಾಟ ಕಂಡ ನಗರಗಳು (10 ಕೋಟಿ ರೂಗಿಂತ ಹೆಚ್ಚು)
- ಗುರುಗ್ರಾಮ: 24,120 ಕೋಟಿ ರೂ
- ಮುಂಬೈ: 21,902 ಕೋಟಿ ರೂ
- ನೋಯ್ಡಾ: 9,358 ಕೋಟಿ ರೂ
- ಹೈದರಾಬಾದ್: 8,140 ಕೋಟಿ ರೂ
- ಬೆಂಗಳೂರು: 2,319 ಕೋಟಿ ರೂ
ಇದನ್ನೂ ಓದಿ: ಐಡಿಎಫ್ಸಿ ಫಸ್ಟ್ ಬ್ಯಾಂಕ್‌ನಲ್ಲಿ ನೂರಾರು ಕೋಟಿ ರೂ ಲೂಟಿ; ಹೂಡಿಕೆದಾರರಿಗೆ 14,000 ಕೋಟಿ ರೂ ನಷ್ಟ; ಏನಿದು ಹಗರಣ?
ಗುರುಗ್ರಾಮ ಕಳೆದ ಎರಡು ವರ್ಷದಲ್ಲಿ ಐಷಾರಾಮಿ ಮನೆಗಳಲ್ಲಿ ದೊಡ್ಡ ಮಾರುಕಟ್ಟೆಯಾಗಿ ಬೆಳೆದಿರುವುದು ಹೇಗೆ? ಗುರುಗ್ರಾಮದಲ್ಲಿ ಲಕ್ಷುರಿ ಕಾರಿಡಾರ್‌ಗಳು ಹೆಚ್ಚುತ್ತಿವೆ. ದ್ವಾರಕಾ ಎಕ್ಸ್‌ಪ್ರೆಸ್‌ವೇ, ಗಾಲ್ಫ್ ಕೋರ್ಸ್ ರೋಡ್, ಗಾಲ್ಫ್ ಕೋರ್ಸ್ ಎಕ್ಸ್‌ಟೆನ್ಷನ್ ರೋಡ್ ಇತ್ಯಾದಿ ಸ್ಥಳಗಳು, ಮೂಲಸೌಕರ್ಯ ಅಭಿವೃದ್ಧಿ, ವಿವಿಧ ಪ್ರದೇಶಗಳ ನಡುವೆ ಸಂಪರ್ಕ ಇತ್ಯಾದಿಗಳಿಂದ ಶ್ರೀಮಂತ ಗುರುಗ್ರಾಮದಲ್ಲಿ ಮನೆ ಮಾಡಿಕೊಂಡಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ